(Watch Video) ಕೆಟ್ಟ ತಾಯಂದಿರೂ ಇರುತ್ತಾರೆ ಎಂಬುದಕ್ಕೆ ಉದಾಹರಣೆ ಈ ಮಹಾತಾಯಿ..!

ಈ ಸುದ್ದಿಯನ್ನು ಶೇರ್ ಮಾಡಿ

Bad-Mother

ನವದೆಹಲಿ, ಜ.27-ಮಾತೆ ವಾತ್ಸಲ್ಯದ ಪ್ರತಿರೂಪ. ತನ್ನನ್ನು ಚಾಕುವಿನಿಂದ ಇರಿದು ಪರಾರಿಯಾಗುತ್ತಿದ್ದ ದುಷ್ಟ ಮಗನೊಬ್ಬ ಜಾರಿ ಬಿದ್ದು ಗಾಯಗೊಂಡಿದ್ದಕ್ಕೆ ಮರುಗಿದ ಮಹಾಸಾಧ್ವಿ ಮಾತೆಯರ ಉದಾಹರಣೆ ನಮ್ಮ ದೇಶದಲ್ಲಿದೆ. ಕೆಟ್ಟ ತಂದೆಯರು ಇರುತ್ತಾರೆ, ಆದರೆ ಕೆಟ್ಟ ತಾಯಂದಿರು ಇರುವುದಿಲ್ಲ ಎಂಬ ಮಾತು ನಮ್ಮಲ್ಲಿ ಜನಜನಿತ. ಆದರೆ, ದೆಹಲಿಯ ಮಹಾಮಾತೆಯೊಬ್ಬಳು ತನ್ನ 2 ವರ್ಷದ ಮಗನನ್ನು ಮೆಟ್ಟಿಲಿನಿಂದ ಕೆಳಗೆ ಎಸೆದು ಗಂಭೀರವಾಗಿ ಗಾಯಗೊಳಿಸಿರುವ ಘಟನೆ ದೆಹಲಿಯಲ್ಲಿ ನಡೆದಿದೆ.

https://www.youtube.com/watch?v=M54xHKtOuEk

ಈಶಾನ್ಯ ದೆಹಲಿಯಲ್ಲಿ ಅತ್ತೆ ಮನೆಯವರೊಂದಿಗೆ ಕ್ಷುಲ್ಲಕ ಕಾರಣಕ್ಕಾಗಿ ಜಗಳವಾಡುತ್ತಿದ್ದ ಮಹಿಳೆಯೊಬ್ಬಳು ಕುಪಿತಗೊಂಡು, ನಿದ್ರಿಸುತ್ತಿದ್ದ ತನ್ನ 2 ವರ್ಷದ ಕಂದಮ್ಮನನ್ನು ಎಳೆದೊಯ್ದು ಮೆಟ್ಟಿಲುಗಳಿಂದ ಕೆಳಗೆ ತಳ್ಳಿದ ಆಘಾತಕಾರಿ ದೃರ್ಶಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ಪ್ರಕಣದ ಸಂಬಂಧ ಸೋನು ಗುಪ್ತಾ (26) ಎಂಬ ಮಹಿಳೆಯ ಮೇಲೆ ಆಕೆಯ ಪತಿ ಉದ್ಯಮಿ ನಿತಿನ್ ಗುಪ್ತಾ ಮಗು ಕೊಲೆ ಯತ್ನ ದೂರು ದಾಖಲಿಸಿದ್ದಾರೆ. ಅಂಶು ಎಂಬ ಮಗುವಿನ ತಲೆ ಮತ್ತು ಮುಖಕ್ಕೆ ತೀವ್ರ ಪೆಟ್ಟಾಗಿದ್ದು ದೆಹಲಿಯ ಎಐಐಎಂಎಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin