ಎಸ್.ಎಂ.ಕೃಷ್ಣ ರಾಜಕೀಯದಿಂದ ನಿವೃತ್ತಿ ಹೊಂದಬಾರದು : ಹೆಚ್ಡಿಕೆ

ಈ ಸುದ್ದಿಯನ್ನು ಶೇರ್ ಮಾಡಿ

HD-Kumarasamy

ಕನಕಪುರ, ಜ.29- ಮಾಜಿ ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್‍ನ ಹಿರಿಯ ರಾಜಕಾರಣಿ ಎಸ್.ಎಂ. ಕೃಷ್ಣರವರು ರಾಜಕೀಯ ನಿವೃತ್ತಿ ಹೊಂದದೇ ಇನ್ನೂ ಮುಂದುವರೆಯಬೇಕು ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹೇಳಿದರು. ತಾಲೂಕಿನ ಹಾರೋಹಳ್ಳಿ ಹೋಬಳಿ ಪಿಚ್ಚನಕೆರೆಯಲ್ಲಿ ಶುದ್ಧ ಕುಡಿಯುವ ನೀರಿನ ಘಟಕಕ್ಕೆ ಚಾಲನೆ ನೀಡಿ ಬಳಿಕ ಪತ್ರಕರ್ತರೊಂದಿಗೆ ಮಾತನಾಡಿ, ಎಸ್.ಎಂ.ಕೃಷ್ಣರವರು ಹಿರಿಯ ಮುತ್ಸದ್ಧಿ, ಸಭ್ಯ ಮತ್ತು ಸುಸಂಸ್ಕøತ ರಾಜಕಾರಣಿಯಾಗಿದ್ದಾರೆ. ಅವರ ಬಗ್ಗೆ ಗೌರವ ಇರುವುದರಿಂದ ಅವರು ರಾಜಕೀಯದಲ್ಲಿ ಮುಂದುವರೆಯಬೇಕು ಎಂದು ಆಶಿಸಿದರು.

ಕನಸಿನ ಮಾತು: ರಾಜ್ಯ ಸಭಾ ಚುನಾವಣೆಯಲ್ಲಿ ಪಕ್ಷಕ್ಕೆ ದ್ರೋಹವೆಸಗಿ ಪಕ್ಷದಿಂದ ಉಚ್ಛಾಟನೆಯಾಗಿರುವ ಏಳು ಮಂದಿ ಶಾಸಕರ ನಡೆ-ನುಡಿ ಹಾಗೂ ಅವರು ನಮ್ಮೊಡನೆ ಇಟ್ಟುಕೊಂಡಿದ್ದ ಒಡನಾಟಗಳು ನಮಗೆ ಕನಸಿನ ಮಾತಾಗಿವೆ. ಅವರಿಗೂ ನಮಗೂ ಸಂಬಂಧವಿಲ್ಲದ ವಿಚಾರವಾಗಿರುವುದರಿಂದ ಅವರ ಬಗ್ಗೆ ನಾನು ಏನೂ ಚರ್ಚಿಸುವುದಿಲ್ಲ ಎಂದು ಪತ್ರಕರ್ತರ ಪ್ರಶ್ನೆಗೆ ಕುಮಾರಸ್ವಾಮಿಯವರು ತೀಕ್ಷ್ಣವಾಗಿ ಉತ್ತರಿಸಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin