ಅನ್ನದಾತನ ಮೊಗದಲ್ಲಿ ಮಂದಹಾಸ ಮೂಡಿಸಿರುವ ಜೇಟ್ಲಿ ಬಜೆಟ್

ಈ ಸುದ್ದಿಯನ್ನು ಶೇರ್ ಮಾಡಿ

Arun-Jaitly

ನವದೆಹಲಿ,ಫೆ.1-ದೇಶದ ಅನ್ನದಾತನ ಮೊಗದಲ್ಲಿ ಮಂದಹಾಸ ಮೂಡಿಸಿರುವ ಹಣಕಾಸು ಸಚಿವ ಅರುಣ್ ಜೇಟ್ಲಿ ಪ್ರಸಕ್ತ ಸಾಲಿನಲ್ಲಿ ಕೃಷಿ ಸಾಲದ ಗುರಿಯನ್ನು ಒಂದು ಲಕ್ಷ ಕೋಟಿಯಿಂದ 10 ಲಕ್ಷ ಕೋಟಿ ಏರಿಕೆ ಮಾಡಿದ್ದಾರೆ. ಮುಂದಿನ ಐದು ವರ್ಷಗಳಲ್ಲಿ ರೈತರ ವರಮಾನ ದುಪ್ಪಟ್ಟು ಮಾಡುವ ನಿಟ್ಟಿನಲ್ಲಿ ಸಾಲದ ಪ್ರಮಾಣವನ್ನು ಒಂದು ಲಕ್ಷ ಕೋಟಿಯಿಂದ 10 ಲಕ್ಷ ಕೋಟಿಗೆ ಏರಿಕೆ ಮಾಡಿರುವುದಾಗಿ ಘೋಷಣೆ ಮಾಡಿದರು.  2017-18ನೇ ಸಾಲಿನಲ್ಲಿ ಕೃಷಿ ಸಾಲದ ಪ್ರಮಾಣವನ್ನು 10 ಲಕ್ಷ ಕೋಟಿಗೆ ಹೆಚ್ಚಳ ಮಾಡಲಾಗಿದೆ. ಇದು ಇತ್ತೀಚಿನ ವರ್ಷಗಳಲ್ಲಿ ಇದೊಂದು ದಾಖಲೆಯ ಕ್ರಮ ಎಂದು ಬಣ್ಣಿಸಿದರು.

ಕೇಂದ್ರ ಬಜೆಟ್ – 2017 (Live Updates) ]

ಇದೇ ರೀತಿ ಪೂರ್ವ ರಾಜ್ಯಗಳು ಮತ್ತು ಜಮ್ಮುಕಾಶ್ಮೀರ ರಾಜ್ಯಗಳಿಗೆ ಸಾಲ ವಸೂಲಾತಿಗೆ ಕೆಲವು ವಿಶೇಷ ಪ್ರಯತ್ನಗಳನ್ನು ಸಹ ಮಾಡುವುದಾಗಿ ತಿಳಿಸಿದ್ದಾರೆ. ಮಧ್ಯಮಾವಧಿ ಸಾಲದ ಪ್ರಮಾಣದಲ್ಲಿ ಮೂರು ಲಕ್ಷ ಸಾಲ ಪಡೆದರೆ ಶೇ. 7ರಷ್ಟು ಬಡ್ಡಿ ವಿಧಿಸಲಾಗುವುದು. ಪ್ರಮಾಣಿಕವಾಗಿ ಬ್ಯಾಂಕ್‍ಗಳಿಗೆ ಸಾಲ ಹಿಂದಿರುಗಿಸಿದರೆ ಶೇ.3ರಷ್ಟು ಬಡ್ಡಿಯನ್ನು ಕಡಿತ ಮಾಡಲಾಗುವುದು. ಒಂದು ವೇಳೆ ನಿಗದಿತ ಅವಧಿಯೊಳಗೆ ಸಾಲ ಮರುಪಾವತಿಸದೆ ಬಾಕಿ ಉಳಿಸಿಕೊಂಡರೆ ಸಾಲದ ಮೇಲಿನ ಬಡ್ಡಿ ಪ್ರಮಾಣವನ್ನು ಶೇ.4ರಷ್ಟು ಏರಿಕೆ ಮಾಡುವುದಾಗಿ ತಿಳಿಸಿದ್ದಾರೆ.

ಈ ಬಾರಿ ದೇಶದ ಕೆಲವು ಭಾಗಗಳಲ್ಲಿ ಭೀಕರ ಬರಗಾಲ ಉಂಟಾದರೆ ಇನ್ನು ಕೆಲವು ಕಡೆ ಪ್ರವಾಹ ಉಂಟಾಗಿ ಬೆಳೆ ಹಾನಿ ಉಂಟಾಯಿತು. ಈ ಬಾರಿ ಕೃಷಿ ವಲಯ ಶೇ.4.1ರಷ್ಟು ಬೆಳವಣಿಗೆಯಾಗಿದೆ. ಮುಂದಿನ ದಿನಗಳಲ್ಲಿ ದೇಶಾದ್ಯಂತ ಉತ್ತಮ ಹಿಂಗಾರು-ಮುಂಗಾರು ಬಂದರೆ ಇನ್ನು ಏರಿಕೆ ಪ್ರಮಾಣ ಹೆಚ್ಚಾಗಲಿದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು.
ಕಳೆದ ವರ್ಷ ರೈತರಿಗಾಗಿ ಘೋಷಣೆ ಮಾಡಲಾಗಿದ್ದ ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆಗೆ ಈ ವರ್ಷ 13,240 ಕೋಟಿ ಅನುದಾನ ಒದಗಿಸಲಾಗುವುದು. ಹೊಸ ಬೆಳೆ ವಿಮೆ ಯೋಜನೆಗೆ ದೇಶಾದ್ಯಂತ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕಳೆದ ವರ್ಷ ಈ ಯೋಜನೆಗೆ ಐದೂವರೆ ಸಾವಿರ ಕೋಟಿ ನೀಡಲಾಗಿತ್ತು ಎಂದು ನುಡಿದರು.

2016-17ನೇ ಸಾಲಿನಲ್ಲಿ ಈ ಯೋಜನೆಯಡಿ ಶೇ.30ರಷ್ಟು ಬೆಳೆ ವಿಮೆಯನ್ನು ಸೇರ್ಪಡೆ ಮಾಡಲಿದೆ. 2017-18ನೇ ಸಾಲಿನಲ್ಲಿ ಶೇ.50ರಷ್ಟು ಗುರಿ ಹೊಂದುವ ಯೋಜನೆ ರೂಪಿಸುವುದಾಗಿ ತಿಳಿಸಿದರು.  ಹನಿ ನೀರಾವರಿ ಯೋಜನೆಗೆ 5 ಸಾವಿರ ಕೋಟಿ ಅನುದಾನ ಒದಗಿಸಿರುವ ಜೇಟ್ಲಿ ಹೈನುಗಾರಿಕೆಗೆ ಎಂಟು ಸಾವಿರ ಕೊಟಿ ನೀಡಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin