ಯು.ಆರ್.ರಾವ್, ಸುಕ್ರಿ ಬೊಮ್ಮಗೌಡ ಸೇರಿ ರಾಜ್ಯದ 7 ಜನ ಸಾಧಕರಿಗೆ ಪದ್ಮ ಪ್ರಶಸ್ತಿ

ಈ ಸುದ್ದಿಯನ್ನು ಶೇರ್ ಮಾಡಿ

Padma-Awards

ನವದೆಹಲಿ ಜ. 25: ಪ್ರಸಕ್ತ ಸಾಲಿನ ಪದ್ಮಪ್ರಶಸ್ತಿ ಪುರಸ್ಕೃತರ ಪಟ್ಟಿ ಪ್ರಕಟವಾಗಿದ್ದು ಕರ್ನಾಟಕದ ಹಾಲಕ್ಕಿ ಒಕ್ಕಲಿಗ ಜನಾಂಗದ ‘ಜಾನಪದ ಕೋಗಿಲೆ ‘ ಸುಕ್ರಿ ಬೊಮ್ಮಗೌಡ ಅವರು ಸೇರಿದಂತೆ 89 ಮಂದಿ ಸಾಧಕರಿಗೆ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ.  ರಾಜ್ಯದ ಒಟ್ಟು 7 ಸಾಧಕರು ಸೇರಿದಂತೆ ದೇಶದ 89 ಸಾಧಕರನ್ನು ಪದ್ಮ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. 7 ಜನರಿಗೆ ಪದ್ಮ ವಿಭೂಷಣ, 7 ಮಂದಿಗೆ ಪದ್ಮ ಭೂಷಣ ಹಾಗೂ 75 ಜನ ಪದ್ಮಶ್ರೀ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

75 ವರ್ಷದ ಸುಕ್ರಿ ಬೊಮ್ಮಗೌಡ ಅವರು ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯವರಾಗಿದ್ದು, ಹಾಲಕ್ಕಿ ಜನಾಂಗದವರಾಗಿದ್ದಾರೆ. ಉತ್ತರಕನ್ನಡ ಜಿಲ್ಲೆಯ ಹಾಲಕ್ಕಿ ಒಕ್ಕಲಿಗ ಜನಾಂಗದ ಮಹಿಳೆಯರ ಪರ ದನಿ ಎತ್ತಿದವರು. ಹಾಲಕ್ಕಿ ಒಕ್ಕಲಿಗರನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕೆಂದು ಆಗ್ರಹಿಸಿದರು. ಅರಣ್ಯ ಅತಿಕ್ರಮಣ ಸಕ್ರಮ ಹೋರಾಟ, ಸಾರಾಯಿ ವಿರೋಧಿ ಹೋರಾಟದಲ್ಲಿ ಪಾಲ್ಗೊಂಡು ಜನ ಜಾಗೃತಿ ಮೂಡಿಸಿದ್ದಾರೆ.   ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದದಲ್ಲಿ ಅಸಾಧಾರಣ ಕೊಡುಗೆ ನೀಡಿದ ರಾಜ್ಯದ ಪ್ರೊ.ಉಡುಪಿ ರಾಮಚಂದ್ರರಾವ್ (ಯು.ಆರ್.ರಾವ್) ಅವರಿಗೆ ‘ಪದ್ಮವಿಭೂಷಣ’ ಸಂದಿದೆ.

ಖ್ಯಾತ ಕ್ರಿಕೆಟ್ ಪಟು ಮಹೇಂದ್ರ ಸಿಂಗ್ ಧೋನಿ, ಒಲಿಂಪಿಕ್ ಪದಕ ವಿಜೇತರಾದ ಪಿ.ವಿ.ಸಿಂಧು, ಸಾಕ್ಷಿ ಮಲ್ಲಿಕ್, ಕೋಚ್ ಪುಲ್ಲೇಲ ಗೋಪಿಚಂದ್, ಸಾಮಾಜಿಕ ಕಾರ್ಯಕರ್ತ ಅಲೋಕ್ ಸಾಗರ್ ಸೇರಿದಂತೆ 89 ಮಂದಿಗೆ ಪ್ರತಿಷ್ಠಿತ ಪದ್ಮ ಪ್ರಶಸ್ತಿಗಳು ಲಭಿಸಲಿದೆ.

ಆಯ್ಕೆಯಾಗಿರುವ ಕನ್ನಡಿಗರು:

ಪದ್ಮ ವಿಭೂಷಣ ಪ್ರಶಸ್ತಿ : ಯು.ಆರ್.ರಾವ್

ಪದ್ಮ ಶ್ರೀ ಪ್ರಶಸ್ತಿ :
ಪ್ರೊ. ಜಿ.ವೆಂಕಟಸುಬ್ಬಯ್ಯ- ಸಾಹಿತ್ಯ
ಭಾರತಿ ವಿಷ್ಣುವರ್ಧನ್- ಕಲೆ ಮತ್ತು ಸಿನಿಮಾ
ಸುಕ್ರಿ ಬೊಮ್ಮಗೌಡ -ಕಲೆ ಮತ್ತು ಸಂಗೀತ
ಶೇಖರ್ ನಾಯ್ಕ್ – ಕ್ರೀಡೆ
ವಿಕಾಸ್ ಗೌಡ – ಕ್ರೀಡೆ
ಗಿರೀಶ್ ಭಾರದ್ವಾಜ್- ಸಮಾಜ ಸೇವೆ

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin