‘Smile More..Score More’ : ವಿದ್ಯಾರ್ಥಿಗಳಿಗೆ ಮನ್ ಕಿ ಬಾತ್ ನಲ್ಲಿ ಮೋದಿ ಕಿವಿಮಾತು

ಈ ಸುದ್ದಿಯನ್ನು ಶೇರ್ ಮಾಡಿ

Man-Ki-Baat

ನವದೆಹಲಿ,ಜ.29-ಪರೀಕ್ಷೆಗಳನ್ನು ಎದುರಿಸಲು ಯಾವುದೇ ರೀತಿಯ ಒತ್ತಡಕ್ಕೆ ಒಳಗಾಗದಂತೆ ವಿದ್ಯಾರ್ಥಿ ಸಮೂಹಕ್ಕೆ ಕರೆ ನೀಡಿರುವ ಪ್ರಧಾನಿ ನರೇಂದ್ರ ಮೋದಿ, ಪರೀಕ್ಷೆಗಳನ್ನು ಹಬ್ಬ ಅಥವಾ ಉತ್ಸವದ ರೀತಿ ಆಚರಿಸುವಂತೆ ಸಲಹೆ ಮಾಡಿದ್ದಾರೆ. ಹೊಸ ವರ್ಷದ ಪ್ರಥಮ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸ್ಮೈಲ್ ಮೋರ್-ಸ್ಕೋರ್ ಮೋರ್ ಎಂದು ವಿದ್ಯಾರ್ಥಿಗಳಿಗೆ ಶುಭ ಕೋರಿದರು.   ಪರೀಕ್ಷೆಗಳೆಂದರೆ ವಿದ್ಯಾರ್ಥಿಗಳು ಮತ್ತು ಅವರ ಪೋಷಕರು ಒತ್ತಡಕ್ಕೊಳಗಾಗುವುದು ಸಾಮಾನ್ಯ. ಆದರೆ ಪರೀಕ್ಷೆಗಳು ಉತ್ಸವದ ಸ್ವರೂಪ ಪಡೆದುಕೊಳ್ಳಬೇಕಿದೆ. ವಿದ್ಯಾರ್ಥಿಗಳು ಮತ್ತು ಪೋಷಕರು ಸಹ ಪರೀಕ್ಷಾ ಕಾಲವನ್ನು ಒಂದು ರೀತಿಯ ಹಬ್ಬವನ್ನಾಗಿ ಸಂಭ್ರಮದಿಂದ ಎದುರಿಸುವಂತ ವಾತಾವರಣ ನಿರ್ಮಾಣವಾಗಬೇಕು ಎಂದು ಹೇಳಿದರು.

ಪರೀಕ್ಷೆಗಳು ವಿದ್ಯಾರ್ಥಿಗಳನ್ನು ಎದುರಿಸಲೇಬೇಕೆಂಬ ಕಾರಣದಿಂದ ನಡೆಸುವುದಿಲ್ಲ. ಅವರ ಶೈಕ್ಷಣಿಕ ಮಟ್ಟವನ್ನು ಮಾಪನ ಮಾಡಲು ನಡೆಸಲಾಗುತ್ತದೆ. ಆದ್ಯಾಗೂ ಒಬ್ಬ ವಿದ್ಯಾರ್ಥಿಯ ಸಾಫಲ್ಯ-ವೈಫಲ್ಯಕ್ಕೆ ಸಂಬಂಧಪಟ್ಟಿದ್ದಲ್ಲ ಎಂದು ಮೋದಿ ವ್ಯಾಖ್ಯಾನಿಸಿದರು.   ಹ್ಯಾಪಿ ಮೈಂಡ್ ಇಸ್ ಎ ಸಿಕ್ರೇಟ್ ಆಫ್ ಮಾರ್ಕ್‍ಶೀಟ್ ಎಂದು ವ್ಯಾಖ್ಯಾನಿಸಿದ ಅವರು, ಒತ್ತಡ, ಭೀತಿಯಿಲ್ಲದೆ ಪ್ರಶಾಂತಚಿತ್ತವಾಗಿ ಪರೀಕ್ಷೆ ಬರೆಯಿರಿ ಎಂದು ಸಲಹೆಯಿತ್ತರು.  ದೇಶಕ್ಕಾಗಿ ಪ್ರಾಣಾರ್ಪಣೆ ಮಾಡಿದ, ಕಾಶ್ಮೀರದಲ್ಲಿ ಹಿಮಪಾತದಲ್ಲಿ ಮೃತಪಟ್ಟ ಯೋಧರಿಗೆ ದೇಶವು ನಮನ ಸಲ್ಲಿಸಬೇಕು. ನಾಳೆ ನಾವೆಲ್ಲರೂ ಹುತಾತ್ಮ ಯೋಧರಿಗಾಗಿ ಎರಡು ನಿಮಿಷ ಮೌನಾಚರಿಸೋಣ ಎಂದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin