ಪಿಡಿಓ ನಿಯೋಜನೆ : ಸದಸ್ಯರ ನಡುವೆ ಮಾತಿನ ಚಕಮಕಿ

ಈ ಸುದ್ದಿಯನ್ನು ಶೇರ್ ಮಾಡಿ

ಪಾಂಡವಪುರ, ಜ.26- ಗ್ರಾಮ ಪಂಚಾಯಿತಿಗಳಿಗೆ ಪಿಡಿಓಗಳನ್ನು ನಿಯೋಜನೆ ಮಾಡುವ ವಿಚಾರಕ್ಕೆ ಸಂಬಂಧಿಸಿದಂತೆ ತಾಲೂಕು ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಕಾವೇರಿದ ಚರ್ಚೆ ನಡೆದು ಆಡಳಿತ ಮತ್ತು ಪ್ರತಿ ಪಕ್ಷ ಸದಸ್ಯರ  ನಡುವೆ ಪರಸ್ಪರ ಮಾತಿನ ಚಕಮಕಿ ನಡೆಯಿತು.ಪಟ್ಟಣದ ತಾಪಂ ಸಭಾಂಗಣದಲ್ಲಿ ಅಧ್ಯಕ್ಷೆ ರಾಧಮ್ಮ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಆಡಳಿತ ಪಕ್ಷದ ಸದಸ್ಯ ವಿ.ಎಸ್.ನಿಂಗೇಗೌಡ ಮಾತನಾಡಿ, ತಾಲೂಕಿನ ವಿವಿಧ ಗ್ರಾಪಂಗಳಿಗೆ ಪಿಡಿಓಗಳನ್ನುನಿಯೋಜನೆ ಮಾಡುವ ವಿಚಾರದಲ್ಲಿ ಇಒ ಮಂಜುನಾಥಸ್ವಾಮಿ ಏಕಪಕ್ಷೀಯ ನಿರ್ಧಾರ ತೆಗೆದುಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು.ತಾಪಂ ಸದಸ್ಯರ ಗಮನಕ್ಕೆ ತಾರದೇ ತಮಗಿಷ್ಟ ಬಂದಂತೆ ಇಒ ಪಿಡಿಓಗಳನ್ನು ನಿಯೋಜನೆ ಮಾಡುತ್ತಿದ್ದಾರೆ. ಆ ಪಿಡಿಓಗಳು ಪಂಚಾಯಿತಿಯಲ್ಲಿ ಸಮರ್ಪಕ ಕೆಲಸ ಮಾಡದೆ ಪಾಂಡವಪುರ ತಾಪಂ ಕಚೇರಿ ಅಥವಾ ಮೈಸೂರಿನಲ್ಲಿದ್ದರೂ ನಾವು ಪಂಚಾಯಿತಿಯಲ್ಲಿದ್ದೇವೆ ಎಂಬ ಸಬೂಬು ಹೇಳಿ ಕೆಲಸದಿಂದ ನುಣುಚಿಕೊಳ್ಳುತ್ತಿದ್ದಾರೆ ಎಂದರು.

ಈ ವೇಳೆ ಪ್ರತಿ ಪಕ್ಷ ಸದಸ್ಯ ಎನ್.ಬಿ.ರಾಮೇಗೌಡ ಹಾಗೂ ಆಡಳಿತ ಪಕ್ಷದ ವಿ.ಎಸ್.ನಿಂಗೇಗೌಡ, ಅಲ್ಪಹಳ್ಳಿ ಗೋವಿಂದಯ್ಯ ಅವರ ನಡುವೆ ತೀವ್ರ ಮಾತಿನ ಚಕಮಕಿ ನಡೆಯಿತು. ಸಭೆಯಲ್ಲಿ ಏನು ನಡೆಯುತ್ತಿದೆ ಎಂಬುದೇ ಗೊತ್ತಾಗಲಿಲ್ಲ. ಮಧ್ಯೆ ಪ್ರವೇಶಿಸಿದ ಉಪಾಧ್ಯಕ್ಷೆ ಎಚ್.ಲಕ್ಷ್ಮಮ್ಮ ಹಾಗೂ ಅಧ್ಯಕ್ಷೆ ರಾಧಮ್ಮ, ಆಡಳಿತ ಮತ್ತು ಪ್ರತಿಪಕ್ಷ ಸದಸ್ಯರ ಮಾತಿನ ಚಕಮಕಿಗೆ ಅಂತಿಮ ತೆರೆ ಎಳೆದರು.ತಾ.ಪಂ ಸಾಮಾನ್ಯ ಸಭೆಗೆ ಪದೇ ಪದೇ ಗೈರಾಗುವ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮಕ್ಕೆ ಹಾಗೂ ಸತತ 3 ಸಭೆಗಳಿಗೆ ಬಾರದ ಅಧಿಕಾರಿಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮಕ್ಕಾಗಿ ನೋಟೀಸ್ ಜಾರಿಗೊಳಿಸಲು ಇಒ ಮಂಜುನಾಥಸ್ವಾಮಿ ಸದಸ್ಯ ವಿ.ಎಸ್.ನಿಂಗೇಗೌಡರಿಗೆ ಸೂಚಿಸಿದರು.ಸಹಾಯಕ ಕೃಷಿ ನಿರ್ದೇಶಕ ಕೆಂಚೇಗೌಡ ಮಾತನಾಡಿ, ಹಿಂಗಾರು ಬೆಳೆಗೆ 3885 ಹೆಕ್ಟೇರ್ ಪ್ರದೇಶಕ್ಕೆ ಪರಿಹಾರ ನೀಡುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ. ಫಸಲ್ ಭೀಮಾ ಯೋಜನೆಯಡಿ 3526 ರೈತರು ಬೆಳೆ ವಿಮೆ ಮಾಡಿಸಿಕೊಂಡಿದ್ದಾರೆ ಎಂದರು.ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಚಂದ್ರಶೇಖರ್ ಮಾತನಾಡಿ, ಪ್ರಸಕ್ತ ವರ್ಷ ಆರ್‍ಟಿಇಯಡಿ ಮಕ್ಕಳನ್ನು ಶಾಲೆಗೆ ಸೇರಿಸಲು ಜ.20 ರಿಂದ ಫೆ.20ರವರೆಗೆ ಅವಕಾಶವಿದೆ.

ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು ಎಂದು ತಿಳಿಸಿದರು.ಬೇಸಿಗೆಯಿಂದಾಗಿ ತಾಲೂಕಿನ ಬಹುತೇಕ ಶಾಲೆಗಳಲ್ಲಿ ಮಧ್ಯಾಹ್ನದ ಬಿಸಿಯೂಟಕ್ಕೆ ಮಕ್ಕಳಿಗೆ ಕುಡಿಯಲು ನೀರಿಲ್ಲ, ಕೆಲವು ಶಾಲೆಗಳಲ್ಲಿ ಅಡುಗೆ ಪಾತ್ರೆಗಳಿಲ್ಲ. ತಮ್ಮ ಕ್ಷೇತ್ರ ವ್ಯಾಪ್ತಿಯ ತಾ.ಪಂ ಸದಸ್ಯರು ಸೂಕ್ತ ಪರಿಶೀಲನೆ ನಡೆಸಿ ಕುಡಿಯುವ ನೀರು ಸೇರಿದಂತೆ ಅಗತ್ಯ ಸೌಲಭ್ಯ ಕಲ್ಪಿಸುವಂತೆ ಮನವಿ ಮಾಡಿದರು.ಟಿಎಚ್‍ಒ ಡಾ.ಎಂ.ಎನ್.ಆಶಾಲತಾ ಮಾತನಾಡಿ, ಫೆ.7ರಿಂದ ತಾಲೂಕಿನ ಪ್ರತಿ ಶಾಲೆಯಲ್ಲೂ ಮಕ್ಕಳಿಗೆ ದಢಾರ ಲಸಿಕೆ ಹಾಕಲಾಗುವುದು ಎಂದರು.ಸದಸ್ಯ ಅಲ್ಪಹಳ್ಳಿ ಗೋವಿಂದಯ್ಯ, ಪಶು ಇಲಾಖೆ ಸಹಾಯಕ ನಿರ್ದೇಶಕ ಡಾ.ಎಸ್.ನಟರಾಜು, ತಾ.ಪಂ ಉಪಾಧ್ಯಕ್ಷೆ ಎಚ್.ಲಕ್ಷ್ಮಮ್ಮರಂಗಸ್ವಾಮಿ, ಸ್ಥಾಯಿ ಸಮಿತಿ ಅಧ್ಯಕ್ಷ ಪುಟ್ಟೇಗೌಡ, ಲೆಕ್ಕಾಧಿಕಾರಿ ಮಹೇಶ್, ವೇದಮೂರ್ತಿ ಇತರರು ಇದ್ದರು. ವಿವಿಧ ಇಲಾಖೆಗಳ ಪ್ರಗತಿ ಪರಿಶೀಲಿಸಲಾಯಿತು.

 

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin