ಗೋಡೆ ನಿರ್ಮಾಣ ವಿವಾದ : ಟ್ರಂಪ್ ಭೇಟಿ ರದ್ದುಗೊಳಿಸಿದ ಮೆಕ್ಸಿಕೋ ಅಧ್ಯಕ್ಷ

ಈ ಸುದ್ದಿಯನ್ನು ಶೇರ್ ಮಾಡಿ

Trump-Mexico

ಮೆಕ್ಸಿಕೊ ಸಿಟಿ/ವಾಷಿಂಗ್ಟನ್, ಜ.27-ಅಮೆರಿಕ ಮತ್ತು ಮೆಕ್ಸಿಕೋ ಗಡಿಯಲ್ಲಿ ಗೋಡೆ ನಿರ್ಮಾಣ ಕಾರ್ಯಕ್ಕೆ ಮುಂದಾಗಿರುವ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕ್ರಮವನ್ನು ಮೆಕ್ಸಿಕೋ ಸಹವರ್ತಿ ಎನ್ರಿಕ್ ಪೆನಾ ನೀಟೋ ಖಂಡಿಸಿದ್ದಾರೆ. ಟ್ರಂಪ್ ಜೊತೆ ಮುಂದಿನ ಮಂಗಳವಾರ ನಿಗದಿಯಾಗಿದ್ದ ಭೇಟಿಯನ್ನು ಎನ್ರಿಕ್ ಇದೇ ಕಾರಣಕ್ಕಾಗಿ ರದ್ದುಗೊಳಿಸಿದ್ದಾರೆ. ಉಭಯ ದೇಶಗಳ ಗಡಿಯಲ್ಲಿ ಗೋಡೆ ನಿರ್ಮಿಸುವ ಟ್ರಂಪ್ ಯೋಜನೆ ಕುರಿತು ಉದ್ವಿಗ್ನತೆ ಮುಂದುವರಿದಿರುವ ಹಿನ್ನೆಲೆಯಲ್ಲಿ ಎನ್ರಿಕ್ ಈ ನಿರ್ಧಾರ ಕೈಗೊಂಡಿದ್ದಾರೆ. ಟ್ರಂಪ್ ಜೊತೆ ಮಂಗಳವಾರ ನಿಗದಿಯಾಗಿದ್ದ ಸಭೆಗೆ ನಾನು ಬರುತ್ತಿಲ್ಲ ಎಂದು ಶ್ವೇತಭವನಕ್ಕೆ ತಿಳಿಸಿದ್ದೇನೆ ಎಂದು ಮೆಕ್ಸಿಕೊ ಅಧ್ಯಕ್ಷರು ಟ್ವೀಟ್‍ನಲ್ಲಿ ತಿಳಿಸಿದ್ದಾರೆ.

ಗೋಡೆ ನಿರ್ಮಾಣಕ್ಕೆ ಮಕ್ಸಿಕೊ ಹಣ ನೀಡದಿದ್ದರೆ ನನ್ನೊಂದಿಗೆ ಮಂಗಳವಾರ ನಿಗದಿಯಾಗಿರುವ ಭೇಟಿಯನ್ನು ಎನ್ರಿಕೆ ಕೈಬಿಡುವುದೇ ಒಳ್ಳೆಯದು ಎಂದು ಟ್ರಂಪ್ ಇದಕ್ಕೂ ಮುನ್ನ ಟ್ವೀಟ್ ಮಾಡಿದ್ದರು.  ಗಡಿ ಭಾಗದಲ್ಲಿ ಗೋಡೆ ನಿರ್ಮಾಣಕ್ಕೆ ಯಾವುದೇ ಕಾರಣಕ್ಕೂ ಹಣ ನೀಡುವುದಿಲ್ಲ ಎಂದು ಮೆಕ್ಸಿಕೋ ಅಧ್ಯಕ್ಷರು ಬುಧವಾರ ಸ್ಪಷ್ಟಪಡಿಸಿದ್ದರು.

ಟ್ರಂಪ್ ಹೇಳಿಕೆ :

ಪರಸ್ಪರ ಸಮ್ಮತಿಯಿಂದಲೇ ಈ ಭೇಟಿಯನ್ನು ರದ್ದುಗೊಳಿಸಿರುವುದಾಗಿ ಡೊನಾಲ್ಡ್ ಟ್ರಂಪ್ ಸ್ಪಷ್ಟಪಡಿಸಿದ್ದಾರೆ. ವಾಷಿಂಗ್ಟನ್‍ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಈ ಕುರಿತು ಹೇಳಿಕೆ ನೀಡಿರುವ ಅವರು, ಅಮೆರಿಕವನ್ನು ಮೆಕ್ಸಿಕೊ ಗೌರವಿಸದಿದ್ದರೆ ಈ ಸಭೆ ನಡೆಯುವುದರಲ್ಲಿ ಅರ್ಥವಿಲ್ಲ. ಹೀಗಾಗಿ ಮುಂದಿನ ವಾರ ನಿಗದಿಯಾಗಿದ್ದ ಸಭೆಯನ್ನು ಪರಸ್ಪರ ಒಪ್ಪಿಗೆ ಮೇಲೆಯೇ ರದ್ದುಗೊಳಿಸಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin