ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (30-01-2017)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ  : ಅರಿತವರು ಮೂರ್ಖರ ಸಹವಾಸದಲ್ಲಿದ್ದರೂ ಬದಲಾಯಿಸುವುದಿಲ್ಲ. ಹಣವಿದ್ದರೂ ಚಂಚಲರಾಗದೆ ಲೋಕ ಕಲ್ಯಾಣಕ್ಕಾಗಿ ಬೆಳೆಯುತ್ತಾರೆ. ಇದಕ್ಕೆ ತಾವರೆಯ ಮೊಗ್ಗು ದೃಷ್ಟಾಂತ. ಕೆಸರಲ್ಲಿದ್ದರೂ ಕೊಳೆಯಾಗುವುದಿಲ್ಲ. ಕಾಂತಿಯಿದ್ದರೂ ಚಂಚಲತೆ ಇಲ್ಲ. ಸೂರ್ಯನ ಕಿರಣಗಳಿಂದ ಅರಳುತ್ತವೆ.  – ಅನ್ಯೋಕ್ತಿಸ್ತಬಕ

Rashi

ಪಂಚಾಂಗ 30.01.2017,  ಸೋಮವಾರ

ಸೂರ್ಯ ಉದಯ  ಬೆ.06.46 / ಸೂರ್ಯ ಅಸ್ತ  ಸಂ.06.20
ಚಂದ್ರ ಉದಯ ಬೆ.08.55 / ಚಂದ್ರ ಅಸ್ತ ರಾ.09.13
ದುರ್ಮುಖಿ ಸಂವತ್ಸರ / ಉತ್ತರಾಯಣ / ಶಿಶಿರ ಋತು / ಮಾಘ ಮಾಸ / ಶುಕ್ಲ ಪಕ್ಷ
ತಿಥಿ: ತೃತೀಯಾ  (ರಾ.04.44) / ನಕ್ಷತ್ರ: ಶತಭಿಷಾ (ರಾ.11.04)
ಯೋಗ: ವರಿಯಾನ್ (ಬೆ.11.31)  / ಕರಣ: ತೈತಿಲ-ಗರಜೆ  (ಸಾ.05.07-ರಾ.04.44)
ಮಳೆ ನಕ್ಷತ್ರ: ಶ್ರವಣ  / ಮಾಸ: ಮಕರ / ತೇದಿ: 17

ರಾಶಿ ಭವಿಷ್ಯ :

ಮೇಷ : ವೃತ್ತಿರಂಗದ ಸಮಸ್ಯೆಗಳು ನಿವಾರಣೆಯಾಗಲಿವೆ
ವೃಷಭ : ದೇಹಾರೋಗ್ಯದಲ್ಲಿ ಏರುಪೇರಾಗಲಿದೆ, ಧೈರ್ಯ, ಪ್ರಯತ್ನ ಬಲದಿಂದ ಮುಂದುವರಿಯಿರಿ
ಮಿಥುನ: ದೇವರ ಪ್ರಾರ್ಥನೆಯಿಂದ ನಿರೀಕ್ಷಿತ ಕಾರ್ಯಸಿದ್ಧಿ ಇರುತ್ತದೆ, ಆರೋಗ್ಯ ಸುಧಾರಿಸಲಿದೆ
ಕಟಕ : ನ್ಯಾಯಾಲಯದ ಕೆಲಸ- ಕಾರ್ಯಗಳಲ್ಲಿ ಹಿನ್ನಡೆ ಉಂಟಾಗಲಿದೆ
ಸಿಂಹ: ನಿರುದ್ಯೋಗಿಗಳು ಸಂಚಾರದಿಂದ ಉದ್ಯೋಗ ಲಾಭ ಪಡೆಯುವ ಸಾಧ್ಯತೆಗಳಿವೆ
ಕನ್ಯಾ: ಅನಗತ್ಯ ಖರ್ಚು-ವೆಚ್ಚ ಗಳು ಆತಂಕಕ್ಕೆ ಕಾರಣವಾಗಲಿವೆ
ತುಲಾ: ಕೋರ್ಟು-ಕಚೇರಿ ಕಾರ್ಯಗಳಲ್ಲಿ ಮುನ್ನಡೆ ಕಾಣುವಿರಿ
ವೃಶ್ಚಿಕ : ವಿದ್ಯಾರ್ಥಿಗಳ ಅಭ್ಯಾಸಕ್ಕೆ ತಕ್ಕ ಫಲಿತಾಂಶ ಸಿಗಲಿದೆ
ಧನುಸ್ಸು: ಅನಾವಶ್ಯಕ ಖರ್ಚು-ವೆಚ್ಚಗಳ ಬಗ್ಗೆ ಹಿಡಿತವಿರಲಿ
ಮಕರ: ವ್ಯಾಪಾರ-ವ್ಯವಹಾರಗಳಲ್ಲಿ ಅಧಿಕ ಲಾಭವಿಲ್ಲ ದಿದ್ದರೂ ನಷ್ಟವಾಗದು, ದೇವರ ಅನುಗ್ರಹ ನಿಮಗಿದೆ
ಕುಂಭ: ತಾಳ್ಮೆ-ಸಮಾಧಾನದಿಂದ ಕಾರ್ಯಸಿದ್ಧಿ, ಉದ್ಯೋಗದಲ್ಲಿ ಸಮಾಧಾನದ ವಾತಾವರಣ ಇರುತ್ತದೆ
ಮೀನ: ಮಹಿಳೆಯರ ಚಿಂತೆಯಿಂದ ಕುಟುಂಬದಲ್ಲಿ ಕಿರಿಕಿರಿ

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin