ದೇಶಾದ್ಯಂತ ಹುತ್ಮಾತರ ದಿನಾಚರಣೆ, ರಾಷ್ಟ್ರಪಿತನಿಗೆ ನಮನ

ಈ ಸುದ್ದಿಯನ್ನು ಶೇರ್ ಮಾಡಿ

Gndhi

ನವದೆಹಲಿ, ಜ.30– ಇಂದು ಹುತಾತ್ಮರ ದಿನಾಚರಣೆ. ಆಂಗ್ಲರ ದಬ್ಬಾಳಿಕೆಯಿಂದ ಭಾರತವನ್ನು ವಿಮುಕ್ತಿಗೊಳಿಸಲು ಹಾಗೂ ದೇಶದ ರಕ್ಷಣೆಗಾಗಿ ತಮ್ಮ ಅಮೂಲ್ಯ ಪ್ರಾಣವನ್ನೇ ಅರ್ಪಣೆ ಮಾಡಿದ ಧೀಮಂತ ನಾಯಕರು ಮತ್ತು ವೀರಯೋಧರ ತಾಗ್ಯವನ್ನು ಸ್ಮರಿಸುವ ದಿನವಿದು. ರಾಷ್ಟ್ರಪಿತ ಮಹಾತ್ಮಗಾಂಧಿ ಅಮರರಾದ ದಿನವನ್ನು ಹುತಾತ್ಮ ದಿನವನ್ನಾಗಿ ಆಚರಿಸಲಾಗುತ್ತದೆ.
ರಾಜಧಾನಿ ದೆಹಲಿ ಸೇರಿದಂತೆ ದೇಶದ ವಿವಿಧ ರಾಜ್ಯಗಳಲ್ಲಿ ಇಂದು ಹುತಾತ್ಮ ದಿನವನ್ನು ಆಚರಿಸಲಾಯಿತು. ದೆಹಲಿಯ ರಾಜಘಾಟ್‍ನಲ್ಲಿ ಬಾಪು ಸಮಾಧಿಗೆ ಪ್ರಧಾನಿ ನರೇಂದ್ರ ಮೋದಿ ಪುಷ್ಪನಮನ ಸಲ್ಲಿಸಿ ಶ್ರದ್ಧಾಂಜಲಿ ಸಲ್ಲಿಸಿದರು.

ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್, ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ, ಉಪಾಧ್ಯಕ್ಷ ರಾಹುಲ್‍ಗಾಂಧಿ ಸೇರಿದಂತೆ ಅನೇಕ ಗಣ್ಯರು ಗಾಂಧೀಜಿಗೆ ಶ್ರದ್ಧಾಂಜಲಿ ಸಮರ್ಪಿಸಿದ್ದಾರೆ.  ಸ್ವಾತಂತ್ರ್ಯ ನಂತರ ಭಾರತೀಯರ ಪಾಲಿಗೆ 30ನೇ ಜನವರಿ 1948 ಘೋರ ದುರಂತದ ದಿನ. ಭಾರತೀಯ ಸ್ವಾತಂತ್ರ್ಯ ಆಂದೋಲನದಲ್ಲಿ ರಾಜಕೀಯ ಮತ್ತು ಅಧ್ಯಾತ್ಮಿಕ ನಾಯಕರಾಗಿದ್ದ ರಾಷ್ಟ್ರಪಿತ ಮಹಾತ್ಮ ಗಾಂಧಿಯವರು ನಾಥುರಾಮ್ ಗೊಡ್ಸೆ ಗುಂಡಿಗೆ ಬಲಿಯಾದರು. ಅಹಿಂಸೆ ಮೂಲಕ ದೇಶಕ್ಕೆ ಸ್ವಾತಂತ್ರ ದೊರಕಿಸಿಕೊಟ್ಟ ಬಾಪು ಹತ್ಯೆಗೀಡಾದರು. ಸತ್ಯ, ಅಹಿಂಸೆ ಮತ್ತು ಅಸಹಕಾರ ಚಳವಳಿಯಿಂದ ಜಗತ್ತಿನಾದ್ಯಂತ ಮಹಾತ್ಮ ಎಂದೇ ಚಿರಪರಿಚಿತರಾಗಿದ್ದ ಗಾಂಧಿ ಅವರನ್ನು ಹಿಂದು ರಾಷ್ಟ್ರೀಯವಾದಿ ಕಾರ್ಯಕರ್ತ ನಾಥುರಾಮ್ ಗೊಡ್ಸೆ ಗುಂಡಿಕ್ಕಿ ಹತ್ಯೆ ಮಾಡಿದ.

ನವದೆಹಲಿಯ ಬಿರ್ಲಾ ಭವನದ ಮೈದಾನದಲ್ಲಿ ತಮ್ಮ ರಾತ್ರಿಯ ನಡಿಗೆಯಲ್ಲಿ ತೊಡಗಿದ್ದ ಬಾಪು ಅವರನ್ನು ಗೊಡ್ಸೆ ಕೊಂದು ಹಾಕಿದ. ಮುಸಲ್ಮಾನರ ಪರವಾಗಿ ಗಾಂಧಿ ತಾರತಮ್ಯ ಮಾಡುತ್ತಿದ್ದಾರೆ ಎಂಬುದು ಗೊಡ್ಸೆ ಆರೋಪವಾಗಿತ್ತು. 8ನೇ ನವೆಂಬರ್ 1949ರಲ್ಲಿ ಗೊಡ್ಸೆಯನ್ನು ನೇಣುಗಂಬಕ್ಕೆ ಏರಿಸಲಾಯಿತು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )

Sri Raghav

Admin