ಗುಡ್ ನ್ಯೂಸ್ : ಫೆ.1ರಿಂದ ಎಟಿಎಂನಿಂದ ಹಣ ವಿತ್ ಡ್ರಾ ಮಾಡಲು ಯಾವುದೇ ಮಿತಿ ಇಲ್ಲ

ಈ ಸುದ್ದಿಯನ್ನು ಶೇರ್ ಮಾಡಿ

ATM-01

ನವದೆಹಲಿ. ಜ. 30 : ನೋಟ್ ಬ್ಯಾನ್ ನಂತರ ಹಣದ ಸಮಸ್ಯೆಯಿಂದ ಒದ್ದಾಡಿದ್ದ ಗ್ರಾಹಕರಿಗೆ ಆರ್ಬಿಐ ಬಿಗ್ ರಿಲೀಫ್ ನೀಡಿದೆ. ಮುಂದಿನ ಫೆ.1 ರಿಂದ ಎಟಿಎಂ ಗಳಲ್ಲಿ ಎಷ್ಟು ಹಣ ಬೇಕಾದರೂ ಪಡೆಯಬಹುದಾಗಿದೆ. ನೋಟ್ ಬ್ಯಾನ್ ನಂತರ ಹೇರಿದ್ದ ಎಟಿಎಂಗಳಿಂದ ಹಣ ಪಡೆಯುವ ಮಿತಿಯನ್ನು ಈಗ ತೆಗೆದುಹಾಕಲಾಗಿದ್ದು , ಈ ಹಿಂದೆ ಇದ್ದಂತಹ 40 ರಿಂದ 50 ಸಾವಿರ ರೂ. ಗಳನ್ನೂ ಒಂದೇ ದಿನ ಪಡೆಯಬಹುದಾಗಿದೆ.  ಸೇವಿಂಗ್ ಬ್ಯಾಂಕ್ ಖಾತೆದಾರರಿಗೆ ವಾರಕ್ಕೆ 24 ಸಾವಿರ ಮಿತಿ ಮುಂದುವರಿಯಲಿದ್ದು, ಕರೆಂಟ್‍ ಅಕೌಂಟ್ ಮತ್ತು ಓವರ್ ಡ್ರಾಫ್ಟ್ ಅಕೌಂಟ್ ಗಳಿಗೆ ಯಾವುದೇ ಮಿತಿ ಇರುವುದಿಲ್ಲ. ಈ ಆದೇಶ ಇಂದಿನಿಂದಲೇ ಅನ್ವಯಿಸಲಿದೆ.

ಆರ್ಬಿಐ ಹೊರಡಿಸಿರುವ ಈ ಆದೇಶದಿಂದ ಆರ್ಥಿಕ ಸ್ಥಿತಿ ಮತ್ತೆ ಸಹಜ ಸ್ಥಿತಿಗೆ ಬರುವ ಸಾಧ್ಯತೆಯಿದೆ. ಬಜೆಟ್ ಗೆ ಮುನ್ನವೇ ಇದು ಪ್ರಕಟವಾಗಿರುವುದರಿಂದ ಕೇಂದ್ರ ಸರ್ಕಾರದ ಮೇಲೆ ವಿಪಕ್ಷಗಳು ಮುಗಿಬೀಳುವುದು ತಪ್ಪಲಿದೆ ಎಂದು ನಿರೀಕ್ಷಿಸಲಾಗಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin