ಉಡುಪಿ ಕೃಷ್ಣನ ದರ್ಶನ ಪಡೆದ ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ

ಈ ಸುದ್ದಿಯನ್ನು ಶೇರ್ ಮಾಡಿ

Devegowda

ಉಡುಪಿ. ಜ.30 : ಉಡುಪಿ ಕೃಷ್ಣಮಠಕ್ಕೆ ಇಂದು ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ ಭೇಟಿ ನೀಡಿ ಶ್ರೀಕೃಷ್ಣನ ದರ್ಶನ ಪಡೆದರು. ಕಡೆಗೋಲು ಕೃಷ್ಣನಿಗೆ ವಿಶೇಷ ಸೇವೆ ಸಲ್ಲಿಸಿದ ಅವರು ಪೇಜಾವರ ವಿಶ್ವೇಶತೀರ್ಥ ಸ್ವಾಮೀಜಿ ಭೇಟಿ ಮಾಡಿ ಅನುಗ್ರಹ ಮಂತ್ರಾಕ್ಷತೆ ನೀಡಿದ ಪಡೆದರು.  ಇದೆ ವೇಳೆ ಮಾತನಾಡಿದ ಅವರು ಎಸ್.ಎಂ. ಕೃಷ್ಣ ಅವರ ಜೊತೆ ನಾನೇನೂ ಮಾತನಾಡಿಲ್ಲ, ರಾಜಕೀಯ ನಿವೃತ್ತನಾಗಲ್ಲ ಎಂದಿದ್ದಾರೆ. ಕೃಷ್ಣ ಅವರು ಪ್ರಬುದ್ಧ ರಾಜಕಾರಣಿ ಅವರ ಮುಂದಿನ ಮಾರ್ಗ ಅವರಿಗೆ ಬಿಟ್ಟದ್ದು ಎಂದಿದ್ದಾರೆ. ಜಾಫರ್ ಷರೀಫ್ ಪಕ್ಷ ತೊರೆಯುವ ಬಗ್ಗೆ ನನಗೆ ಗೊತ್ತಿಲ್ಲ, ನನಗೂ ಷರೀಫ್ ಗೂ ಸಂಬಂಧವಿಲ್ಲ ಎಂದಿದ್ದಾರೆ.

ಏಕರೂಪ ನೀತಿ ಜಾರಿ ವಿಚಾರ :

ಭಾರತ ಹಲವು ಧರ್ಮಗಳನ್ನೊಳಗೊಂಡ ದೇಶ. ಇಲ್ಲಿ ಹಲವು ಜಾತಿ- ಸಂಸ್ಕೃತಿಯಿದೆ. ಪಾರ್ಲಿಮೆಂಟಲ್ಲಿ ಸಮಯ ಬಂದಾಗ ನನ್ನ ವಾದ ಮಂಡಿಸ್ತೇನೆ ಎಂದು ದೇವೇಗೌಡ ಹೇಳಿದ್ದಾರೆ.

ಜೆಡಿಎಸ್ ಶಾಸಕರ ರೆಬೆಲ್ ವಿಚಾರ :

ಗೋಪಾಲಯ್ಯ ಪತ್ರ ಬರೆದು ಕ್ಷಮೆ ಕೇಳಿದ್ದಾರೆ. ಉಳಿದವರು ಸಿಎಂ ಅವರನ್ನು ಭೇಟಿಯಾಗಿದ್ದಾರೆ. ಅವರ ದಾರಿ ಸುಗಮವಾಗಿದೆ, ಶಿಸ್ತು ಸಮಿತಿ ಸೂಕ್ತ ನಿರ್ಧಾರ ತೆಗೆದುಕೊಳ್ಳಲಿದೆ ಎಂದು ಉಡುಪಿಯಲ್ಲಿ ಮಾಜಿ ಪ್ರಧಾನಿ ಎಚ್. ಡಿ ದೇವೇಗೌಡ ಹೇಳಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin