ಫೆ.17 ರಿಂದ ಬೆಂಗಳೂರಿನಲ್ಲಿ ಸೂಪರ್ ಅಚೀವರ್ಸ್ ಸಮಿತ್ -2017

ಈ ಸುದ್ದಿಯನ್ನು ಶೇರ್ ಮಾಡಿ

Fest--01
ಬೆಂಗಳೂರು, ಫೆ.1- ಸ್ಟಾರ್ಡಂ ಅಲಾಯನ್ಸ್ ಇದೀಗ ನಗರಕ್ಕೆ ಬಂದಿದೆ. ಈ ಖ್ಯಾತನಾಮ ಸಂಸ್ಥೆಯ ಸಂಸ್ಥಾಪಕರಾದ ರಾಮ್ ಆನಂದ್ ಅವರ ನೇತೃತ್ವದಲ್ಲಿ ಅತ್ಯದ್ಭುತವಾದ ದಿ ಸೂಪರ್ ಅಚೀವರ್ಸ್ ಸಮಿತ್-2017 ಅನ್ನು ಫೆ.17 ರಿಂದ 19 ರವರೆಗೆ ಆಯೋಜಿಸಲಾಗಿದೆ.  ಬೆಂಗಳೂರಿನ ಹೆಬ್ಬಾಳದಲ್ಲಿರುವ ಮಾನ್ಯತಾ ಟೆಕ್‍ಪಾರ್ಕ್ ಬಳಿ ಇರುವ ವೈಟ್ ಆರ್ಚಿಡ್‍ನಲ್ಲಿ ನಡೆಯಲಿರುವ ಈ ಸೂಪರ್ ಅಚೀವರ್ಸ್ ಕಾರ್ಯಾಗಾರವನ್ನು ಸ್ಟಾರ್ಡಂ ಅಲಾಯನ್ಸ್ ದಿ ರೈಸಿಂಗ್ ಬಿಲಿಯನ್ ಮೂವ್‍ಮೆಂಟ್ ಸಹಯೋಗದಲ್ಲಿ ಆಯೋಜಿಸುತ್ತಿದ್ದು, ಈ ಮೂರು ದಿನಗಳಲ್ಲಿ ವಿಶ್ವದ ಖ್ಯಾತ ವಿಖ್ಯಾತ ಮಾನವ ಸಂಪನ್ಮೂಲ ಅಭಿವೃದ್ಧಿ ತರಬೇತುದಾರರು ಮತ್ತು ವೈಯಕ್ತಿಕ ಅಭಿವೃದ್ಧಿ ಗುರುಗಳು ಹತ್ತು ಹಲವಾರು ವಿಚಾರಗಳ ಬಗ್ಗೆ ತಮ್ಮ ಉಪನ್ಯಾಸಗಳ ಮೂಲಕ ಬೆಳಕು ಚೆಲ್ಲಲಿದ್ದಾರೆ.

ಅಮೆರಿಕಾ, ಕೆನಡಾ, ಬೆಲ್ಜಿಯಂ, ಸ್ಪೇನ್, ಇಟಲಿ, ಸಿಂಗಾಪುರ ಮತ್ತು ಆಸ್ಟ್ರೇಲಿಯಾ ದೇಶಗಳ ಒಟ್ಟು 12 ಅಂತಾರಾಷ್ಟ್ರೀಯ ಖ್ಯಾತಿಯ ತಜ್ಞರು ಉಪನ್ಯಾಸ ನೀಡಲಿದ್ದಾರೆ.
ಭಾರತೀಯ ನಾಯಕರು ಹೊಸಹೊಸ ಮತ್ತು ದೇಸೀಯವಾದ ಚಿಂತನೆ ನಡೆಸುವ ಬಗ್ಗೆ ಹತ್ತು ಹಲವಾರು ಉಪನ್ಯಾಸಗಳನ್ನು ನೀಡಲಿದ್ದು, ವಿಶ್ವದಾದ್ಯಂತ ನೆಲೆಯೂರಿರುವ ಮತ್ತಷ್ಟು ಚಿಂತಕರು ಆನ್‍ಲೈನ್‍ನಲ್ಲಿ, ವೆಬ್‍ನಾರ್ ಮತ್ತು ವಿಡೀಯೋ ಮೂಲಕ ತಮ್ಮ ಚಿಂತನಾಲಹರಿಯನ್ನು ಹರಿಸಲಿದ್ದಾರೆ.ಪರಿಣಿತರು, ಉದ್ಯಮಿಗಳು, ವೃತ್ತಿಪರರು, ವಿದ್ಯಾರ್ಥಿಗಳು ಮತ್ತು ಇತರೆ ವರ್ಗದ ವ್ಯಕ್ತಿಗಳಿಗೆ ವೈಯಕ್ತಿಕವಾಗಿ ತಮ್ಮ ತಮ್ಮ ಕ್ಷೇತ್ರಗಳಲ್ಲಿ ಹೇಗೆ ಸಾಧನೆ ಮಾಡಿ ಸಾಧಕರಾಗಬಹುದು ಎಂಬುದನ್ನು ಮನನ ಮಾಡಿಕೊಡುವುದರ ಬಗ್ಗೆ ಈ ಸೂಪರ್ ಅಚೀವರ್ಸ್ ಕಾರ್ಯಾಗಾರದ ಮುಖ್ಯ ಉದ್ದೇಶವಾಗಿದ್ದು, ಈ ಬಗ್ಗೆ ಗಮನಹರಿಸಲಿದೆ.

ಈ ಸೂಪರ್ ಅಚೀವರ್ಸ್ ಸಮಿತ್-2017 ರ ಪ್ರಮುಖ ಉಪನ್ಯಾಸಕರೂ ಆಗಿರುವ ಆಯೋಜಕರಾದ ರಾಮ್ ಆನಂದ್ ಅವರು ಕಾರ್ಯಾಗಾರದ ಬಗ್ಗೆ ಮಾತನಾಡಿ, ನಮ್ಮ ದೇಶದಲ್ಲಿ ಪ್ರವರ್ಧಮಾನಕ್ಕೆ ಬರುತ್ತಿರುವ ಲಕ್ಷೋಪಲಕ್ಷ ಜನರಲ್ಲಿ ವೈಯಕ್ತಿಕ ಶ್ರೇಯೋಭಿವೃದ್ಧಿಯ ಪ್ರಮಾಣವನ್ನು ಹೆಚ್ಚಳ ಮಾಡಿಕೊಂಡು ವಿಶ್ವ ಮಟ್ಟದಲ್ಲಿ ಹೆಸರು ಮಾಡುವಂತೆ ಅವರನ್ನು ತಯಾರು ಮಾಡುವ ಉದ್ದೇಶ ನಮ್ಮದಾಗಿದೆಎಂದು ವಿವರಿಸಿದರು.  ಇದೊಂದು ಮಾನವ ಜಗತ್ತಿಗೆ ಸುವರ್ಣ ಅವಕಾಶವಾಗಿದ್ದು, ಈ ಅವಕಾಶವನ್ನು ಬಳಸಿಕೊಂಡು ನಾವು ಪರಸ್ಪರ ಸಂಘಜೀವಿಗಳಾಗಿ, ಪರಸ್ಪರ ಒಬ್ಬರನ್ನೊಬ್ಬರು ಅರಿತುಕೊಂಡು ಜಗತ್ತನ್ನು ಸುಮಧುರ ಮತ್ತು ಸುಂದರ ತಾಣವನ್ನಾಗಿ ಮಾಡಬೇಕಿದೆ ಎಂದು ವಿವರಿಸಿದರು.

ಈ ಕಾರ್ಯಾಗಾರದಲ್ಲಿ ನಟ, ನಿರ್ದೇಶಕ, ನಿರ್ಮಾಪಕ ರಮೇಶ್ ಅರವಿಂದ್, ರೇಡಿಯೋ ನಿರೂಪಕ ಡ್ಯಾನಿಶ್ ಸೇಠ್, ಖ್ಯಾತ ಆ್ಯಂಕರ್ ಕುಬ್ರ ಸೇಠ್, ಮೇರಾ ಈವೆಂಟ್ಸ್‍ನ ಮುಖ್ಯಕಾರ್ಯನಿರ್ವಹಣಾಕಾರಿ ಚೆನ್ನಪ್ಪ ನಾಯ್ಡು, ಕನ್ಸೂಮ್ಯಾಕ್ಸ್‍ನ ಸಂಸ್ಥಾಪಕ ಸತ್ಯನಾರಾಯಣ, ಟಿವಿ ನಿರೂಪಕ ಮತ್ತು ಲೇಖಕರಾದ ಜಯಪ್ರಕಾಶ್ ನಾಗತಿಹಳ್ಳಿ, ಖ್ಯಾತ ಟ್ಯಾರೊಟ್ ರೀಡರ್ ಶೀಲಾ ಬಾಲಾಜಿ, ಯಶಸ್ವಿ ಉದ್ಯಮಿ ಮತ್ತು ತರಬೇತುದಾರ ಡಾ.ಭರತ್ ಚಂದ್ರ, ಮೈಂಡ್‍ಶಿಫ್ಟ್‍ನ ಕೋಚ್ ರೋಹಿಣಿಮುಂದ್ರಾ, ಬ್ರಾಂಡ್ ನೆಕ್ಟರ್ ಫ್ರೆಶ್‍ನ ಸಂಸ್ಥಾಪಕಿ ಛಾಯಾ ನಂಜಪ್ಪ, 1000 ಪೆಟಲ್ಸ್‍ನ ಸಂಸ್ಥಾಪಕ ಮನೋಜ್ ಪಿ.ಕುಡ್ಥಾಕರ್, ನವೋದ್ಯಮಗಳ ತಜ್ಞ ಪವನ್ ಸೋನಿ ಸೇರಿದಂತೆ 20 ಕ್ಕೂ ಹೆಚ್ಚು ಸೂಪರ್ ಅಚೀವರ್ಸ್‍ನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಗುತ್ತದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

 

Facebook Comments

Sri Raghav

Admin