ಕೃಷ್ಣ ಅವರು ಬಂದರೆ ಸ್ವಾಗತಿಸುತ್ತೇವೆ : ಸದಾನಂದಗೌಡ

ಈ ಸುದ್ದಿಯನ್ನು ಶೇರ್ ಮಾಡಿ

Sadanadagowda

ಮಡಿಕೇರಿ. ಜ.29 : ಮಾಜಿ ಮುಖ್ಯಮಂತ್ರಿ ಅವರು ಬಿಜೆಪಿಗೆ ಬಂದರೆ ಸ್ವಾಗತಿಸುತ್ತೇವೆ ಎಂದು ಕೇಂದ್ರ ಸಚಿವ ಸದಾನಂದಗೌಡ ತಿಳಿಸಿದ್ದಾರೆ. ಎಸ್.ಎಂ.ಕೃಷ್ಣ ಅವರು ಕಾಂಗ್ರೆಸ್ ಪಕ್ಷಕ್ಕೆ ಗುಡ್ ಬೈ ಹೇಳಿದ ಬೆನ್ನಲ್ಲೇ ರಾಜಕೀಯ ಲೆಕ್ಕಚಾರ ಆರಂಭವಾಗತೊಡಗಿದೆ. mಮಡಿಕೇರಿಯಲ್ಲಿ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, ಎಸ್.ಎಂ.ಕೃಷ್ಣ ಅವರಂತಹ ನೇರ ನುಡಿಯ, ಸರಳ ವ್ಯಕ್ತಿತ್ವದವರು ಬಿಜೆಪಿ ಪಕ್ಷಕ್ಕೆ ಬೇಕಾಗಿದೆ. ಕೃಷ್ಣ ಅವರ ವ್ಯಕ್ತಿತ್ವ ಬಿಜೆಪಿಗೆ ಹೊಂದಾಣಿಕೆ ಆಗಲಿದೆ ಎಂದು ಹೇಳಿದರು.

ಅವರು ಬಿಜೆಪಿ ಬಂದರೆ ಪಕ್ಷದ ಶಕ್ತಿ ಅಧಿಕವಾಗುತ್ತದೆ. ಕೃಷ್ಣರಂತ ಸಜ್ಜನ ವ್ಯಕ್ತಿಗಳು ಪಕ್ಷಕ್ಕೆ ಬೇಕು ಎಂದು ಅಭಿಪ್ರಾಯಪಟ್ಟರು. ತಮ್ಮ ಹಿರಿತನವನ್ನು ನಿರ್ಲಕ್ಷಿಸಿದ ಹಿನ್ನೆಲೆಯಲ್ಲಿ ಬೇಸರಕೊಂಡಿದ್ದ ಎಸ್.ಎಂ.ಕೃಷ್ಣ ಅವರು, ನಿನ್ನೆ ಮುಂಜಾನೆ 11 ಗಂಟೆಗೆ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ರಾಜೀನಾಮೆ ಪತ್ರ ರವಾನಿಸಿದ್ದಾರೆ. ಕಾಂಗ್ರೆಸ್ ನಡವಳಿಕೆಯಿಂದ ಮನನೊಂದು ಪಕ್ಷಕ್ಕೆ ರಾಜೀನಾಮೆ ನೀಡಿದ್ದೇನೆ. ಆದರೆ ಸಕ್ರಿಯ ರಾಜಕಾರಣದಿಂದ ದೂರ ಸರಿದಿಲ್ಲ ಎಂದು ಭಾನುವಾರ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಸ್ಪಷ್ಟಪಡಿಸಿದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin