ಹುತಾತ್ಮ ಸಂದೀಪ್ ಪಾರ್ಥೀವ ಶರೀರ ನಾಳೆ ಸ್ವಗ್ರಾಮ ತಲುಪುವ ಸಾಧ್ಯತೆ

ಈ ಸುದ್ದಿಯನ್ನು ಶೇರ್ ಮಾಡಿ

Sandeep-Kumar

ಶ್ರೀನಗರ, ಜ.30- ಕಣಿವೆ ರಾಜ್ಯ ಜಮ್ಮು-ಕಾಶ್ಮೀರದ ಸೇನಾ ಶಿಬಿರದ ಮೇಲೆ ಹಿಮಪಾತ ಕುಸಿದು ಹುತಾತ್ಮರಾಗಿರುವ ಹಾಸನ ಮೂಲದ ಯೋಧ ಸಂದೀಪ್ ಅವರ ಪಾರ್ಥೀವಶರೀರ ಸ್ವಗ್ರಾಮಕ್ಕೆ ತಲುಪುವ ಸಾಧ್ಯತೆ ಇದೆ. ಹವಮಾನ ವೈಪರಿತ್ಯದಿಂದಾಗಿ ಮೃತ ದೇಹ ರವಾನೆಗೆ ವಿಳಂಬವಾಗಿದ್ದು, ಇನ್ನೂ ಗುರೇಜ್ ಸೇನಾ ಶಿಬಿರದಲ್ಲೇ ಸಂದೀಪ್ ಅವರ ಪಾರ್ಥೀವಶರೀರವಿದೆ. ಈ ಹಿನ್ನೆಲೆಯಲ್ಲಿ ಹೇಗಾದರು ಮಾಡಿ ಸಂದೀಪ್ ಅವರ ಪಾರ್ಥೀವ ಶರೀರವನ್ನು ಶ್ರೀನಗರಕ್ಕೆ ರವಾನಿಸಲು ಸೇನಾ ಸಿಬ್ಬಂದಿಗಳಿಗೆ ಹಿರಿಯ ಸೇನಾ ಅಧಿಕಾರಿಗಳು ಸೂಚನೆ ನೀಡಿದ್ದಾರೆ. ಒಂದು ವೇಳೆ ಇಂದು ಮಧ್ಯಾಹ್ನ ಹಿಮಪಾತ ಕಡಿಮೆಯಾದರೆ ಪಾರ್ಥೀವ ಶರೀರವನ್ನು ಗುರೇಜ್‍ನಿಂದ ಶ್ರೀನಗರಕ್ಕೆ ಸ್ಥಳಾಂತರ ಮಾಡಲಿದ್ದು, ನಾಳೆ ಯೋಧನ ಮೃತ ದೇಹವನ್ನು ಸ್ವ ಗ್ರಾಮಕ್ಕೆ ತಲುಪುವ ಸಾಧ್ಯತೆ ಇದೆ ಎಂದು ಸೇನಾ ಮೂಲಗಳು ತಿಳಿಸಿವೆ.

ಇತ್ತ ಹಾಸನದಲ್ಲಿ ಕಳೆದ 6 ದಿನಗಳಿಂದ ಯೋಧನ ಪಾರ್ಥೀವಶರೀರಕ್ಕಾಗಿ ಕಾಯುತ್ತಿರುವ ಪೋಷಕರ ದುಃಖ ಮುಗಿಲು ಮುಟ್ಟಿದ್ದು, ತನ್ನ ಮಗನ ಮುಖ ನೋಡಲು ಪೆÇೀಷಕರು ಹಾಗೂ ಗ್ರಾಮದ ಜನತೆ ದುಃಖದಲ್ಲೇ ಕಾಯುತ್ತಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin