ಅಮೇರಿಕಾದಲ್ಲಿ ಉಗ್ರರ ದಾಳಿ ತಪ್ಪಿಸುವುದು ಮುಸ್ಲಿಂ ವಲಸಿಗರ ಮೇಲೆ ನಿರ್ಬಂಧ : ಶ್ವೇತಭವನ ಸ್ಪಷ್ಟನೆ

ಈ ಸುದ್ದಿಯನ್ನು ಶೇರ್ ಮಾಡಿ

Trump-01
ವಾಷಿಂಗ್ಟನ್, ಜ.30- ಐರೋಪ್ಯ ದೇಶಗಳಲ್ಲಿ ಹೆಚ್ಚುತ್ತಿರುವ ಭಯೋತ್ಪಾದಕರ ದಾಳಿಯನ್ನು ಅಮೆರಿಕದಲ್ಲಿ ತಪ್ಪಿಸುವ ಉದ್ದೇಶದಿಂದಲೇ ಏಳು ಮುಸ್ಲಿಂ ಪ್ರಾಬಲ್ಯದ ರಾಷ್ಟ್ರಗಳ ವಲಸಿಗರ ಮೇಲೆ ನಿರ್ಬಂಧ ಹೇರಲು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಡಳಿತ ನಿರ್ಧರಿಸಿದೆ ಎಂದು ಶ್ವೇತಭವನ ಸ್ಪಷ್ಟಪಡಿಸಿದೆ.  ಯುರೋಪ್‍ನ ಫ್ರಾನ್ಸ್, ಜರ್ಮನಿ ಅಥವಾ ಬೆಲ್ಜಿಯಂ ದೇಶಗಳ ಕೆಲವು ಭಾಗಗಲ್ಲಿ ಉಗ್ರರ ಆಕ್ರಮಣ ಪ್ರಕರಣಗಳು ಹೆಚ್ಚಾಗುತ್ತಿವೆ. ಈ ಸನ್ನಿವೇಶವನ್ನು ಅಮೆರಿಕದಲ್ಲಿ ತಪ್ಪಿಸಲು ಈ ಕ್ರಮ ಅನಿವಾರ್ಯವಾಗಿದೆ ಎಂದು ಶ್ವೇತಭವನದ ಹಿರಿಯ ಅಕಾರಿಯೊಬ್ಬರು ತಿಳಿಸಿದ್ದಾರೆ.

ಪಾಕ್ ಪ್ರಜೆಗಳಿಗೂ ನಿರ್ಬಂಧ :

ಇದೇ ವೇಳೆ, ಟ್ರಂಪ್ ನೂತನ ವಲಸೆ ನಿರ್ಬಂಧ ರಾಷ್ಟ್ರಗಳ ಪಟ್ಟಿಗೆ ಪಾಕಿಸ್ತಾನ ಕೂಡ ಸೇರ್ಪಡೆಯಾಗುವ ಸುಳಿವನ್ನು ಶ್ವೇತಭವನದ ಸಿಬ್ಬಂದಿ ಮುಖ್ಯಸ್ಥ ರೈನ್ ಪ್ರೀಬಸ್ ನೀಡಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

 

Facebook Comments

Sri Raghav

Admin