‘ಸಾಲ ಕೇಳಲಿಲ್ಲ, ನೆರವಿಗಾಗಿ ಬೇಡಿದ್ದೆ’ : ಕಳಂಕಿತ ಉದ್ಯಮಿ ವಿಜಯ್ ಮಲ್ಯ ವಿವಾದಿತ ಟ್ವೀಟ್

ಈ ಸುದ್ದಿಯನ್ನು ಶೇರ್ ಮಾಡಿ

Vijay-Malya

ನವದೆಹಲಿ, ಜ.28- ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ ಕಿಂಗ್ ಫಿಷರ್ ಏರ್‍ಲೈನ್ಸ್ (ಕೆಎಫ್‍ಎ) ಸಂಸ್ಥೆಗೆ ಸಹಾಯ ಮಾಡುವಂತೆ ತಾವು ಆಗಿನ ಯುಪಿಎ ಸರ್ಕಾರಕ್ಕೆ ಮನವಿ ಮಾಡಿದ್ದಾಗಿ ಸ್ಪಷ್ಟಪಡಿಸಿರುವ ಕಳಂಕಿತ ಉದ್ಯಮಿ ವಿಜಯ್ ಮಲ್ಯ ಸಾಲ ನೀಡುವಂತೆ ಕೋರಿರಲಿಲ್ಲ ಎಂದು ಹೇಳಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಮಲ್ಯ ಆಗಿನ ಯುಪಿಎ ಸರ್ಕಾರದ ನೀತಿಗಳು ಮತ್ತು ಆರ್ಥಿಕ ಸ್ಥಿತಿಗಳಿಂದಾಗಿಯೇ ತಮ್ಮ ಒಡೆತನದ ಕೆಎಫ್‍ಐ ಕುಸಿಯಲು ಮತ್ತು ತಾವು ಆರ್ಥಿಕ ಸಂಕಷ್ಟಕ್ಕೆ ಸಿಲುಕಲು ಕಾರಣವಾಯಿತು ಎಂದು ಆರೋಪಿಸಿದ್ದಾರೆ. ಕಠಿಣ ಆರ್ಥಿಕ ನೀತಿಗಳನ್ನು ಬದಲಿಸುವಂತೆ ಹಾಗೂ ಏರ್‍ಲೈನ್ಸ್ ಸಂಸ್ಥೆಗೆ ಆ ಮೂಲಕ ನೆರವಾಗುವಂತೆ ನಾನು ಕೋರಿದ್ದೆ. ಆದರೆ, ಯಾವುದೇ ಸಂದರ್ಭದಲ್ಲೂ ನಾನು ಸಾಲ ನೀಡುವಂತೆಯಾಗಲಿ ಅಥವಾ ಹಣಕಾಸು ನೆರವು ಬಿಡುಗಡೆ ಮಾಡುವಂತೆ ಕೋರಿಲ್ಲ ಎಂದು ಹೇಳಿದ್ದಾರೆ.

‘ನನ್ನ ವಿರುದ್ಧದ ವಂಚನೆ ಆರೋಪಗಳ ಬಗ್ಗೆ ಸಿಬಿಐ, ಸೆಬಿ ಬಳಿ ದಾಖಲೆ ಕೇಳಿ’
ತಮ್ಮ ವಿರುದ್ಧ ಸುದ್ದಿವಾಹಿನಿಗಳು ಆಧಾರ ರಹಿತ ಆರೋಪ ಮಾಡುತ್ತಿವೆ ಎಂದಿರುವ ವಿಜಯ ಮಲ್ಯ, ‘ನಾನು ವಂಚನೆ ಮಾಡಿದ್ದೇನೆಂಬ ಆರೋಪಗಳಿಗೆ ಸಿಬಿಐ ಮತ್ತು ಸೆಬಿ ಬಳಿ ಯಾವ ದಾಖಲೆಗಳಿವೆ ಕೇಳಿ’ ಎಂದು ಶನಿವಾರ ಟ್ವೀಟ್ ಮಾಡಿದ್ದಾರೆ. ಸರಣಿ ಟ್ವೀಟ್ ಮಾಡಿರುವ ಮಲ್ಯ, ‘ಭಾರತದ ರಾಷ್ಟ್ರೀಯ ಸುದ್ದಿವಾಹಿನಿಗಳು ನನ್ನ ವಿರುದ್ಧ ಸುಳ್ಳು ಹಾಗೂ ಆಧಾರ ರಹಿತ ಸುದ್ದಿಗಳನ್ನು ಪ್ರಸಾರ ಮಾಡುತ್ತಿವೆ. ಏಕಮುಖಿ ಸುದ್ದಿ ಪ್ರಸಾರವನ್ನು ಸುದ್ದಿವಾಹಿನಿಗಳು ಕೈಬಿಡಬೇಕು’ ಎಂದು ಹೇಳಿದ್ದಾರೆ. ‘ನನ್ನನ್ನು ಟೀಕಿಸುವ ಮೊದಲು ನಾನು ವಂಚನೆ ಮಾಡಿರುವುದಕ್ಕೆ ಸಿಬಿಐ ಮತ್ತು ಸೆಬಿ ಬಳಿಯೇನಾದರೂ ದಾಖಲೆಗಳಿವೆಯೇ ಕೇಳಿ’ ಎಂದು ಸುದ್ದಿವಾಹಿನಿಗಳನ್ನು ಉದ್ದೇಶಿಸಿ ಮಲ್ಯ ಟ್ವೀಟ್ ಮಾಡಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin