ನ್ಯಾಯಾಧೀಶರ ನೇಮಕ : ಪಿಐಎಲ್‍ಗಳ ವಜಾಗೊಳಿಸ ಸುಪ್ರೀಂಗೆ ಕೇಂದ್ರ ಮನವಿ

ಈ ಸುದ್ದಿಯನ್ನು ಶೇರ್ ಮಾಡಿ

sc

ನವದೆಹಲಿ, ಜ.30- ದೇಶದ ಹೈಕೋರ್ಟ್‍ಗಳು ಮತ್ತು ಸುಪ್ರೀಂಕೋರ್ಟ್‍ನಲ್ಲಿ ನ್ಯಾಯಾಧೀಶರ ನೇಮಕಾತಿಗಳಿಗೆ ಸಂಬಂಧಪಟ್ಟ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು (ಪಿಐಎಲ್) ವಜಾಗೊಳಿಸುವಂತೆ ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್‍ಗೆ ಮನವಿ ಮಾಡಿದೆ.  ಇದಕ್ಕೆ ಸಂಬಂಧಪಟ್ಟಂತೆ ಸಮನಾಂತರ ವ್ಯವಹರಣೆ ಕಲಾಪಗಳು ಇರಬಾರದು ಎಂದು ಅಟಾರ್ನಿ ಜನರಲ್ ಮುಕುಲ್ ರೋಹಟಗಿ ನ್ಯಾಯಾಲಯಕ್ಕೆ ಮನವಿ ಮಾಡಿದ್ದಾರೆ.  ಕಳೆದ ಆರು ತಿಂಗಳಿನಿಂದ ನ್ಯಾಯಾೀಶರ ನೇಮಕಾತಿಗಾಗಿ ವಿಧಾನ ಒಡಂಬಡಿಕೆ ಇನ್ನೂ ಪೂರ್ಣಗೊಳ್ಳದಿರುವ ಸಂಗತಿಯನ್ನು ಸಹ ಅಟಾರ್ನಿ ಜನರಲ್ ತಮ್ಮ ಮನವಿಯಲ್ಲಿ ಉಲ್ಲೇಖಿಸಿದ್ದಾರೆ. ಈ ವಿಷಯಕ್ಕೆ ಸಂಬಂಧಪಟ್ಟಂತೆ ಹಲವಾರು ಅರ್ಜಿಗಳಿದ್ದು, ವಿಚಾರಣೆ ಯನ್ನು ಸುಪ್ರೀಂಕೋರ್ಟ್ ಒಂದು ತಿಂಗಳು ಮುಂದೂಡಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

 

 

Facebook Comments

Sri Raghav

Admin