ಫೆ. 15ರಂದು ಶಾಲಾ ಕಾಲೇಜು ಸ್ಥಗಿತಗೊಳಿಸಿ ಪ್ರತಿಭಟನೆ

ಈ ಸುದ್ದಿಯನ್ನು ಶೇರ್ ಮಾಡಿ

14

ಹುಬ್ಭಳ್ಳಿ,ಜ.30– ರಾಜ್ಯದ ಆಡಳಿತ ಮಂಡಳಿಗಳು ಹಲವು ಬಾರಿ ಶಿಕ್ಷಣ ರಂಗದ ಸಮಸ್ಯೆಗಳ ಪರಿಹಾರಕ್ಕೆ ಸಭೈ ಕರೆಯುವಂತೆ ವಿನಂತಿಸಿದರೂ ಸರಕಾರ ಸಕಾರಾತ್ಮಕವಾಗಿ ಸ್ಪಂದಿಸದಿರುವದನ್ನು ಪ್ರತಿಭಟಿಸಿ ರಾಜ್ಯದ ಶಾಲಾ ಕಾಲೇಜುಗಳನ್ನು ಬಹಿಷ್ಕರಿಸಿ ಫೆ. 15ರಂದು ಸಾಮುಹಿಕ ರಜೆ ಹಾಕಿ ಜಿಲ್ಲಾ ಮಟ್ಟದಲ್ಲಿ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಲಾಗುವದೆಂದು ಮಾಜಿ ಶಿಕ್ಷಣ ಸಚಿವ ವಿಧಾನ ಪರಿಷತ್ ಹಿರಿಯ ಸದಸ್ಯ ಕರ್ನಾಟಕ ಖಾಸಗಿ ಆಡಳಿತ ಮಂಡಳಿಗಳ ಹಾಗೂ ನೌಕರರ ಒಕ್ಕೂಟದ ಕಾರ್ಯಾಧ್ಯಕ್ಷ ಬಸವರಾಜ ಹೊರಟ್ಟಿ ಹೇಳಿದರು.

ನಿನ್ನೆ ಬಿ.ವ್ಹಿ.ಬಿ ಕಾಲೇಜಿನ ಬಯೋಟೆಕ್ ಹಾಲಿನಲ್ಲಿ ಆಯೋಜಿಸಿದ್ದ ಕರ್ನಾಟಕ ಖಾಸಗಿ ಆಡಳಿತ ಮಂಡಳಿ ಹಾಗೂ ನೌಕರರ ಒಕ್ಕೂಟವು ಹೋರಾಟದ ರೂಪರೇಷ ನಿರ್ಧರಿಸುವ ಕುರಿತು ಆಯೋಜಿಸಿದ್ದ ಸಭೈಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು. ಖಾಸಗಿ ಶಿಕ್ಷಣ ಸಂಸ್ಥೆಗಳು ಸರಕಾರದ ಗಂಭೀರ ನಿರ್ಲಕ್ಷ್ಯದಿಂದಾಗಿ ಅವಸಾನದತ್ತ ಸಾಗುತ್ತಿದ್ದು, ಖಾಲಿ ಹುದ್ದೆಗಳು ಭರ್ತಿಗೆ ಅನುಮತಿ ನೀಡುವದು, ಶಿಕ್ಷಕ ವಿದ್ಯಾರ್ಥಿಗಳ ಅನುಪಾತ ಕಡಿತ, ಸರಕಾರ ಹಾಗೂ ಅನುದಾನಿತ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳ ನಡುವಿನ ಮಲತಾಯಿ ಧೋರಣೆ ಹೋಗಲಾಡಿಸು ವುದು, ಹೊಸ ಪಿಂಚಣೆ ಯೋಜನೆ ಹಿಂಪಡೆಯುವುದು, ಸರಕಾರ ಹಾಗೂ ಅನುದಾನಿತ ಶಿಕ್ಷಣ ಸಂಸ್ಥೆಗಳ ಸಿಬ್ಬಂದಿಗಳ ನಡುವಿನ ತಾರತಮ್ಯ ಹೋಗಲಾಡಿಸುವದು, ಮಾನ್ಯತೆ ನವೀಕರಣಕ್ಕೆ ತೊಂದರೆ ಕೊಡುವದನ್ನು ತಪ್ಪಿಸುವದು, ಕಾಲ್ಪನಿಕ ವೇತನ ಬಡ್ತಿ ಕುರಿತು ನೀಡಿದ ವರದಿಯನ್ನು ಜಾರಿಗೊಳಿಸುವುದು, ವೇತನ ತಾರತಮ್ಯ ಸರಿಪಡಿಸುವದು, 1994-95ರ ನಂತರ ಪ್ರಾರಂಭಿಸಿದ ಎಲ್ಲ ಶಿಕ್ಷಣ ಸಂಸ್ಥೆಗಳನ್ನು

ವೇತನಾನುದಾನಕ್ಕೆ ಒಳಪಡಿಸುವದರೊಂದಿಗೆ ಬೋಧಕೇತರ ಹುದ್ದೆಗಳನ್ನು ತುಂಬಲು ಇರುವ ಆರ್ಥಿಕ ಮಿತವಯ್ಯವನ್ನು ಹಿಂದಕ್ಕೆ ಪಡೆಯುವದಕ್ಕೆ ಸರಕಾರವನ್ನು ಒತ್ತಾಯಿಸಲಾಗಿದ್ದರೂ ಇನ್ನೂವರೆಗೆ ಯಾವದೇ ಕ್ರಮ ಕೈಗೊಂಡಿರುವದಿಲ್ಲ ಎಂದು ಅವರು ಆರೋಪಿಸಿದರು.ಅದೇ ರೀತಿ ಪದವಿ ಕಾಲೇಜಿನಿಂದ ಪದವಿ ಪೂರ್ವ ಕಾಲೇಜುಗಳಿಗೆ ವರ್ಗಾವಣೆಗೊಂಡ ವಿಭಜಿತ ಹುದ್ದೆಗಳನ್ನು ತುಂಬುವದು ಅವಶ್ಯವಿದೆ. ಅಲ್ಲದೇ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಪ್ರಾಂಶುಪಾಲರ ಹುದ್ದೆ ಭರ್ತಿ ಮಾಡುವದು, ಯೋಜನೆಯಡಿ ಸಂಬಳ ಪಡೆಯುವ ಸಿಬ್ಬಂದಿಯನ್ನು ಯೋಜನೇತರಕ್ಕೆ ವರ್ಗಾಯಿಸುವದು. ಅನುಕಂಪ ಆಧಾರಿತ ಹುದ್ದೆಗಳನ್ನು ಅನುಮತಿ ನೀಡುವದು ಸೇರಿದಂತೆ ಇನ್ನೂ ಹತ್ತು ಹಲವಾರು ಬೇಡಿಕೆಗಳು ಈಡೇರಿಕೆಗೆ ಆಡಳಿತ ಮಂಡಳಿಗಳು ಹಾಗೂ ಸಿಬ್ಬಂದಿಗಳು ಹೋರಾಟದ ಹಾದಿಯನ್ನು ತುಳಿಯಬೇಕಾಗಿ ಬಂದಿದ್ದು ವಿಪರ್ಯಾಸವೆಂದು ಅವರು ತಿಳಿಸಿದರು.

ಸಭೈಯಲ್ಲಿ ಭಾಗವಹಿಸಿ ಮಾತನಾಡಿದ ಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯಾದ್ಯಕ್ಷ ಹಾಗೂ ಕರ್ನಾಟಕ ಖಾಸಗಿ ಆಡಳಿತ ಮಂಡಳಿಗಳ ಹಾಗೂ ನೌಕರರ ಒಕ್ಕೂಟದ ಕಾರ್ಯದರ್ಶಿಗಳಾದ ವೀರಣ್ಣ ಚರಂತಿ ಮಠರವರು ಮಾತನಾಡಿ ಬೇಡಿಕೆಗಳು ಈಡೇರುವವರೆಗೆ ಹೋರಾಟದಿಂದ ಹಿಂದೆ ಸರಿಯಬಾರದು. ಕಳೆದ ಹಲವಾರು ವರ್ಷಗಳಿಂದ ಸರಕಾರಕ್ಕೆ ಮನವಿ ಸಲ್ಲಿಸಿದರು ಯಾವದೇ ಕ್ರಮವಾಗಿರುವದಿಲ್ಲವಾದದ್ದರಿಂದ ಹೋರಾಟದಂಥಹ ಕಠಿಣ ನಿಲುವನ್ನು ತೆಗೆದುಕೊಳ್ಳಬೇಕಾಯಿತೆಂದು ಹೇಳಿದರು. ಬೇಡಿಕೆಗಳ ಈಡೇರಿಕೆ ಬಗ್ಗೆ ಕೇಂದ್ರ ಸಮಿತಿಯು ನಿರ್ಧರಿಸುವ ಹೋರಾಟದ ರೂಪ ರೇಷಗಳಿಗೆ ಸಂಪೂರ್ಣ ಬೆಂಬಲ ನೀಡುವದಾಗಿ ಉತ್ತರಕನ್ನಡ ಜಿಲ್ಲಾಧ್ಯಕರು ಶಶಿಭೂಷಣ ಹೆಗಡೆ, ವಿಜಯಪೂರ ಜಿಲ್ಲಾಧ್ಯಕ್ಷ ಶ್ರೀಮತಿ ಆರ್.ಡಿ. ಕುಮಾದಿ, ಹಾವೇರಿ ಜಿಲ್ಲಾಧ್ಯಕ್ಷ ಎಂ.ಡಿ. ಬಳ್ಳಾರಿ ಸೇರಿದಂತೆ ಚಂದ್ರಶೇಖರ ಸಾವಳಗಿ, ನಂದೆಣ್ಣವರ, ಎಂ.ಕೆ. ಲಮಾಣಿ, ಬಿ.ಕೆ. ಯಲವಿಗಿ, ಎನ್.ಬಿ. ಬಣಕಾರ, ಎಸ್.ಎಸ್. ಮಠದ, ಬಲರಾಮ ನಾಯಕ ಮುಂತಾದರವರು ಮಾತನಾಡಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin