ದೇಶಭಕ್ತಿ ಜಾಗೃತಿ ಮೂಡಿಸಿದ ಅದ್ದೂರಿ ರಾಯಣ್ಣಾ ಜ್ಯೋತಿಯಾತ್ರೆ

ಈ ಸುದ್ದಿಯನ್ನು ಶೇರ್ ಮಾಡಿ

23

ಬೈಲಹೊಂಗಲ,ಜ.29- ಸ್ವಾತಂತ್ರ್ಯ ಹೋರಾಟಗಾರ, ಶೂರ ಸಂಗೊಳ್ಳಿ ರಾಯಣ್ಣನ ಆತ್ಮಜ್ಯೋತಿ ಯಾತ್ರೆ ನಂದಗಡದಿಂದ ಪಟ್ಟಣದ ರಾಣಿ ಚನ್ನಮ್ಮ ಸಮಾಧಿವರೆಗೆ ಅಭಿಮಾನಿಗಳ ಹರ್ಷೋದ್ಘಾರದ ಮಧ್ಯೆ ಅದ್ಧೂರಿಯಿಂದ ನಡೆಯಿತು. ಅಖಿಲ ಕರ್ನಾಟಕ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಸ್ಮರಣೋತ್ಸವ ಸಮಿತಿಯಿಂದ 18ನೇ ವರ್ಷದ ಜ್ಯೋತಿ ಯಾತ್ರೆಯಲ್ಲಿ ಸಮಿತಿ ಅಧ್ಯಕ್ಷ ರಾಜು ಸೊಗಲ, ಉಪಾಧ್ಯಕ್ಷ ಸೋಮನಾಥ ಸೊಪ್ಪಿಮಠ, ಗೌರವಾಧ್ಯಕ್ಷ ಕುಮಾರ ದೇಶನೂರ, ಜಾನಪದ ಕಲಾವಿದ ಸಿ.ಕೆ. ಮೆಕ್ಕೇದ, ಜಿಲ್ಲಾ ಕಸಾಪ ಅಧ್ಯಕ್ಷೆ ಮಂಗಲಾ ಮೆಟಗುಡ್ಡ, ಪುರಸಭೆ ವಿಪಕ್ಷ ನಾಯಕ ಮಹಾಂತೇಶ ತುರಮರಿ, ಬಿಜೆಪಿ ಬ್ಲಾಕ್ ಅಧ್ಯಕ್ಷ ಮಡಿವಾಳಪ್ಪಾ ಹೋಟಿ, ಶ್ರೀಶೈಲ ಯಡಳ್ಳಿ, ಜಿಲ್ಲಾ ಕಾಂಗ್ರೆಸ್ ಮುಖಂಡರಾದ ಮಹಾಂತೇಶ ಮತ್ತಿಕೊಪ್ಪ, ಈರಣ್ಣಾ ಬೆಟಗೇರಿ, ಪುರಸಭೆ ಸದಸ್ಯ ಮಹೇಶ ಹರಕುಣಿ, ಬಸವರಾಜ ಕಲಾದಗಿ, ಚಂದ್ರಯ್ಯಾ ಯರಗಟ್ಟಿಮಠ, ಶಿವಾನಂದ ಬಡ್ಡಿಮನಿ, ಜಮ್ಮು ಕಾಶ್ಮೀರದಲ್ಲಿ ಯೋಧನಾಗಿರುವ ವೀರು ದೊಡ್ಡವೀರಪ್ಪನವರ ಸೇರಿದಂತೆ ನೂರಾರು ಯುವಕರು ಜ್ಯೋತಿಯಾತ್ರೆ ಕೈಕೊಂಡರು.

ಶಾಸಕ ಡಾ. ವಿಶ್ವನಾಥ ಪಾಟೀಲ ರಾಯಣ್ಣನ ಸಮಾಧಿಗೆ ವಂದಿಸಿ, ಜ್ಯೋತಿಯಾತ್ರೆಗೆ ಚಾಲನೆ ನೀಡಿದರು. ಕುರುಬ ಸಮಾಜ ಜಿಲ್ಲಾ ಮುಖಂಡ ಬಸವರಾಜ ನೀಲಗಾರ, ಶಂಕರ ಪಟಾತ ಮುಂತಾದವರು ಸೇರಿದಂತೆ ಪತ್ರಕರ್ತರ ಬಳಗದವರು ಜ್ಯೋತಿಯಾತ್ರೆ ಜತೆಗೆ ಸಂಚರಿಸಿದರು. ದೇಣಿಗೆ ಪಡೆಯದೆ ಸ್ವಯಂ ಸ್ಪೂರ್ತಿಯಿಂದ 40 ವಾಹನಗಳಲ್ಲಿ ಸಂಚರಿಸಿ ಜ್ಯೋತಿ ತರಲಾಯಿತು. ಕಿತ್ತೂರ, ನಂದಗಡ, ಬೀಡಿ, ಸಂಗೊಳ್ಳಿ, ಬೈಲಹೊಂಗಲದಲ್ಲಿ ರಾಯಣ್ಣನ ಜ್ಯೋತಿಗೆ ನೀರು ಹಾಕಿ ಆರತಿ ಬೆಳಗಿ ಹೆಣ್ಣು ಮಕ್ಕಳು ವಂದನೆ ಸಲ್ಲಿಸಿದರು. ಸಂಜೆ 4ಕ್ಕೆ ರಾಯಣ್ಣ ಜ್ಯೋತಿ ಪಟ್ಟಣ ಪ್ರವೇಶಿಸುತ್ತಿದಂತೆ ಅದ್ದೂರಿ ಸ್ವಾಗತ ನೀಡಲಾಯಿತು. ಪುರಸಭೆ ಅಧ್ಯಕ್ಷ ರಾಜು ಜನ್ಮಟ್ಟಿ, ಚಿತ್ರನಟ ಶಿವರಂಜನ್ ಬೋಳಣ್ಣವರ, ಶ್ರೀಶೈಲ ಬೋಳಣ್ಣವರ, ರಾಜ್ಯ ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಶಂಕರ ಮಾಡಲಗಿ ಹಾಗೂ ಅನೇಕ ಗಣ್ಯರು ಹೃತ್ಪೂರ್ವಕ ಸ್ವಾಗತ ಕೋರಿದರು. ಸಂಜೆ ರಾಣಿ ಚನ್ನಮ್ಮ ಸಮಾಧಿ ಸ್ಥಳದಲ್ಲಿ ಸಮಾರೋಪ ಸಮಾರಂಭ ನಡೆಯಿತು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin