ಚಿತ್ರಮಂದಿರಗಳಲ್ಲಿ ರಾಷ್ಟ್ರಗೀತೆ ಕಡ್ಡಾಯದ ಮಾರ್ಗಸೂಚಿಗಳನ್ನು ಹೊರಡಿಸಿದ ಸುಪ್ರೀಂಕೋರ್ಟ್

ಈ ಸುದ್ದಿಯನ್ನು ಶೇರ್ ಮಾಡಿ

National-Antheme

ಬೆಂಗಳೂರು, ಜ.25- ಚಲನಚಿತ್ರ ಮಂದಿರ, ಮಲ್ಟಿಪ್ಲೆಕ್ಸ್ ಹಾಗೂ ಸಿನಿಮಾ ಪ್ರದರ್ಶಿಸುವ ಸ್ಥಳಗಳಲ್ಲಿ ರಾಷ್ಟ್ರಗೀತೆ ಹಾಡುವುದನ್ನು ಕಡ್ಡಾಯಗೊಳಿಸಿರುವ ಸರ್ವೋಚ್ಛ ನ್ಯಾಯಾಲಯವು ಈ ಬಗ್ಗೆ ಕೆಲವು ಮಾರ್ಗಸೂಚಿಗಳನ್ನು ಹೊರಡಿಸಿದೆ. ರಾಷ್ಟ್ರಗೀತೆಯನ್ನು ಯಾವುದೇ ವಾಣಿಜ್ಯ ಲಾಭ ಅಥವಾ ಇನ್ಯಾವುದೇ ಲಾಭದ ಉದ್ದೇಶಕ್ಕೆ ಬಳಸಿಕೊಳ್ಳುವಂತಿಲ್ಲ. ರಾಷ್ಟ್ರಗೀತೆಯ ನಾಟಕೀಯ ರೂಪವನ್ನು ಪ್ರದರ್ಶಿಸುವಂತಿಲ್ಲ ಹಾಗೂ ಯಾವುದೇ ವೈವಿಧ್ಯಮಯ ಕಾರ್ಯಕ್ರಮದ ಭಾಗವಾಗಿ ರಾಷ್ಟ್ರಗೀತೆಯನ್ನು ಬಳಸಿಕೊಳ್ಳುವಂತಿಲ್ಲ. ರಾಷ್ಟ್ರಗೀತೆ ಹಾಡುವಾಗ ನುಡಿಸುವಾಗ ಸ್ಥಳದಲ್ಲಿರುವ ಪ್ರತಿಯೊಬ್ಬರೂ ಗೌರವ ಸೂಚಿಸಬೇಕು. ಆದ್ದರಿಂದ ರಾಷ್ಟ್ರಗೀತೆಯ ನಾಟಕೀಯ ಪ್ರದರ್ಶನ ಸ್ವೀಕಾರಾರ್ಹವಲ್ಲ.

ರಾಷ್ಟ್ರಗೀತೆಯನ್ನು ಅಥವಾ ಅದರ ಭಾಗವನ್ನು ಯಾವುದೇ ವಸ್ತುವಿನ ಮೇಲೆ ಮುದ್ರಿಸುವಂತಿಲ್ಲ. ರಾಷ್ಟ್ರಗೀತೆಯ ಘನತೆಗೆ ಅಪಚಾರವಾಗುವಂತೆ ಅಥವಾ ಅಗೌರವ ತರುವಂತ ರೀತಿಯಲ್ಲಿ ಪ್ರದರ್ಶಿಸುವಂತಿಲ್ಲ. ರಾಷ್ಟ್ರಗೀತೆ ಹಾಡುವಾಗ ಪಾಲಿಸುವ ಶಿಷ್ಟಾಚಾರದ ಮೂಲವು ರಾಷ್ಟ್ರೀಯ ಅಸ್ಮಿತೆ, ಏಕತೆ ಮತ್ತು ಸಾಂವಿಧಾನಿಕ ದೇಶಭಕ್ತಿಯಲ್ಲಡಗಿದೆ. ರಾಜ್ಯದಲ್ಲಿರುವ ಎಲ್ಲ ಚಿತ್ರಮಂದಿರಗಳಲ್ಲಿ ರಾಷ್ಟ್ರಗೀತೆ ನುಡಿಸುವ ಸಂದರ್ಭದಲ್ಲಿ ಚಿತ್ರಮಂದಿರದಲ್ಲಿರುವ ಎಲ್ಲರೂ ಎದ್ದು ನಿಂತು ಗೌರವ ಸೂಚಿಸಬೇಕು.

ರಾಷ್ಟ್ರಗೀತೆ ಹಾಡುವ ಸಂದರ್ಭದಲ್ಲಿ ಚಿತ್ರಮಂದಿರದ ಎಲ್ಲ ಬಾಗಿಲುಗಳನ್ನು ಮುಚ್ಚಿರಬೇಕು. ಈ ಅವಧಿಯಲ್ಲಿ ಯಾವುದೇ ಅಡೆತಡೆಗಳುಂಟಾಗದಂತೆ ಈ ಕ್ರಮ ಕೈಗೊಳ್ಳಬೇಕು. ರಾಷ್ಟ್ರಗೀತೆ ಮುಗಿದ ಮೇಲೆ ಬಾಗಿಲು ತೆರೆಯಬೇಕು. ಚಿತ್ರಮಂದಿರಗಳಲ್ಲಿ ರಾಷ್ಟ್ರಗೀತೆ ಹಾಡುವ ಸಂದರ್ಭದಲ್ಲಿ ಪರದೆಯಲ್ಲಿ ರಾಷ್ಟ್ರಧ್ವಜವನ್ನು ಪ್ರದರ್ಶಿಸಬೇಕು. ಯಾವುದೇ ಕಾರಣಕ್ಕೆ ರಾಷ್ಟ್ರಗೀತೆಯ ಸಂಕ್ಷಿಪ್ತ ರೂಪವನ್ನು ಪ್ರಸ್ತುತಪಡಿಸಬಾರದು ಎಂದು ರಾಜ್ಯ ಒಳಾಡಳಿತ ಇಲಾಖೆ (ಸೆರಮನೆ ಮತ್ತು ಸಿನಿಮಾ) ಪ್ರಕಟಣೆ ತಿಳಿಸಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin