ತನ್ನ ಪ್ರಾಣ ಕೊಟ್ಟು ತಾಯಿ, ಮಗುವಿನ ಜೀವ ಉಳಿಸಿದ ರೈಲ್ವೆ ಉದ್ಯೋಗಿ..!

ಈ ಸುದ್ದಿಯನ್ನು ಶೇರ್ ಮಾಡಿ

Trrain--00--001

ಢಾಕಾ, ಜ.30– ತಾಯಿ ಮತ್ತು ಮಗುವಿನ ಜೀವ ಉಳಿಸಿದ ಬಾಂಗ್ಲಾದೇಶ ರೈಲ್ವೆ ಉದ್ಯೋಗಿಯೊಬ್ಬರಿಗೆ ರೈಲು ಅಪ್ಪಳಿಸಿ ಮೃತಪಟ್ಟ ಘಟನೆ ನಡೆದಿದೆ. ಬಾಂಗ್ಲಾದೇಶ ರೈಲು ಹಳಿ ನಿರ್ವಹಣಾ ಕಾರ್ಮಿಕ ಬಾದಲ್ ಮಿಯಾ (58) ದುರಂತ ಸಾವಿಗೀಡಾದ ಪ್ರಾಣರಕ್ಷಕ. ಎಂಟು ಮಕ್ಕಳ ತಂದೆಯಾದ ಅವರು ಸದ್ಯದಲ್ಲೇ ನಿವೃತ್ತರಾಗಲಿದ್ದರು.   ರಾಜಧಾನಿ ಢಾಕಾದಲ್ಲಿ ಒಬ್ಬ ಮಹಿಳೆ ಹಾಗೂ ಐದು ವರ್ಷದ ಹೆಣ್ಣು ಮಗು ರೈಲು ಹಳಿ ದಾಟುವ ಪ್ರಯತ್ನದಲ್ಲಿದ್ದರು. ಆಗ ಇಂಟರ್‍ಸಿಟಿ ರೈಲೊಂದು ವೇಗವಾಗಿ ಬರುವುದನ್ನು ನೋಡಿ ಬಾದಲ್ ತಕ್ಷಣ ಟ್ರ್ಯಾಕ್‍ಗೆ ಧುಮುಕಿ ಇಬ್ಬರನ್ನು ಸುರಕ್ಷಿತವಾಗಿ ಮುಂದಕ್ಕೆ ತಳ್ಳಿದರು. ಆದರೆ ಹಳಿಯಿಂದ ಹಾರಲು ಯತ್ನಿಸಿದ ಅವರಿಗೆ ರೈಲು ಬಡಿದು ಸ್ಥಳದಲ್ಲೇ ಮೃತಪಟ್ಟರು ಎಂದು ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಅರೀಫ್ ಉಜ್ ಜಮಾನ ತಿಳಿಸಿದ್ದಾರೆ.

ಇಂಥ ಪ್ರಾಣರಕ್ಷಕ ಸಹದ್ಯೋಗಿಯನ್ನು ಕಳೆದುಕೊಂಡಿದ್ದು ನಮಗೆ ಆಘಾತವಾಗಿದೆ. ಪರೋಪಕಾರ ಮತ್ತು ಪರರ ಕಾಳಜಿಗೆ ಇದು ಉತ್ತಮ ನಿದರ್ಶನವಾಗಿದೆ ಎಂದು ಅವರು ಶ್ಲಾಘಿಸಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin