ದಿನಕ್ಕೆ ಕೇವಲ 5 ರೂ.ಗಾಗಿ ಕೂಲಿ ಕೆಲಸ ಮಾಡಿದ್ದ ‘ಗ್ರೇಟ್’ ಖಲಿ.. !

ಈ ಸುದ್ದಿಯನ್ನು ಶೇರ್ ಮಾಡಿ

Khali-01

ನವದೆಹಲಿ, ಜ.30-ಡಬ್ಲ್ಯುಡಬ್ಲ್ಯುಎಫ್ ಅಖಾಡದಲ್ಲಿ ದೈತ್ಯಪಟುಗಳನ್ನು ಒಂದೇ ಏಟಿಗೆ ಹೊಡೆದುರುಳಿಸಿ ವಿಶ್ವವಿಖ್ಯಾತರಾಗಿರುವ ಗ್ರೇಟ್ ಖಲಿ (ದಲಿಪ್ ಸಿಂಗ್ ರಾಣಾ) ಬಾಲ್ಯದಲ್ಲಿ ಕೇವಲ 5 ರೂ.ಗಳಿಗೆ ದಿನಗೂಲಿ ಕಾರ್ಮಿಕನಾಗಿ ದುಡಿದಿದ್ದರು. ಹೌದು ಇಂಥ ವಾಸ್ತವ ಮತ್ತು ಕುತೂಹಲಕಾರಿ ಸಂಗತಿಗಳು ಅವರೇ ಬರೆದಿರುವ ಪುಸ್ತಕದಲ್ಲಿ ಅಡಕವಾಗಿವೆ.  ಕಿತ್ತು ತಿನ್ನುವ ಬಡತನ ಮತ್ತು ದಾರಿದ್ರ್ಯವನ್ನೇ ಹಾಸಿ ಹೊದಿದ್ದ ತಂದೆ-ತಾಯಿಗೆ ಖಲಿಯನ್ನು ಓದಿಸಲು ತಿಂಗಳಿಗೆ 2.50 ರೂ. ಕೂಡ ಇರಲಿಲ್ಲ. ಓದಿದ್ದು ಸಾಕು, ಕೂಲಿ ಮಾಡಿ ಸಂಸಾರದ ನೊಗ ಎಳೆಯಲು ನೆರವಾಗು ಎಂದು  ಪೋಷಕರು ಖಲಿಗೆ ತಿಳಿಸಿದ್ದರು.

ಪ್ರತಿಭಾವಂತನಾಗಿದ್ದರೂ ಶಾಲೆಗೆ ಶರಣು ಹೇಳಿದ ಖಲಿ ದಿನಕ್ಕೆ 5 ರೂ.ಗಳಿಗೆ ಹಿಮಾಚಲಪ್ರದೇಶದ ಸಿರ್‍ಮೌರ್ ಜಿಲ್ಲೆ ಕುಗ್ರಾಮವೊಂದರ ತೋಟದಲ್ಲಿ ಬಾಲ ಕಾರ್ಮಿಕನಾಗಿ ಕೆಲಸಕ್ಕೆ ಸೇರಿದ್ದರು.   ಬೆಳೆದು ದೊಡ್ಡವರಾದ ಭಾರೀ ಗಾತ್ರದ ಖಲಿ ನಂತರ ಟಿಂಬರ್ ಡಿಪೋದಲ್ಲಿ ದೊಡ್ಡ ದೊಡ್ಡ ಮರದ ದಿಮ್ಮಿಗಳನ್ನು ಲೀಲಾಜಾಲವಾಗಿ ಸ್ಥಳಾಂತರಿಸುತ್ತಿದ್ದರು.   ಇವರ ರಟ್ಟೆಯಲ್ಲಿದ್ದ ಭೀಮಬಲದಿಂದ ಚಕಿತರಾದ ಪೈಲ್ವಾನ್ ಇವರಿಗೆ ದಾರಿ ದೀಪವಾದರು. ಮುಂದೆ ಖಲಿ ಡಬ್ಲ್ಯುಡಬ್ಲ್ಯುಎಫ್ ಹೇವಿ ವೇಟ್ ಚಾಂಪಿಯನ್ ಆದರು, ಬಾಲಿವುಡ್-ಹಾಲಿವುಡ್ ಸಿನಿಮಾಗಳಲ್ಲಿ ನಟಿಸಿ ವಿಶ್ವವಿಖ್ಯಾತರಾದರು.  ಇವರು ಸಾಗಿ ಬಂದ ಕಷ್ಟ-ಕಾರ್ಪಣ್ಯದ ಜೀವನದಿಂದ ಅವರು ಉತ್ತುಂಗಕ್ಕೇರಿದ ಯಶೋಗಾಥೆಯ ಚಿತ್ರಣವು ವಿನೀತ್ ಕೆ. ಬನ್ಸಾಲ್ ಅವರೊಂದಿಗೆ ಖಲಿ ಬರೆದಿರುವ ದಿ ಮ್ಯಾನ್ ಹು ಬಿಕೇಮ್ ಖಲಿ ಶೀರ್ಷಿಕೆಯ ಪುಸ್ತಕದಲ್ಲಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

 

 

Facebook Comments

Sri Raghav

Admin