ಪ್ರಯಾಣಿಕರ ವೇಷದಲ್ಲಿ ಗಾಂಜಾ ಮಾರುತ್ತಿದ್ದ ಮೂವರ ಬಂಧನ

ಈ ಸುದ್ದಿಯನ್ನು ಶೇರ್ ಮಾಡಿ

 

arrested

ವಿಜಯಪುರ,ಫೆ.1-ಪ್ರಯಾಣಿಕರ ವೇಷದಲ್ಲಿ ಗಾಂಜಾ ಮಾರುತ್ತಿದ್ದ ಮೂವರನ್ನು ಬಂಧಿಸಿರುವ ಝಳಕಿ ಪೊಲೀಸರು 12.5 ಕೆಜಿ ಸಂಸ್ಕರಿತ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ.   ಆಂಧ್ರಪ್ರದೇಶ ಅನಂತಪುರ ಪಟ್ಟಣದ ಗಣೇಶ್ ನಗರ ನಿವಾಸಿಗಳಾದ ಪಳನೊಪ್ರಸಾದ್ ನಾಥೋಲ(42), ರಾಮಾಂಜನೇಯಲು ನಾಯ್ಡು(60) ಹಾಗೂ ವಿಜಯಪುರ ಜಿಲ್ಲೆ ಇಂಡಿ ತಾಲ್ಲೂಕಿನ ಧೂಳಕೇಡಿ ಗ್ರಾಮದ ಶಂಕರ ಕೊಡತೆ(56) ಬಂಧಿತ ಆರೋಪಿಗಳು.   ಇವರು ಕರ್ನಾಟಕ ಮತ್ತು ಮಹಾರಾಷ್ಟ್ರ ಗಡಿಭಾಗದಲ್ಲಿ ಪ್ರಯಾಣಿಕರ ವೇಷದಲ್ಲಿ ಗಾಂಜಾವನ್ನು ಮಾರಾಟ ಮಾಡುತ್ತಿದ್ದರು. ಧೂಳಕೇಡ ಬಳಿ ಝಳಕಿ ಪಿಎಸ್‍ಐ ಸುರೇಶ್ ಬೆಂಡೆ ಗುಂಬಳ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ ಈ ಮೂವರನ್ನು ಬಂಧಿಸಲಾಗಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

 

Facebook Comments

Sri Raghav

Admin