ನೆಲಮಾಕನಹಳ್ಳಿ ಜೋಡಿ ಕೊಲೆ ಪ್ರಕರಣ: ಐದು ಮಂದಿ ಪೊಲೀಸ್ ಬಲೆಗೆ

ಈ ಸುದ್ದಿಯನ್ನು ಶೇರ್ ಮಾಡಿ

arrested
ಮಳವಳ್ಳಿ, ಫೆ.1-ನೆಲಮಾಕನಹಳ್ಳಿ ಗ್ರಾಮದಲ್ಲಿ ನಡೆದಿದ್ದ ಜೋಡಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗ್ರಾಮಾಂತರ ಠಾಣೆ ಪೊಲೀಸರು ಐದು ಮಂದಿಯನ್ನು ಬಂಧಿಸಿದ್ದಾರೆ.  ಮದ್ದೂರಿನ ನಂಜುಂಡೇಗೌಡ (22), ಉಮೇಶ (30), ಸೂರ್ಯ(23), ಈರೇಶ್(23), ಶ್ರೀಧರ್ (26) ಬಂಧಿತ ಆರೋಪಿಗಳು.  ಆರೋಪಿಗಳಿಂದ ಕೃತ್ಯಕ್ಕೆ ಬಳಸಿದ್ದ ಮನೆಯ ಕೀ, ಮೊಬೈಲ್, ಜೆನ್ ಕಾರು, ಮಾರಕಾಸ್ತ್ರಗಳನ್ನು ವಶಪಡಿಸಿಕೊಂಡಿದ್ದಾರೆ.  ಪ್ರಕರಣದ ಪ್ರಮುಖ ಆರೋಪಿ ಶಿವರಾಜು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಘಟನೆ ಹಿನ್ನೆಲೆ:

ಮಳವಳ್ಳಿ ಗ್ರಾಮಾಂತರ ವ್ಯಾಪ್ತಿಯ ನೆಲಮಾಕನಹಳ್ಳಿಯ ಸಿದ್ದೇಗೌಡ 2009ನೆ ಸಾಲಿನಲ್ಲಿ ಗ್ರಾಮದ ಸಾವಿತ್ರಮ್ಮ ಎಂಬುವರ ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಯಾಗಿ ಮೈಸೂರಿನ ಕೇಂದ್ರ ಕಾರಾಗೃಹದಲ್ಲಿದ್ದಾನೆ.ನೀಡಿದರೂ ಸಹ ಆತ ತನ್ನ ನಡವಳಿಕೆ ಸರಿಪಡಿಸಿಕೊಂಡಿರಲಿಲ್ಲ.  ಕಾರಾಗೃಹದಲ್ಲಿ ತನಗೆ ಪರಿಚಯವಾಗಿದ್ದ ಶಿವರಾಜು ಎಂಬಾತನೊಂದಿಗೆ ಸೇರಿಕೊಂಡು ಕಾರಾಗೃಹದಲ್ಲೇ ಪತ್ನಿ ಹಾಗೂ ಸತೀಶ್‍ನ ಕೊಲೆಗೆ ಸಂಚು ರೂಪಿಸಿ ಸಿದ್ದೇಗೌಡ ಅಣ್ಣ ರಾಜಣ್ಣನ ಕುಮ್ಮಕ್ಕಿನಿಂದ ಶಿವರಾಜು ತನ್ನ ಸಹಚರರೊಂದಿಗೆ ಸೇರಿಕೊಂಡು ಇವರಿಬ್ಬರ ಕೊಲೆಗೆ ಹೊಂಚುಹಾಕಿದ್ದರು.

ಅದರಂತೆ ಡಿ.18ರಂದು ಬೆಳಗಿನ ಜಾವ 1.45ರಲ್ಲಿ ಸಿದ್ದೇಗೌಡನ ಮನೆ ಬಳಿ ಕಾರಿನಲ್ಲಿ ಬಂದ ಆರೋಪಿಗಳು ಬಾಗಿಲು ಒಡೆದು ಒಳನುಗ್ಗಿ ಮಲಗಿದ್ದ ಶರಾವತಿ ಹಾಗೂ ಸತೀಶ್‍ನ ಮೇಲೆ ಮಾರಕಾಸ್ತ್ರಗಳಿಂದ ಮನಬಂದಂತೆ ಹಲ್ಲೆ ನಡೆಸಿ ಬರ್ಬರವಾಗಿ ಕೊಲೆ ಮಾಡಿ ತಲೆಮರೆಸಿಕೊಂಡಿದ್ದರು.  ಮಳವಳ್ಳಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿತ್ತು. ಪೊಲೀಸ್ ಅಧೀಕ್ಷಕ ಸುದೀರ್‍ಕುಮಾರ್‍ರೆಡ್ಡಿ, ಅಪರ ಪೊಲೀಸ್ ಅಧೀಕ್ಷಕರಾದ ಸವಿತಾ ಹಾಗೂ ಮಳವಳ್ಳಿ ಉಪವಿಭಾಗದ ಡಿವೈಎಸ್ಪಿ ಮ್ಯಾಥ್ಯೂಸ್ ಥಾಮಸ್ ಮಾರ್ಗದರ್ಶನದಲ್ಲಿ ವೃತ್ತ ನಿರೀಕ್ಷಕ ಶ್ರೀಕಾಂತ್, ಪಿಎಸ್‍ಐ ರವಿಕುಮಾರ್ ನೇತೃತ್ವದಲ್ಲಿ ತನಿಖೆ ಕೈಗೊಂಡು ಆರೋಪಿಗಳನ್ನು ಬಂಧಿಸಿದ್ದಾರೆ.

ತನಿಖೆ ವೇಳೆ ಪ್ರಮುಖ ಆರೋಪಿ ಶಿವರಾಜು ಡಿ.28ರಂದು ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ತಿಳಿದುಬಂದಿದೆ. ಮತ್ತೊಬ್ಬ ಆರೋಪಿ ರಾಜಣ್ಣ ತಲೆಮರೆಸಿಕೊಂಡಿದ್ದು, ತನಿಖೆ ಪ್ರಗತಿಯಲ್ಲಿದೆ. ಈತನ ಪತ್ನಿ ಶರಾವತಿ ಅದೇ ಗ್ರಾಮದ ಸತೀಶ್ ಎಂಬಾತನೊಂದಿಗೆ ಅನೈತಿಕ ಸಂಬಂಧವಿಟ್ಟುಕೊಂಡಿದ್ದ ಬಗ್ಗೆ ಸಿದ್ದೇಗೌಡನಿಗೆ ತಿಳಿದು ತಿಳುವಳಿಕೆ

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin