ಗಡಿ ಗೋಡೆ ಬಿಕ್ಕಟ್ಟು ಇತ್ಯರ್ಥಕ್ಕೆ ಟ್ರಂಪ್-ಎನ್ರಿಕ್ ಸಮ್ಮತಿ

ಈ ಸುದ್ದಿಯನ್ನು ಶೇರ್ ಮಾಡಿ

Trump-And-Mexico

ಮೆಕ್ಸಿಕೊ ಸಿಟಿ, ಜ.29-ಅಮೆರಿಕ ಮತ್ತು ಮೆಕ್ಸಿಕೊ ಗಡಿಗಳಲ್ಲಿ ಗೋಡೆ ನಿರ್ಮಿಸುವ ವಿಷಯದಲ್ಲಿ ಭುಗಿಲೆದ್ದಿರುವ ಬಿಕ್ಕಟ್ಟನ್ನು ಶಮನಗೊಳಿಸಲು ಉಭಯ ದೇಶಗಳ ನಾಯಕರು ಮುಂದಾಗಿದ್ದಾರೆ.   ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಮೆಕ್ಸಿಕೊ ಸಹವರ್ತಿ ಎನ್ರಿಕ್ ಪೆನಾ ನಿಟೋ ಈ ಜಟಿಲ ವಿವಾದಕ್ಕೆ ಮಾರ್ಗೋಪಾಯಗಳನ್ನು ಕಂಡುಕೊಳ್ಳುವ ಸಂಬಂಧ ನಿನ್ನೆ ದೂರವಾಣಿ ಮೂಲಕ ಸುದೀರ್ಘ ಮಾತುಕತೆ ನಡೆಸಿದರು. ರಾಜತಾಂತ್ರಿಕ ಉದ್ವಿಗ್ನತೆ ಉಪಶಮನಕ್ಕೆ ಟ್ರಂಪ್-ನಿಟೋ ಸಮ್ಮತಿ ಸೂಚಿಸಿದ್ದು, ವಿವಾದ ಬಗೆಹರಿಯುವ ಆರಂಭಿಕ ಲಕ್ಷಣಗಳು ಗೋಚರಿಸುತ್ತಿವೆ.

ಟ್ರಂಪ್ ಜೊತೆ ಮಂಗಳವಾರ ನಿಗದಿಯಾಗಿದ್ದ ಭೇಟಿಯನ್ನು ನಿಟೋ ರದ್ದುಗೊಳಿಸಿದ ಎರಡು ದಿನಗಳ ಬಳಿಕ ಈ ಆಶಾದಾಯಕ ಬೆಳವಣಿಗೆ ಕಂಡುಬಂದಿದೆ. ಗಡಿ ಗೋಡೆ ನಿರ್ಮಾಣ ವೆಚ್ಚವನ್ನು ಮೆಕ್ಸಿಕೋ ಪಾವತಿಸಬೇಕೆಂಬ ವಿಚಾರದಲ್ಲಿ ಎರಡು ರಾಷ್ಟ್ರಗಳ ನಡುವೆ ತೀವ್ರ ಭಿನ್ನಾಭಿಪ್ರಾಯ ಸೃಷ್ಟಿಯಾಗಿತ್ತು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin