ಶನಿ ಸಂಚಾರ ಫಲ : ಯಾವ ರಾಶಿಯವರು ಏನು ಮಾಡಿದರೆ ಒಳಿತಾಗುತ್ತೆ..?

ಈ ಸುದ್ದಿಯನ್ನು ಶೇರ್ ಮಾಡಿ

Shani-01

ದಿನಾಂಕ.26.1.2017ರಂದು ಗುರುವಾರ ರಾತ್ರಿ 7 ಗಂಟೆ 30 ನಿಮಿಷಕ್ಕೆ ಶನಿ ಗ್ರಹವು ವೃಶ್ಚಿಕ ರಾಶಿಯಿಂದ ಧನಸ್ಸು ರಾಶಿಗೆ ಪ್ರವೇಶಿಸುತ್ತಾನೆ. ಅಂದು ಮೂಲಾ ನಕ್ಷತ್ರಕ್ಕೆ ಪ್ರವೇಶ  ಶನಿ ಪೀಡಾ ಪರಿಹಾರಕ್ಕೆ ಈ ಕೆಳಗಿನ ಶ್ಲೋಕವನ್ನು ಪಠಿಸಿರಿ.
ಸೂರ್ಯಪುತ್ರೋ ದೀರ್ಘದೇಹೋ
ವಿಶಾಲಾಕ್ಷಃ ಶಿವಪ್ರಿಯ
ಮಂದಚಾರಃ ಪ್ರಸನ್ನಾತ್ಮಾ
ಪೀಡಾಂಹರತು ಮೇ ಶನಿಃ||
ಶನಿಯನ್ನು ಪ್ರಾರ್ಥಿಸುವ ಈ ಶ್ಲೋಕ ತುಂಬಾ ಶಕ್ತಿಯುತ ಮಂತ್ರ
ನೀಲಾಂಜನ ಸಮಾಭಾಸಂ
ರವಿ ಪುತ್ರಂ ಯಮಾಗ್ರಜಂ |
ಛಾಯಾ ಮಾರ್ತಂಡ ಸಂಭೂತಂ
ತಂ ನಮಾಮಿ ಶನೈಶ್ಚರಂ||

ಇನ್ನು ಹೆಚ್ಚಿನ ಸಮಯವಿದ್ದಲ್ಲಿ ಶ್ರೀರಾಮನ ತಂದೆ ದಶರಥ ಮಹಾರಾಜನು ಶನಿಯನ್ನು ಪ್ರಾರ್ಥಿಸಿ ಸಿದ್ಧಿ ಪಡೆದನು. ಇದನ್ನು ಯೂ ಟ್ಯುಬ್‍ನಲ್ಲಿ ದಶರಥ ಕೃತ ಶನಿ ಮಂತ್ರ ಎಂದು ಡೌನ್ ಲೋಡ್
ಮಾಡಿಕೊಂಡು ಕೇಳಬಹುದು, ಪಠಿಸಬಹುದು. ಶನಿ ಸಂಚಾರ ಆಧರಿಸಿ ಸಂಕ್ಷಿಪ್ತ ದ್ವಾದಶ ರಾಶಿಯವರು ಮಾಡಬೇಕಾದ ದಾನ , ಧರ್ಮ, ಹೋಮ, ಸ್ತೋತ್ರ ಪಠಣ, ಪೂಜೆಯ ವಿವರ
ಶನಿಯು 26.1.2017ರ ತನಕ ವೃಶ್ಚಿಕ ರಾಶಿಯಲ್ಲಿದ್ದು , 26.1.2017ರಂದು ರಾತ್ರಿ 7 ಗಂಟೆ 30 ನಿಮಿಷಕ್ಕೆ ಧನಸ್ಸು ರಾಶಿಗೆ ಪ್ರವೇಶಿಸುತ್ತಾನೆ.

ಪ್ರಪಂಚದಲ್ಲಿ ಈ ಭೂಮಿಯ ಮೇಲೆ ಮನುಷ್ಯನಾಗಿ ಹುಟ್ಟಿದ ನಂತರ ಹಲವಾರು ವಿವಿಧ ಕಷ್ಟಗಳನ್ನು, ಹಲವು ಗ್ರಹಗಳ ಉಪದ್ರವಗಳನ್ನು ಅನುಭವಿಸಬೇಕಾಗುವುದು. ಈ ರೀತಿ ಅನುಭವಿಸುವಾಗ ಮುಖ್ಯವಾಗಿ ನಮ್ಮ ಋಷಿಗಳು ಗುರು ಮತ್ತು ಶನಿ, ರವಿ ಸಂಚಾರ ಗಣನೆಗೆ ತೆಗೆದುಕೊಂಡು ಜಾತಕರೀತ್ಯ ದಶೆ, ಭುಕ್ತಿ ಗಣಿಸಿ, ಗ್ರಹಗಳ ಲತ್ತಾಕಾಲ ನೋಡಿ, ಸಂಕ್ರಮಣ ಹುಟ್ಟಿದ ದಿನಗಳಂದು ಪರಿಹಾರ ಮಾಡಿಕೊಳ್ಳಬೇಕೆಂದು ವಿವರಿಸಿದ್ದಾರೆ.

ಶ್ರೀ ಸೂರ್ಯ ನಾರಾಯಣ ಒಂದು ರಾಶಿಯಿಂದ ಮುಂದಿನ ರಾಶಿ ಪ್ರವೇಶಿಸುವ ದಿನವನ್ನು ಸಂಕ್ರಮಣವೆಂದು ಮಕರ ರಾಶಿಗೆ ಪ್ರವೇಶಿಸುವ ದಿನವನ್ನು ಮಕರ ಸಂಕ್ರಮಣವೆಂದು ಕರೆಯುವರು. ಅಂದು ಸಂಕ್ರಾಂತಿ ಹಬ್ಬ ಎಂದು ಆಚರಿಸುತ್ತೇವೆ. ರವಿಯು ಕಟಕ ರಾಶಿಗೆ ಪ್ರವೇಶಿಸುವ ದಿನ ದಕ್ಷಿಣಾಯಣ ಪುಣ್ಯಕಾಲ. ಗುರುವು ಪ್ರತಿ ರಾಶಿಯಲ್ಲಿ ಪ್ರವೇಶಿಸುವ ದಿನದಂದು ಪವಿತ್ರ ನದಿಗಳಲ್ಲಿ ಸ್ನಾನ ಮಾಡಿದರೆ ಪಾಪ ಪರಿಹಾರವಾಗಿ ಹಲವಾರು ವಿವಿಧ ಕಷ್ಟಗಳು, ಹಲವು ಗ್ರಹಗಳ ಉಪದ್ರವಗಳು ಹೋಗುವವು.ಗುರುವು ಸಿಂಹ ರಾಶಿಯಲ್ಲಿದ್ದಾಗ ಗೋದಾವರಿ ನದಿಯಲ್ಲಿ, ಕನ್ಯಾ ರಾಶಿಗೆ ಬರುವಾಗ ಕೃಷ್ಣಾ ನದಿಯಲ್ಲಿ, ತುಲಾ ರಾಶಿಗೆ ಬರುವಾಗ ಕಾವೇರಿ ನದಿಯಲ್ಲಿ, ವೃಶ್ಚಿಕ ರಾಶಿಗೆ ಬರುವಾಗ ಭೀಮಾ ನದಿಯಲ್ಲಿ, ಧನಸ್ಸು ರಾಶಿಗೆ ಬರುವಾಗ ತಪತಿ ನದಿಯಲ್ಲಿ, ಮಕರ ರಾಶಿಗೆ ಬರುವಾಗ ತುಂಗಾ ನದಿಯಲ್ಲಿ, ಕುಂಭ ರಾಶಿಗೆ ಬರುವಾಗ ಸಿಂಧೂ ನದಿಯಲ್ಲಿ, ಮೀನ ರಾಶಿಗೆ ಬರುವಾಗ ಪರಿಣಿತಾ ನದಿಯಲ್ಲಿ, ಮೇಷ ರಾಶಿ ಬಂದಾಗ ಗಂಗಾ ನದಿಯಲ್ಲಿ, ವೃಷಭ ರಾಶಿಗೆ ಬರುವಾಗ ನರ್ಮದಾ ನದಿಯಲ್ಲಿ, ಮಿಥುನ ರಾಶಿಗೆ ಬರುವಾಗ ಸರಸ್ವತಿ ನದಿಯಲ್ಲಿ , ಕಟಕ ರಾಶಿಗೆ ಬರುವಾಗ ಯಮುನಾ ನದಿಯಲ್ಲಿ ಮಿಂದು ಬರಬೇಕು. ಈ ಕಾಲದಲ್ಲಿ ದೇವತೆಗಳು, ಋಷಿಗಳು, ಪಿತೃ ದೇವತೆಗಳೂ ಸಹ ಬಂದು, ಮಿಂದು ಅಲ್ಲಿ ಇರುತ್ತಾರೆ.

ದಾನ, ಧರ್ಮ, ಪಿತೃ ದೇವತೆಗಳಿಗೆ ಪಿಂಡ ಹಾಕುವುದು ಅವರನ್ನು ಸ್ಮರಿಸುವುದು ಪಾಪ ಮುಕ್ತಿಗೆ ದಾರಿ. ದೇವತೆಗಳು, ರಾಕ್ಷಸರು ಸಮುದ್ರ ಮಂಥನ ಮಾಡಿ, ಅಮೃತ ಕಲಶವನ್ನು ತೆಗೆದುಕೊಂಡು ಹೋಗುವಾಗ ಎಲ್ಲೆಲ್ಲಿ, ಅಮೃತ ಕಲಶವನ್ನು ಇಟ್ಟರೋ, ಅಲ್ಲೆಲ್ಲಾ ಮೇಳ ನಡೆಸಿದವರು. ಪುಷ್ಕರ ದೇವನನ್ನೂ ಪೂಜಿಸಿದರು. 12 ವರ್ಷಕ್ಕೊಮ್ಮೆ ಸಂಚಾರ ಮಾಡುವಾಗ ಕುಂಭ ರಾಶಿಗೆ ಬರುವಾಗ ಕುಂಭ ಮೇಳ, ಗಂಗಾ, ಯಮುನಾ, ಸರಸ್ವತಿ ನದಿಗಳ ಸಂಗಮದಲ್ಲಿ ಪುಷ್ಕರ. ಈ ರೀತಿ ಮಾಡಿ , ದಾನ, ಧರ್ಮ ಮಾಡಿ ಪ್ರತಿ ದಿನ ಶ್ರೀ ವಿಷ್ಣು ಸಹಸ್ರನಾಮ ಮತ್ತು ಶ್ರೀ ಲಲಿತಾ ಸಹಸ್ರನಾಮ ಸ್ತೋತ್ರ ಓದಬೇಕು. ಆಗದಿದ್ದವರು ಈ ಶ್ಲೋಕಗಳನ್ನಾದರೂ ಹೇಳಬೇಕು.

Shani-Raashi

ಜ್ಯೋತಿಷ್ಯ ರತ್ನ ದೈವಜ್ಞ
ಡಾ.ವಿಶ್ವಪತಿ ಶಾಸ್ತ್ರಿ , 9448018711
ಪಂಚಾಂಗ ಕರ್ತ, ಜ್ಯೋತಿಷ್ಯವಾಣಿ ಪಂಚಾಂಗ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin