ಈ ವಾರ ತೆರೆ ಮೇಲೆ ಬಹುನಿರೀಕ್ಷಿತ ದ್ವಾರಕೀಶ್‍ ನಿರ್ಮಾಣದ 50ನೇ ಚಿತ್ರ ‘ಚೌಕ’

ಈ ಸುದ್ದಿಯನ್ನು ಶೇರ್ ಮಾಡಿ

1
ಕನ್ನಡ ಚಿತ್ರರಂಗದಲ್ಲಿ ಹೊಸ ಬಗೆಯ ವಿಭಿನ್ನ ಪ್ರಯತ್ನದ ಚಿತ್ರಗಳು ಸಾಲು ಸಾಲಾಗಿ ಇತ್ತೀಚೆಗೆ ಸ್ಯಾಂಡಲ್‍ವುಡ್‍ನಲ್ಲಿ ಬರುತ್ತಿವೆ. ಬಂದಂತಹ ಬಹುತೇಕ ಚಿತ್ರಗಳು ಪ್ರೇಕ್ಷಕರ ಮನಸ್ಸನ್ನು ಗೆದ್ದು ಯಶಸ್ಸಿನತ್ತ ಸಾಗುತ್ತಿವೆ. ಇದರ ನಡುವೆಯೇ ಕರ್ನಾಟಕದ ಕುಳ್ಳ ಎಂದೇ ಪ್ರಖ್ಯಾತಗೊಂಡಂತಹ ದ್ವಾರಕೀಶ್‍ರವರ ನಿರ್ಮಾಣದ 50ನೆ ಚಿತ್ರ ತೆರೆ ಮೇಲೆ ಬರಲು ಸಿದ್ಧವಾಗಿದೆ. ಮೇಯರ್ ಮುತ್ತಣ್ಣ, ಭಾಗ್ಯವಂತರು, ಗುರು-ಶಿಷ್ಯರು, ಸಿಂಗಾಪೂರ್‍ನಲ್ಲಿ ರಾಜಾಕುಳ್ಳ, ಆಪ್ತಮಿತ್ರ ಸೇರಿದಂತೆ ಹಲವಾರು ಯಶಸ್ವೀ ಚಿತ್ರಗಳನ್ನು ಕೊಡುಗೆಯಾಗಿ ನೀಡಿರುವ ದ್ವಾರಕೀಶ್ ಚಿತ್ರ ಬ್ಯಾನರ್‍ನಲ್ಲಿ ನಿರ್ಮಾಣವಾಗಿರುವ ಚೌಕ ಈ ವಾರ ರಾಜ್ಯಾದ್ಯಂತ ಸುಮಾರು 150ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದೆ.

ಸ್ಯಾಂಡಲ್‍ವುಡ್‍ನಲ್ಲಿ ಹಲವು ವರ್ಷಗಳಿಂದ ಚಿತ್ರರಂಗದಲ್ಲಿ ಬೇರೆ ಬೇರೆ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿದ್ದ ತರುಣ್ ಸುಧೀರ್ ಪ್ರಥಮ ಬಾರಿಗೆ ಸ್ವತಂತ್ರವಾಗಿ ನಿರ್ದೇಶನವನ್ನು ಮಾಡುತ್ತಿದ್ದಾರೆ. ಚೌಕ ಚಿತ್ರದಲ್ಲಿ ಒಂದು ವಿಭಿನ್ನವಾದ ಕಥಾನಕ ನಿರೂಪಿಸಲಾಗಿದೆ. ನೆನಪಿರಲಿ ಪ್ರೇಮ್, ವಿಜಯ್ ರಾಘವೇಂದ್ರ, ದಿಗಂತ್, ಪ್ರಜ್ವಲ್ ದೇವರಾಜ್ ಈ ಚಿತ್ರದ ನಾಲ್ವರು ನಾಯಕರಾಗಿ ಕಾಣಿಸಿಕೊಂಡಿದ್ದಾರೆ. ಇವರ ಜೊತೆಗೆ ಐಂದ್ರಿತಾ ರೇ, ಪ್ರಿಯಾಮಣಿ, ಭಾವನಾ, ದೀಪಾ ಸನ್ನಿಧಿ, ಮಾನ್ವಿತಾ ಹರೀಶ್ ನಾಯಕಿ ಯರಾಗಿ ಅಭಿನಯಿ ಸಿದ್ದಾರೆ. ಕನ್ನಡದ ಹಲವಾರು ಕಲಾವಿದರು ಈ ಚಿತ್ರದ ಪ್ರಮುಖ ತಾರಾಗಣದಲ್ಲಿ ಕಾಣಿಸಿ ಕೊಂಡಿದ್ದಾರೆ. ಬಹು ಕಲಾವಿದರ ತಾರಾಗಣ ಮತ್ತು ಬಹು ತಂತ್ರಜ್ಞರ ಸಮಾಗಮ ಈ ಚಿತ್ರದಲ್ಲಿದೆ.

ಚಿತ್ರದ ಹಾಡುಗಳಿಗೆ ಗುರುಕಿರಣ್, ಅರ್ಜುನ್ ಜನ್ಯ, ಹರಿಕೃಷ್ಣ, ಅನೂಪ್‍ಸಿಳೀನ್ ಹಾಗೂ ಶ್ರೀಧರ್ ವಿ. ಸಂಭ್ರಮ್ ಸಂಗೀತ ನೀಡಿದ್ದಾರೆ. ಸೋನು ನಿಗಮ್, ಅನುರಾಧ ಭಟ್ ಮೊದಲಾದ ಗಾಯಕರು ಚಿತ್ರದ ಹಾಡುಗಳಿಗೆ ಧ್ವನಿಯಾಗಿದ್ದಾರೆ. ಈ ಚಿತ್ರಕ್ಕೆ ಸತ್ಯಹೆಗಡೆ, ಕೃಷ್ಣಾ, ಸಂತೋಷ್ ಪಾತಾಜಿ ರೈ, ಶೇಖರ್ ಚಂದ್ರ ಹಾಗೂ ಸುಧಾಕರ್.ಪಿ.ರಾಜ್ ಛಾಯಾಗ್ರಹಮ ಮಾಡಿದ್ದಾರೆ. ಚಿತ್ರದ ಹಾಡುಗಳಿಗೆ ಜಯಂತ್ ಕಾಯ್ಕಿಣಿ, ಯೋಗರಾಜ ಭಟ್, ವಿ.ನಾಗೇಂದ್ರ ಪ್ರಸಾದ್ ಮೊದಲಾದವರು ಸಾಹಿತ್ಯವನ್ನು ಬರೆದಿದ್ದಾರೆ. ಬಹಳಷ್ಟು ನಿರೀಕ್ಷೆ ಹುಟ್ಟಿಸಿರುವ ಚೌಕ ಚಿತ್ರ ಪ್ರೇಕ್ಷಕರ ಮುಂದೆ ತನ್ನ ಗಮನ ಸೆಳೆಯಲು ಸಜ್ಜಾಗಿದೆ. ಇನ್ನೇನಿದ್ದರೂ ಪ್ರೇಕ್ಷಕರು ಪರದೆ ಮೇಲೆ ನೋಡಿ ಚೌಕ ಯಾವ ರೀತಿ ವಿಭಿನ್ನ ಎಂಬುದನ್ನು ಹೇಳಬೇಕಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin