ಹುತಾತ್ಮರ ಸ್ಮರಣೆ ಅಗತ್ಯ : ಅರಹುಣಶಿ

ಈ ಸುದ್ದಿಯನ್ನು ಶೇರ್ ಮಾಡಿ

10

ಹುನಗುಂದ,ಜ.31- ಶರೀರ ನಾಶವಾದರೂ ಸದ್ಗುಣಗಳು ಎಂದು ನಾಶವಾಗುವದಿಲ್ಲ. ಸಮಾಜದ ಏಳ್ಗೆಯಲ್ಲಿಯೇ ತೃಪ್ತಿ ಕಂಡು ತ್ಯಾಗ, ಬಲಿದಾನದ ಮೂಲಕ ತಮ್ಮ ನೆನಪನ್ನು ಚಿರಸ್ಥಾಯಿಯಾಗಿಸಿದ ಹುತಾತ್ಮರ ಬದುಕು, ಅವರಲ್ಲಿನ ದೇಶಾಭಿಮಾನದ ತುಡಿತವನ್ನು ಇಂದಿನ ಜನಾಂಗ ಅದರಲ್ಲೂ ಯುವಪೀಳಿಗೆ ಅರಿತುಕೊಳ್ಳುವದು ಅವಶ್ಯ ಎಂದು ಪ್ರಾಚಾರ್ಯ ಎಂ.ಎಚ್. ಅರಹುಣಶಿ ಹೇಳಿದರು.ಇಲ್ಲಿನ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಎನ್ನೆಸ್ಸೆಸ್ ಘಟಕದ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ ಹುತಾತ್ಮರ ದಿನ ಕಾರ್ಯಕ್ರಮದಲ್ಲಿ ಮಾತನಾಡುತ್ತ ಸ್ವಾತಂತ್ರಕ್ಕಾಗಿ ಹೋರಾಡಿದ, ವೀರಮರಣವನ್ನಪ್ಪಿದ ಮಹನೀಯರು ಸದಾ ಸ್ಮರಣಿಯರಾಗಿದ್ದು ಅವರ ಆದರ್ಶಗಳು ನಮಗೆ ದಾರಿದೀಪವಾಗಬೇಕೆಂದರು. ಎನ್ನೆಸ್ಸೆಸ್ ಕಾರ್ಯಕ್ರಮಾಧಿಕಾರಿ ಎಸ್.ಕೆ. ಹೂಲಗೇರಿ ಮಾತನಾಡಿ ದೇಶದ ಸ್ವಾತಂತ್ರಕ್ಕಾಗಿ ತಮ್ಮ ಬದುಕನ್ನೇ ಪಣವಾಗಿಟ್ಟುಕೊಂಡ ಮಹಾತ್ಮರ, ಹುತಾತ್ಮರ ಜೀವನಕ್ರಮದಿಂದ ನಾವು ಬಹಳಷ್ಟು ಕಲಿಯಬೇಕಿದೆ ಎಂದರು. ಹುತಾತ್ಮರ ದಿನದ ಅಂಗವಾಗಿ ಎರಡು ನಿಮಿಷದ ಮೌನ ಆಚರಿಸಲಾಯಿತು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin