5 ಕೋಟಿ ರೂ. ವಂಚಿಸಿದ್ದ ಖತರ್ನಾಕ್ ಸಾಧ್ವಿ ಜೈ ಶ್ರೀ ಗಿರಿ ಅರೆಸ್ಟ್

ಈ ಸುದ್ದಿಯನ್ನು ಶೇರ್ ಮಾಡಿ

Jai-Sri-Giri

ಬನಸ್ಕಾಂತ, ಜ.28- ಚಿನ್ನದ ಬಿಸ್ಕತ್ತುಗಳನ್ನು ಖರೀದಿಸಿ ಐದು ಕೋಟಿ ರೂ.ಗಳ ಬೃಹತ್ ಮೊತ್ತ ಬಾಕಿ ಉಳಿಸಿಕೊಂಡು ವ್ಯಾಪಾರಿಗೆ ಸತಾಯಿಸುತ್ತಿದ್ದ ಆರೋಪದ ಮೇಲೆ ಗುಜರಾತಿನ ಸಾಧ್ವಿ ಜೈ ಶ್ರೀ ಗಿರಿಯನ್ನು ಪೊಲೀಸರು ಬಂಧಿಸಿದ್ದಾರೆ. ಈಕೆಯ ಮನೆಯಲ್ಲಿದ್ದ 80 ಲಕ್ಷ ರೂ. ಮೌಲ್ಯ 24 ಚಿನ್ನದ ಗಟ್ಟಿಗಳು ಹಾಗೂ 2,000 ರೂ.ಗಳ 1.29 ಕೋಟಿ ರೂ.ಗಳನ್ನು ವಶಪಡಿಸಿಕೊಳ್ಳಲಾಗಿದೆ.  ಬನಸ್ಕಾಂತ ಜಿಲ್ಲೆಯ ಪ್ರತಿಷ್ಠಿತ ದೇವಾಲಯದ ಒಡೆತನ ಹೊಂದಿರುವ ಟ್ರಸ್ಟ್‍ನ ಮುಖ್ಯಸ್ಥೆಯೂ ಆಗಿರುವ ಸಾಧ್ವಿ ಜೈ ಶ್ರೀ ಗಿರಿ ಧರ್ಮ ಪ್ರಚಾರಕರಾಗಿಯೂ ಪ್ರಸಿದ್ಧರಾಗಿದ್ದಾರೆ.

ಬಂಗಾರದ ಬಗ್ಗೆ ಅತಿಯಾದ ವ್ಯಾಮೋಹ ಹೊಂದಿದ್ದ ಅವರು ಪದೇ ಪದೇ ಚಿನ್ನಾಭರಣಗಳು ಹಾಗೂ ವಸ್ತುಗಳನ್ನು ಖರೀದಿಸುವ ಗೀಳು ಹೊಂದಿದ್ದರು. ಅದೇ ರೀತಿ ಇಲ್ಲಿನ ಸ್ಥಳೀಯ ಚಿನ್ನದ ವ್ಯಾಪಾರಿಯೊಬ್ಬರಿಂದ ಚಿನ್ನದ ಬಿಸ್ಕತ್ತುಗಳನ್ನು ಕೊಂಡು 5 ಕೋಟಿ ರೂ.ಗಳ ಬಾಕಿ ಉಳಿಸಿಕೊಂಡಿದ್ದರು. ಉಳಿಸಿಕೊಂಡಿರುವ ಬಾಕಿ ಮೊತ್ತ ಪಾವತಿಸುವಂತೆ ವ್ಯಾಪಾರಿ ಅನೇಕ ಬಾರಿ ಮನವಿ ಮಾಡಿದ್ದರೂ ಉದಾಸೀನ ತೋರುತ್ತಾ ವಾಯ್ದೆ-ಸಬೂಬು ಹೇಳುತ್ತಿದ್ದರು. ಈ ಬಗ್ಗೆ ನೀಡಲಾದ ದೂರಿನ ಮೇರೆಗೆ 45 ವರ್ಷದ ಸಾಧ್ವಿಯನ್ನು ಬಂಧಿಸಲಾಗಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin