ಕೆಎಸ್‍ಆರ್‍ಟಿಸಿ ಬಸ್-ಜೀಪ್ ಡಿಕ್ಕಿ : ಪೊಲೀಸ್ ಇನ್‍ಸ್ಪೆಕ್ಟರ್ ಸೇರಿ ಇಬ್ಬರ ಸಾವು

ಈ ಸುದ್ದಿಯನ್ನು ಶೇರ್ ಮಾಡಿ

accident

ಬೆಂಗಳೂರು,ಜ.28– ಕೆಎಸ್‍ಆರ್‍ಟಿಸಿ ಬಸ್ ಹಾಗೂ ಪೊಲೀಸ್ ಜೀಪ್ ನಡುವೆ ಸಂಭವಿಸಿದ ಅಪಘಾತದಲ್ಲಿ ಇನ್‍ಸ್ಪೆಕ್ಟರ್ ಸೇರಿ ಇಬ್ಬರು ಸಾವನ್ನಪ್ಪಿದ್ದಾರೆ. ಮೈಸೂರು ಜಿಲ್ಲಾ ಅಪರಾಧ ತನಿಖಾ ದಳದ ಇನ್‍ಸ್ಪೆಕ್ಟರ್ ಮಹೇಶ್‍ಕುಮಾರ್, ಜೀಪ್ ಚಾಲನೆ ಮಾಡುತ್ತಿದ್ದ ಕಾನ್‍ಸ್ಟೆಬಲ್ ಲಕ್ಷ್ಮಣ್ ಮೃತಪಟ್ಟವರು.  ಅಪಘಾತದಲ್ಲಿ ಗಾಯಗೊಂಡಿರುವ ಇನ್ನು ಇಬ್ಬರು ಕಾನ್‍ಸ್ಟೆಬಲ್‍ಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಂದು ಮಧ್ಯಾಹ್ನ ಪೊಲೀಸರು ಜೀಪ್‍ನಲ್ಲಿ ಮೈಸೂರಿಂದ ಸುತ್ತೂರು ಕಡೆಗೆ ಹೋಗುವಾಗ ಟಿ.ನರಸೀಪುರ ರಸ್ತೆಯಲ್ಲಿ ಕೆಎಸ್‍ಆರ್‍ಟಿಸಿ ಬಸ್ ಡಿಕ್ಕಿ ಹೊಡೆದಿದೆ. ಜೀಪ್ ಚಾಲಕ ಕಾನ್‍ಸ್ಟೆಬಲ್ ಲಕ್ಷ್ಮಣ್ ಸ್ಥಳದಲ್ಲೇ ಸಾವನ್ನಪ್ಪಿದರೆ, ಗಂಭೀರವಾಗಿ ಗಾಯಗೊಂಡಿದ್ದ ಇನ್‍ಸ್ಪೆಕ್ಟರ್ ಮಹೇಶ್‍ಕುಮಾರ್ ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಸಿದ್ದಾರ್ಥ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin