ವಕೀಲರ ಕಡೆಯಿಂದ ಬರುವ ದೂರುಗಳನ್ನು ಬಗೆಹರಿಸುವುದು ಕಷ್ಟ : ಎಸ್.ಕೆ.ಮುಖರ್ಜಿ

ಈ ಸುದ್ದಿಯನ್ನು ಶೇರ್ ಮಾಡಿ

mikharji
ಬೆಂಗಳೂರು, ಜ.27- ಸುಶಿಕ್ಷಿತರು ನೀಡುವ ದೂರುಗಳನ್ನು ಸ್ವಲ್ಪ ಮಟ್ಟಿಗೆ ಬಗೆಹರಿಸಬಹುದು. ಆದರೆ ವಕೀಲರ ಕಡೆಯಿಂದ ಬರುವ ದೂರುಗಳು ಕಗ್ಗಂಟಾಗಿರುತ್ತವೆ. ಅವುಗಳನ್ನು ಬಗೆಹರಿಸುವುದು ಕಷ್ಟ ಎಂದು ಹೈಕೋರ್ಟ್ ಮುಖ್ಯನ್ಯಾಯಮೂರ್ತಿ ಎಸ್.ಕೆ.ಮುಖರ್ಜಿ ಇಂದಿಲ್ಲಿ ಹೇಳಿದರು.  ರಾಷ್ಟ್ರೀಯ ಕಾನೂನು ಸೇವಾ ಪ್ರಾಕಾರ ಹಾಗೂ ರಾಜ್ಯ ಕಾನೂನು ಸೇವಾ ಪ್ರಾಕಾರದಿಂದ ಏರ್ಪಡಿಸಿದ್ದ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಕಾನೂನು ಸೇವಾ ಪ್ರಾಕಾರಕ್ಕೆ ಬರುತ್ತಿರುವ ದೂರುಗಳ ಸಂಖ್ಯೆ ಕಡಿಮೆ. ವಕೀಲರ ಕಡೆಯಿಂದ ಬರುವ ದೂರುಗಳನ್ನು ಬಗೆಹರಿಸುವುದು ಸ್ವಲ್ಪ ಕಷ್ಟವಾಗುತ್ತದೆ ಎಂದರು.

ಇತ್ತೀಚೆಗೆ ಕಾನೂನು ಸೇವಾ ಪ್ರಾಕಾರಕ್ಕಿಂತ ನೇರವಾಗಿ ನ್ಯಾಯಾಲಯಕ್ಕೆ ದೂರು ಹೊತ್ತು ಬರುವವರ ಸಂಖ್ಯೆಯೇ ಹೆಚ್ಚಾಗಿದೆ ಎಂದು ಅವರು ಹೇಳಿದರು.  ಮುಖ್ಯ ನ್ಯಾಯಾೀಶರಾದ ಜಯಂತ್ ಪಾಟೀಲ್, ಎಲ್.ನಾರಾಯಣ ಸ್ವಾಮಿ, ಕಾನೂನು ಪ್ರಾಕಾರದ ಕಾರ್ಯದರ್ಶಿ ಎಂ.ಜಿ.ಉಮಾ, ರಾಷ್ಟ್ರೀಯ ಕಾನೂನು ಸೇವಾ ಪ್ರಾಕಾರದ ಅಲೋಕ್ ಅಗರ್‍ವಾಲ್ ಮತ್ತಿತರರು ಉಪಸ್ಥಿತರಿದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

 

Facebook Comments

Sri Raghav

Admin