ದೆಹಲಿಯಲ್ಲಿ ಸುರಿಯಿತು ಶತಮಾನದ ಗರಿಷ್ಠ ಮಳೆ..!

ಈ ಸುದ್ದಿಯನ್ನು ಶೇರ್ ಮಾಡಿ

Delhi-Rain--01

ನವದೆಹಲಿ, ಜ.27-ದೇಶದ 68ನೇ ಗಣರಾಜೋತ್ಸವದ ದಿನವಾದ ನಿನ್ನೆ ರಾಜಧಾನಿ ನವದೆಹಲಿಯಲ್ಲಿ ಶತಮಾನದ ದಾಖಲೆ ಮಳೆ ಸುರಿದಿದೆ. ಗುರುವಾರ 24 ಮಿ.ಮೀ. ಧಾರಕಾರ ಮಳೆಯಾಗಿದೆ. ಇದು ಜನವರಿ ತಿಂಗಳು ಸುರಿದ ಶತಮಾನದ ಗರಿಷ್ಠ ವರ್ಷಧಾರೆಯಾಗಿದ್ದು, ಹಿಂದಿನ ದಾಖಲೆ ಕೊಚ್ಚಿ ಹೋಗುವಂತೆ ಮಾಡಿದೆ. ಬೆಳಗ್ಗೆ 8.30 ರಿಂದ ಸಂಜೆ 5.30ರವರೆಗೆ ಸಫ್ದರ್‍ಜಂಗ್‍ನಲ್ಲಿ 23.7 ಮಿ.ಮೀ. ದಾಖಲೆ ಮಳೆಯಾಗಿದೆ. ದೆಹಲಿಯಲ್ಲಿ ಅತಿ ಹೆಚ್ಚು ಮಳೆ ಸುರಿದ ಹೊಸ ದಾಖಲೆ ಇದಾಗಿದೆ. ಈ ಹಿಂದೆ 2013ರ ಜನವರಿ 18ರಂದು 21 ಮಿ.ಮೀ. ಗರಿಷ್ಠ ಪ್ರಮಾಣದ ಮಳೆಯಾಗಿತ್ತು. ಅಚ್ಚರಿಯ ಸಂಗತಿ ಎಂದರೆ ಗಣರಾಜೋತ್ಸವದ ಪರೇಡ್ ನಡೆಯುತ್ತಿದ್ದ ರಾಜಪಥ್ ಮಾರ್ಗದಲ್ಲಿ ಮಳೆ ಸುರಿದಿಲ್ಲ. ಆದರೆ ಪಥಸಂಚಲನ ಮುಗಿಯುತ್ತಿದ್ದಂತೆ ಭಾರೀ ಮಳೆಯಾಗಿದೆ.

ಇದೇ ವೇಳೆ ಉತ್ತರ ಭಾರತದಲ್ಲೂ ಭಾರೀ ಮಳೆಯಾಗಿದೆ. ಜಮ್ಮು ಮತ್ತು ಕಾಶ್ಮೀರ, ಹಿಮಾಚಲ ಪ್ರದೇಶ, ಉತ್ತರಾಖಂಡ್‍ನಲ್ಲಿ ಹಿಮಪಾತವಾಗಿದ್ದರೆ, ಹಿಸ್ಸಾರ್, ಜಲಂಧರ್, ಕಪುರ್ತಲ ಮೊದಲಾದ ಪ್ರದೇಶಗಳಲ್ಲಿ ಅಲಿಕಲ್ಲಿನೊಂದಿಗೆ ಭಾರೀ ವರ್ಷಧಾರೆಯಾಗಿದೆ.  ಇದು ಸಕ್ರಿಯ ಪಶ್ಚಿಮ ಮಾರುತಗಳ ವ್ಯತ್ಯಯ ಪರಿಣಾಮ. ರಾಜಸ್ತಾನ ಮತ್ತು ವಾಯುವ್ಯ ಪ್ರಾಂತ್ಯಗಳಲ್ಲಿ ಭಾರೀ ಪ್ರಮಾಣದ ತೇವಾಂಶ ಹೀರಿಕೆ ಹಿನ್ನೆಲೆಯಲ್ಲಿ ಧಾರಾಕಾರ ಮಳೆಯಗಿದೆ ಎಂದು ಪ್ರಾದೇಶಿಕ ಹವಾಮಾನ ಮುನ್ಸೂಚನೆ ಕೇಂದ್ರದ ಉನ್ನತಾಧಿಕಾರಿಯೊಬ್ಬರು ತಿಳಿಸಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin