ನಡಾಲ್ ಮಣಿಸಿದ ಫೆಡರರ್’ಗೆ ಆಸ್ಟ್ರೇಲಿಯನ್ ಓಪನ್ ಕಿರೀಟ

ಈ ಸುದ್ದಿಯನ್ನು ಶೇರ್ ಮಾಡಿ

Nadal

ಮೆಲ್ಬೋರ್ನ್. ಜ.29 : ಆಸ್ಟ್ರೇಲಿಯನ್ ಓಪನ್ ಅಂತಿಮ ಹಣಾಹಣಿಯಲ್ಲಿ ಸ್ವಿಟ್ಜರ್ಲೆಂಡ್ ನ ರೋಜರ್ ಫೆಡರರ್ ಅವರು ಸ್ಪೇನಿನ ರಾಫೆಲ್ ನಡಾಲ್ ವಿರುದ್ಧ ಜಯ ಸಾಧಿಸಿ 5ನೇ ಬಾರಿಗೆ ಆಸ್ಟ್ರೇಲಿಯನ್ ಓಪನ್ ಗೆದ್ದಿದ್ದಾರೆ. ಈ ಮೂಲಕ ರೋಜರ್ ಫೆಡರರ್ ತಮ್ಮ 18ನೇ ಗ್ರಾಂಡ್ ಸ್ಲ್ಯಾಮ್ ಅನ್ನು ಮುಡಿಗೇರಿಸಿಕೊಂಡಿದ್ದಾರೆ. ಆಸ್ಟ್ರೇಲಿಯಾದ ಮೆಲ್ಬೋರ್ನ್ ನಲ್ಲಿ ನಡೆದ ತೀವ್ರ ಕುತೂಹಲ ಕೆರಳಿಸಿದ್ದ ಆಸ್ಟ್ರೇಲಿಯನ್ ಓಪನ್ ಟೆನ್ನಿಸ್ ಟೂರ್ನಿಯ ಪುರುಷರ ಸಿಂಗಲ್ಸ್ ಫೈನಲ್ ಪಂದ್ಯದಲ್ಲಿ ಫೆಡರರ್ -ನಡಾಲ್ ರನ್ನು 6-4, 3-6, 6-1, 3-6, 6-3 ನೇರ ಸೆಟ್ ಗಳ ಅಂತರದಿಂದ ಮಣಿಸಿದರು.

ಆಸ್ಟ್ರೇಲಿಯನ್ ಓಪನ್ ಇತಿಹಾಸದಲ್ಲಿ ನಡಾಲ್-ಫೆಡರರ್ 8 ವರ್ಷಗಳ ಬಳಿಕ ಪ್ರಶಸ್ತಿ ಸೆಣಸಾಟದಲ್ಲಿ ಎದುರಾದರು. 2009ರ ಟೂರ್ನಿಯ ಕೊನೇ ಫೈನಲ್ ಮುಖಾಮುಖಿಯಲ್ಲಿ ನಡಾಲ್ ಚಾಂಪಿಯನ್ ಆಗಿದ್ದರು. 2014ರ ಫ್ರೆಂಚ್ ಓಪನ್ನಲ್ಲಿ ಕೊನೇ ಬಾರಿ ಚಾಂಪಿಯನ್ ಆಗಿದ್ದ ನಡಾಲ್ ಅವರು ಯಾವುದೇ ಪ್ರಮುಖ ಟೂರ್ನಿ ಫೈನಲ್ ತಲುಪಿರಲಿಲ್ಲ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin