ಬಜೆಟ್ ನಲ್ಲಿ ಅರುಣ್ ಜೇಟ್ಲಿ ರೈಲ್ವೆಗೆ ಕೊಟ್ಟಿದ್ದೇನು..?

ಈ ಸುದ್ದಿಯನ್ನು ಶೇರ್ ಮಾಡಿ

Arun-Rail

ನವದೆಹಲಿ, ಫೆ.1- ಇತಿಹಾಸದಲ್ಲಿ ಇದೆ ಮೊದಲ ಬಾರಿಗೆ ರೈಲ್ವೆ ಬಜೆಟ್ ನ್ನು ಕೇಂದ್ರ ಬಜೆಟ್ ಜೊತೆಯಲ್ಲಿ ಮಾಡಿಸಲಾಗಿದ್ದು ಸುಮಾರು 3500 ಕಿಲೋ ಮೀಟರ್ ಹೊಸ ರೈಲ್ವೆ ಮಾರ್ಗ, ರೈಲು ನಿಲ್ದಾಣಗಳಲ್ಲಿ ಸೋಲಾರ್ ವಿದ್ಯುತ್ ಅಳವಡಿಕೆ, 2019ರ ವೇಳೆಗೆ ಎಲ್ಲ ರೈಲು ನಿಲ್ದಾಣ ಹಾಗೂ ರೈಲ್ವೆ ಕೋಚ್‍ಗಳಲ್ಲಿ ಜೈವಿಕ ಶೌಚಾಲಯಗಳನ್ನು ಅಳವಡಿಸುವುದು ಸೇರಿದಂತೆ ವಿವಿಧ ರೈಲ್ವೆ ಯೋಜನೆಗಳಿಗೆ ಪ್ರಸಕ್ತ ಸಾಲಿನಲ್ಲಿ ಒಂದು ಲಕ್ಷ ಕೋಟಿ ಅನುದಾನ ಮೀಸಲಿರಿಸಲಾಗಿದೆ. ಸ್ವಾತಂತ್ರ್ಯ ನಂತರ ಪ್ರಪ್ರಥಮ ಬಾರಿಗೆ ಬಜೆಟ್‍ನಲ್ಲಿ ರೈಲ್ವೆ ಬಜೆಟ್‍ಅನ್ನು ವಿಲೀನಗೊಳಿಸಿ ಬಜೆಟ್ ಮಂಡಿಸಿದ ಹಣಕಾಸು ಸಚಿವ ಅರುಣ್ ಜೇಟ್ಲಿ, ರೈಲ್ವೆ ಸುರಕ್ಷತೆಗೆ ಒಂದು ಲಕ್ಷ ಕೋಟಿ ರೂ.ಗಳನ್ನು ಮೀಸಲಿರಿಸುವುದಾಗಿ ಹೇಳಿದರು.ಕೇಂದ್ರ ಬಜೆಟ್ – 2017 (All Updates) ]

2020ರೊಳಗೆ ಮಾನವ ರಹಿತ ಲೆವೆಲ್ ಕ್ರಾಸಿಂಗ್‍ಗಳನ್ನು ಅಳವಡಿಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.   ಆನ್‍ಲೈನ್ ರೈಲ್ವೆ ಟಿಕೆಟ್ ಸೇವಾದರ ವಾಪಸ್ ಪಡೆಯುವ ಬಗ್ಗೆ ನಿರ್ಧರಿಸಿದ್ದಾರೆ. 2019ರೊಳಗೆ ಎಲ್ಲ ರೈಲ್ವೆ ಕೋಚ್‍ಗಳಿಗೆ ಜೈವಿಕ ಶೌಚಾಲಯಗಳನ್ನು ಅಳವಡಿಸಲು ತೀರ್ಮಾನಿಸಲಾಗಿದೆ ಎಂದು ಹೇಳಿದರು. 500 ರೈಲ್ವೆ ನಿಲ್ದಾಣಗಳಲ್ಲಿ ದಿವ್ಯಾಂಗರಿಗೆ ಲಿಫ್ಟ್ ಮತ್ತು ಎಕ್ಸಲೇಟರ್‍ಗಳ ವ್ಯವಸ್ಥೆ ಕಲ್ಪಿಸಲು ತೀರ್ಮಾನಿಸಲಾಗಿದೆ. ಪ್ರಯಾಣಿಕರ ಸುರಕ್ಷತೆ, ಮಹಿಳೆಯರ ರಕ್ಷಣೆಗೆ ಹೆಚ್ಚಿನ ಆದ್ಯತೆ, ಸಾರ್ವಜನಿಕರಿಗೆ ಸುಲಭ ದರದಲ್ಲಿ ರೈಲ್ವೆ ವ್ಯವಸ್ಥೆ ಕಲ್ಪಿಸುವುದು ಸೇರಿದಂತೆ ನಾಲ್ಕು ಪ್ರಮುಖ ಉದ್ದೇಶಗಳೊಂದಿಗೆ ಬಜೆಟ್‍ನಲ್ಲಿ ರೈಲ್ವೆ ಅನುದಾನವನ್ನು ಅರುಣ್ ಜೈಟ್ಲಿ ಪ್ರಸ್ತಾಪಿಸಿದ್ದಾರೆ.

ಹೊಸ ಮಾರ್ಗಗಳ ನಿರ್ಮಾಣ, ರೈಲ್ವೆ ನಿಲ್ದಾಣಗಳಲ್ಲಿ ಇಂಟರ್‍ನೆಟ್ ಮತ್ತು ವೈ-ಫೈ ಸೇವೆ ಅಳವಡಿಕೆ, ಆಧುನಿಕತೆಗೆ ಒತ್ತು, ಪ್ರಯಾಣಿಕರಿಗೆ ಕುಡಿಯುವ ನೀರು, ಪ್ರಯಾಣ ಸಂದರ್ಭದಲ್ಲಿ ಗುಣಮಟ್ಟದ ತಿಂಡಿ ಪದಾರ್ಥಗಳ ವಿತರಣೆಗೆ ಹೆಚ್ಚು ಆದ್ಯತೆ ನೀಡಲಾಗಿದೆ. ರೈಲ್ವೆ ಟಿಕೆಟ್ ಬುಕ್ಕಿಂಗ್‍ಗಾಗಿ ಗ್ರಾಹಕ ಸಹಕಾರಿ ಯೋಜನೆ, ಐಆರ್‍ಸಿಟಿಸಿಯನ್ನು ಶೇರು ಮಾರುಕಟ್ಟೆಗೆ ಸೇರ್ಪಡೆಗೊಳಿಸಲು ತೀರ್ಮಾನ ಮಾಡಲಾಗಿದೆ.   ಎಲ್ಲ ರೈಲು ಬೋಗಿಗಳಲ್ಲಿ ಶುಚಿತ್ವಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ನಾಗರಿಕ ಹಿರಿಯ ಪ್ರಯಾಣಿಕರಿಗೆ ವಿಶೇಷ ಆದ್ಯತೆ ವಿಷಯಗಳನ್ನು ಬಜೆಟ್‍ನಲ್ಲಿ ಪ್ರಸ್ತಾಪಿಸಲಾಗಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin