ಕೌಟುಂಬಿಕ ಕಲಹ : ಶಿಕ್ಷಕಿ ತನ್ನ ಮಗುವಿನೊಂದಿಗೆ ನೇಣಿಗೆ ಶರಣು

ಈ ಸುದ್ದಿಯನ್ನು ಶೇರ್ ಮಾಡಿ

Tn-pura
ತಿ.ನರಸೀಪುರ, ಫೆ.1- ಕೌಟುಂಬಿಕ ಕಲಹದಿಂದ ಬೇಸತ್ತ ಶಿಕ್ಷಕಿಯೊಬ್ಬರು ತನ್ನ ಮಗುವಿಗೆ ನೇಣು ಬಿಗಿದು, ತಾನು ನೇಣಿಗೆ ಶರಣಾಗಿರುವ ಘಟನೆ ತಾಲ್ಲೂಕಿನ ಬನ್ನೂರು ಸಮೀಪದ ಚಾಮನಹಳ್ಳಿಯಲ್ಲಿ ನಡೆದಿದೆ.  ಕೆ.ಆರ್.ಪೇಟೆ ತಾಲ್ಲೂಕು ಬಂಡೆಹೊಳೆ ಗ್ರಾಮದ ಡಿ.ಸಿ.ಭವ್ಯ(32) ಮತ್ತಿ ಈಕೆಯ ಮಗು ಗಗನ(3) ಮೃತರಾದವರು. ಈಕೆ ಬನ್ನೂರು ಪಟ್ಟಣದ ವಿವೇಕಾನಂದ ಶಿಕ್ಷಣ ಸಂಸ್ಥೆಯಲ್ಲಿ ಪ್ರೌಡಶಾಲಾ ಶಿಕ್ಷಕಿಯಾಗಿ ಕೆಲಸ ನಿರ್ವಹಿಸುತ್ತಿದ್ದರು. ಕಳೆದ 5 ವವರ್ಷಗಳ ಹಿಂದೆ ಅದೇ ಶಾಲೆಯ ಫ್ರೌಡಶಾಲಾ ಮುಖ್ಯಶಿಕ್ಷಕ ಕೆ.ಆರ್.ನಗರ ತಾಲ್ಲೂಕಿನ ಮೇಲೂರು ಗ್ರಾಮದ ದೇವರಾಜೇಗೌಡರನ್ನು ವಿವಾಹ ಮಾಡಿಕೊಂಡಿದ್ದರು.
ಕೌಟುಂಬಿಕ ಕಲಹದಿಂದ ಗಂಡ ಹೆಂಡಿರ ನಡುವೆ ದಿನನಿತ್ಯ ಜಗಳ ನಡೆಯುತ್ತಿದ್ದು, ಇದರಿಂದ ಮನನೊಂದ ಭವ್ಯ ನಿನ್ನೆ ಬೆಳಿಗ್ಗೆ 9 ರ ಸಮಯದಲ್ಲಿ ಮನೆಯಲ್ಲಿ ಯಾರು ಇಲ್ಲದಿದ್ದಾಗ ತನ್ನ ಹೆಣ್ಣು ಮಗು ಗಗನಳನ್ನು ನೇಣು ಬಿಗಿದು, ತಾನೂ ನೇಣಿಗೆ ಶರಣಾಗಿದ್ದಾಳೆ.
ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಜಿಲ್ಲಾ ಹೆಚ್ಚುವರಿ ಪೊಲಿಸ್ ವರಿಷ್ಟಾಧಿಕಾರಿ ಮಹಮ್ಮದ್ ಸುಜೀತ್, ಸರ್ಕಲ್ ಇನ್ಸ್‍ಪೆಕ್ಟರ್ ಮನೋಜ್‍ಕುಮಾರ್, ಬನ್ನೂರು ಪಿಎಸ್‍ಐ ಲತೇಶ್‍ಕುಮಾರ್ ಪರಿಶೀಲನೆ ನಡೆಸಿದರು. ನಂತರ ಮೃತ ಭವ್ಯ, ಮಗು ಗಗನಳ ಶವವನ್ನು ಬನ್ನೂರು ಸರ್ಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರಿಕ್ಷೆಗೊಳಪಡಿಸಿ ವಾರಸುದಾರರಿಗೆ ನೀಡಿದ್ದಾರೆ. ಈ ಸಂಬಂಧ ಬನ್ನೂರು ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆರೋಪ: ಭವ್ಯ ನೇ ಣಿಗೆ ಶರಣಾಗಿಲ್ಲ. ಕೊಲೆ ಮಾಡಿ ಮಗು, ಮತ್ತು ತಾಯಿಯನ್ನು ನೇಣಿಗೆ ಹಾಕಲಾಗಿದೆ ಎಂದು ಮೃತನ ಕುಟುಂಬಸ್ಥರು ದೂರಿದ್ದಾರೆ. ಸಾರ್ವಜನಿಕರು ತಂಡೋಪ ತಂಡವಾಗಿ ಜಮಾಯಿಸಿ ನೇಣಿಗೆ ಶರಣಾಗಿರುವ ದೃಶ್ಯ ಕಂಡು ಮರುಗಿದರೇ ಶಿಕ್ಷಕಿಯ ಶವದ ಮುಂದೆ ಕುಟುಂಬದ ಆಕ್ರಂದನ ನೋಡುಗರ ಮನ ಕಲಕುವಂತಿತ್ತು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin