ಯಾವುದೇ ಕಾರಣಕ್ಕೂ ಏಕಪಕ್ಷೀಯ ನಿರ್ಧಾರ ಕೈಗೊಳ್ಳದಂತೆ ಯಡಿಯೂರಪ್ಪಗೆ ಅಮಿತ್ ಷಾ ಎಚ್ಚರಿಕೆ

ಈ ಸುದ್ದಿಯನ್ನು ಶೇರ್ ಮಾಡಿ

Amith-Shah-Yadiyurappa

ಬೆಂಗಳೂರು, ಜ.28- ಯಾವುದೇ ಕಾರಣಕ್ಕೂ ಇನ್ನು ಮುಂದೆ ಏಕಪಕ್ಷೀಯ ನಿರ್ಧಾರ ಕೈಗೊಳ್ಳಬಾರದು. ಹಾಗೂ ಪಕ್ಷದ ವಿರುದ್ದ ಬಹಿರಂಗ ಹೇಳಿಕೆ ಕೊಡಬಾರದು.ಮತ್ತೇ ಭಿನ್ನಮತ ಕಂಡು ಬಂದರೆ ಶಿಸ್ತು ಕ್ರಮ ಕೈಗೊಳ್ಳುವುದು ಅನಿವಾರ್ಯ. ರಾಜ್ಯ ರಾಜಕಾರಣದಲ್ಲಿ ಭಾರೀ ಕುತೂಹಲ ಮೂಡಿಸಿದ್ದ ಸಂಗೊಳ್ಳಿ ರಾಯಣ್ಣ ಬಿಗ್ರೇಡ್ ಹಾಗೂ ಪದಾಧಿಕಾರಿಗಳ ನೇಮಕಾತಿ ಕುರಿತಂತೆ ಬಿಜೆಪಿ ರಾಜ್ಯಧ್ಯಕ್ಷ ಬಿ.ಎಸ್ ಯಡಿಯೂರಪ್ಪ ಹಾಗೂ ವಿಧಾನಪರಿಷತ್ ಪ್ರತಿಪಕ್ಷದ ನಾಯಕ ಕೆ.ಎಸ್ ಈಶ್ವರಪ್ಪ ಅವರಿಗೆ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ನೀಡಿರುವ ಎಚ್ಚರಿಕೆ ಸಂದೇಶವಿದು.
ಕಳೆದ ರಾತ್ರಿ ನವದೆಹಲಿಯ ಅಕ್ಬರ್ ರಸ್ತೆಯಲ್ಲಿರುವ ಅಮಿತ್ ಷಾ ನಿವಾಸದಲ್ಲಿ ಸುಮಾರು ಮೂರು ಗಂಟೆಗಳ ಕಾಲ ಉಭಯ ನಾಯಕರ ನಡುವೆ ಕಾವೇರಿದ ಮಾತಿನ ಚಕಮಕಿ ನಡೆದಿದೆ. ಇಬ್ಬರು ತಮ್ಮ ತಮ್ಮ ಪ್ರತಿಷ್ಟೆಯಿಂದ ಹಿಂದೆ ಸರಿಯಲು ನಿರಕಾರಿಸಿದರು.

ಇದರಿಂದ ಆಕ್ರೋಶಗೊಂಡ ಷಾ, ನೀವು ನಿಮ್ಮ ನಡವಳಿಕೆಗಳನ್ನು ಸರಿಪಡಿಸಿಕೊಳ್ಳದಿದ್ದರೆ ಕರ್ನಾಟಕದಲ್ಲಿ ಪರ್ಯಾಯ ನಾಯಕತ್ವ ನೋಡಬೇಕಾಗುತ್ತದೆ ಎಂದು ಖಡಕ್ ಎಚ್ಚರಿಕೆಯನ್ನೂ ನೀಡಿದ್ದಾರೆ. ಸಂಗೊಳ್ಳಿ ರಾಯಣ ಬಿಗ್ರೇಡ್ ಚಟುವಟಕಿಕೆಗಳಿಂದ ನಾನು ಹಿಂದೆ ಸರಿಯುವುದಿಲ್ಲ ಎಂದು ಈಶ್ವರಪ್ಪ ರಚ್ಚೆ ಹಿಡಿದರೆ, ಈಗಾಗಲೇ ನೇಮಕವಾಗಿರುವ ಪದಾಧಿಕಾರಿಗಳ ಪಟ್ಟಿಯನ್ನು ಬದಲಾಯಿಸಲು ಸಾಧ್ಯವೇ ಇಲ್ಲ ಎಂಬುದು ಯಡಿಯೂರಪ್ಪನವರ ವಾದವಾಗಿತ್ತು. ಹೀಗೆ ಪರಸ್ಪರ ಆರೋಪ- ಪ್ರತ್ಯರೋಪ ನಡೆಯುತ್ತಿದ್ದ ವೇಳೆ ಮಧ್ಯಪ್ರವೇಶ ಮಾಡಿದ ಅಮಿತ್ ಷಾ, ಎಲ್ಲರೂ ಒಪ್ಪಿಕೊಳ್ಳುವ ಸಿದ್ದ ಸೂತ್ರ ಹೆಣೆಯುವಲ್ಲಿ ಯಶಸ್ವೀಯಾಗಿ ಉಭಯರನ್ನು ಸಂತೃಪ್ತಿಗೊಳಿಸಿದ್ದಾರೆ.

ಶಿಸ್ತು ಕ್ರಮದ ಎಚ್ಚರಿಕೆ:

ಯಾರೊಬ್ಬರು ಪಕ್ಷಕ್ಕೀಂತ ದೊಡ್ಡವರಲ್ಲ ಎಂಬುದನ್ನು ಮನಗಾಣಬೇಕು. ನಿಮ್ಮ ವರ್ತನೆಗಳಿಂದ ರಾಜ್ಯದಲ್ಲಿ ಪಕ್ಷದ ವರ್ಚಸ್ಸೀಗೆ ಭಾರೀ ಧಕ್ಕೆ ಬಂದಿದೆ. ಕಾಂಗ್ರೆಸ್ ಆಡಳಿತದಿಂದ ಬೇಸತ್ತಿರುವ ಜನತೆ ನಮ್ಮ ಪಕ್ಷದ ಕಡೆ ನೋಡುತ್ತಿರುವಾಗ ಹಿರಿಯರಾದ ನೀವು ಈ ರೀತಿ ಹಾದಿ-ಬೀದಿಯಲ್ಲಿ ರಂಪಾಟ ನಡೆಸಿದರೆ ಕಾರ್ಯಕರ್ತರಿಗೆ ಏನು ಸಂದೇಶ ನೀಡುತ್ತೀರಿ ಎಂದು ಪ್ರಶ್ನೆ ಮಾಡಿದ್ದಾರೆ.
ಯಡಿಯೂರಪ್ಪ- ಈಶ್ವರಪ್ಪ ಪಕ್ಷದ ಪ್ರಮುಖ ಆಧಾರ ಸ್ತಂಭಗಳು. ನೀವು ಇನ್ನೊಬ್ಬರಿಗೆ ಮಾದರಿಯಾಗಬೇಕೇ ಹೊರೆತು ಸಣ್ಣ ಪುಟ್ಟ ಕಾರ್ಯಕರ್ತರಂತೆ ಕಿತ್ತಾಡುವುದು ಸರಿಯಲ್ಲ. ಇನ್ನು ಮುಂದೆ ಇದೇ ರೀತಿ ನಡೆದುಕೊಂಡರೆ ಶಿಸ್ತು ಕ್ರಮ ಜರುಗಿಸುವುದು ಅನಿವಾರ್ಯವಾಗುತ್ತದೆ ಎಂದು ಖಡಕ್ ಎಚ್ಚರಿಕೆ ಅಮಿತ್ ಷಾ ಬಾಯಿಂದ ಹೊರ ಬಿದ್ದಾಗಲೇ ಇಬ್ಬರು ಮೌನಕ್ಕೆ ಶರಣಾದರೆಂದು ತಿಳಿದು ಬಂದಿದೆ.

ಏಕಪಕ್ಷೀಯ ನಿರ್ಧಾರ ಬೇಡ:

ಇನ್ನು ಸಭೆಯಲ್ಲಿ ಅಮಿತ್ ಷಾ ಬಿಎಸ್‍ವೈ ವಿರುದ್ದ ಕೆಲ ದಾಖಲೆಗಳನ್ನು ಮುಂದಿಟ್ಟ ಈಶ್ವರಪ್ಪ ಕೆಜೆಪಿಯಿಂದ ಬಂದವರಿಗೆ ಪದಾಧಿಕಾರಿಗಳ ಪಟ್ಟಿಯಲ್ಲಿ ಆದ್ಯತೆ ನೀಡಲಾಗಿದೆ. ಇದರಿಂದ ಪಕ್ಷದ ನಿಷ್ಟಾವಂತರು ಅಸಮಾಧಾನಗೊಂಡಿದ್ದಾರೆಂಬುದನ್ನು ಮನವರಿಕೆ ಮಾಡಿಕೊಟ್ಟಿದ್ದಾರೆ.ಇದನ್ನು ಸಹನೆಯಿಂದಲೇ ಆಲಿಸಿದ ರಾಷ್ಟ್ರೀಯ ಅಧ್ಯಕ್ಷರು ಎಲ್ಲಲ್ಲಿ ಭಿನ್ನಮತಕ್ಕೆ ಕಾರಣವಾಗಿದಿಯೋ ಅಂತಹ ಕಡೆ ಸಣ್ಣ ಪುಟ್ಟ ಬದಲಾವಣೆ ಮಾಡಿಕೊಳ್ಳಿ ಎಂದು ಯಡಿಯೂರಪ್ಪನವರಿಗೆ ಸಲಹೆ ಮಾಡಿದ್ದಾರೆ. ಇನ್ನು ಮುಂದೆ ಪಕ್ಷದ ಯಾವುದೇ ತೀರ್ಮಾನಗಳನ್ನು ಕೋರ್ ಕಮಿಟಿಯಲ್ಲಿ ಚರ್ಚಿಸಿ ತೀರ್ಮಾನಕೈಗೊಳ್ಳಬೇಕು. ಕಾಲ ಕಾಲಕ್ಕೆ ಪ್ರಮುಖರ ಸಭೆ ಆರ್‍ಎಸ್‍ಎಸ್ ನಾಯಕರ ಸಲಹೆ ಪಡೆಯುವುದು, ಕಾರ್ಯಕಾರಿಣಿ ಸಭೆ, ರಾಜ್ಯ ಸರ್ಕಾರದ ವಿರುದ್ದ ಹೋರಾಟ, ಕೇಂದ್ರ ಸರ್ಕಾರದ ಸಾಧನೆಗಳನ್ನು ಜನರಿಗೆ ತಲುಪಿಸುವುದು, ಸೇರಿದಂತೆ ಹಲವು ಕಾರ್ಯಗಳನ್ನು ರೂಪಿಸಲು ಅಮಿತ್ ಷಾ ಸಲಹೆ ನೀಡಿದ್ದಾರೆ. ಕೊನೆಗೆ ಗತ್ಯಂತರ ಇಲ್ಲದೆ ಯಡಿಯೂರಪ್ಪ- ಈಶ್ವರಪ್ಪ ಒಪ್ಪಿಕೊಂಡು ಅಕ್ಬರ್ ನಿವಾಸದಿಂದ ಹೊರ ಬಂದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin