ಮಾ.13ರಂದು ರಾಜ್ಯ ಬಜೆಟ್

ಈ ಸುದ್ದಿಯನ್ನು ಶೇರ್ ಮಾಡಿ

Siddaramaiah-Budget---2017

ಬೆಂಗಳೂರು, ಫೆ.2- ಒಂದೆಡೆ ನೋಟು ಅಮಾನೀಕರಣದಿಂದ ದಿಕ್ಕು ತಪ್ಪಿರುವ ಸಾಮಾನ್ಯ ಜನತೆಯ ಜನ ಜೀವನ , ಆರ್ಥಿಕ ಕುಸಿತ ಹಾಗೂ ಪಕ್ಷದಲ್ಲಿ ತಮ್ಮ ನಾಯಕತ್ವದ ವಿರುದ್ದವೇ ಅಪಸ್ವರ ಎದ್ದಿರುವ ಬೆಳವಣಿಗೆಗೆಳ ನಡುವೆಯೇ ಹಣಕಾಸಿನ ಖಾತೆಯನ್ನು ಹೊಂದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಹುನಿರೀಕ್ಷಿತ ಪ್ರಸಕ್ತ ಸಾಲಿನ ಅಯವ್ಯಯವನ್ನು ಮಾ.13ರಂದು ಮಂಡಿಸಲಿದ್ದಾರೆ.  ಅಂದು ವಿಧಾನಸೌಧದಲ್ಲಿ 12 ಗಂಟೆಗೆ ಕಾಂಗ್ರೆಸ್ ಸರ್ಕಾರದ ನಾಲ್ಕನೇ ಬಜೆಟ್ ಮಂಡನೆ ಮಾಡಲಿದ್ದು, ಈ ಬಾರಿ ಅವರದ್ದು ದಾಖಲೆಯ 12 ನೇ ಬಜೆಟ್ ಆಗಲಿದೆ.

ಮುಂದಿನ ವರ್ಷ ವಿಧಾನಸಭಾ ಚುನಾವಣೆ ನಡೆಯುತ್ತಿರುವ ಹಿನ್ನಲೆಯಲ್ಲಿ ಈ ಬಾರಿಯ ಬಜೆಟ್‍ನಲ್ಲಿ ಜನಪರ ಯೋಜನೆಗಳಿಗೆ ಪ್ರಮುಖ ಆದ್ಯತೆ ಸಿಗಲಿದೆ. 2018ರ ಮಾರ್ಚ್ ಏಪ್ರಿಲ್ ತಿಂಗಳ ಅವಧಿಯಲ್ಲಿ ವಿಧಾನಸಭಾ ಚುನಾವಣೆಗೆ ಮೂಹರ್ತ ನಿಗಧಿಯಾಗಲಿರುವುದರಿಂದ ಈ ಬಾರಿ ಸರ್ವರಿಗೂ ಸಮಬಾಳು, ಸರ್ವರಿಗೂ ಸಮಪಾಲು ತತ್ವದಂತೆ ಎಲ್ಲರಿಗೂ ಒಪ್ಪಿಯಾಗುವಂತಹ ಬಜೆಟ್ ಇದಾಗಲಿದೆ.  ಈಗಾಗಲೇ ಅಧಿಕಾರಿಗಳೊಂದಿಗೆ ಇಲಾಖಾವರು ಸಭೆ ನಡೆಸಿರುವ ಸಿದ್ದರಾಮಯ್ಯ ಆರ್ಥಿಕ ಸ್ಥಿತಿಗತಿಯ ಬಗ್ಗೆ ಮಾಹಿತಿ ಪಡೆದಿದ್ದಾರೆ. ಕಳೆದ ಸಾಲಿನಲ್ಲಿ ಯಾವ ಯಾವ ಇಲಾಖೆಗೆ ಎಷ್ಟು ಅನುದಾನ ನೀಡಲಾಗಿತ್ತು, ಇದರಲ್ಲಿ ಖರ್ಚಾಗಿರುವ ಹಣ, ಎಷ್ಟುರ ಮಟ್ಟಿಗೆ ಕಾರ್ಯಕ್ರಮಗಳನ್ನು ಅನುಷ್ಠಾನ ಮಾಡಲಾಗಿದೆ, ಸದ್ಬಳಕೆಯಾಗದೆ ಉಳಿದರುವ ಹಣದ ಬಗ್ಗೆಯೂ ಮಾಹಿತಿ ಪಡೆದಿದ್ದಾರೆ.

ಚುನಾವಣೆ ಹೊಸ್ತಿಲಲ್ಲಿರುವ ಕಾರಣ, ಈ ಬಾರಿ ಬಜೆಟ್‍ನಲ್ಲಿ ಮತದಾರರನ್ನು ಓಲೈಸಿಕೊಳ್ಳಲು ಜನಪ್ರಿಯ ಯೋಜನೆಗಳು ಘೋಷಣೆಯಾಗವುದು ಬಹುತೇಕ ಖಚಿತವಾಗಿದೆ.ಅನ್ನಭಾಗ್ಯ ಯೋಜನೆಯಡಿ ಬಡತನ ರೇಖೆಗಿಂತ ಕೆಳಗಿರುವ(ಬಿಪಿಎಲ್) ಕುಟುಂಬಗಳಿಗೆ ನೀಡುತ್ತಿರುವ ಆಹಾರ ಧಾನ್ಯಗಳ ಪ್ರಮಾಣವನ್ನು ಏಪ್ರಿಲ್ 1 ರಿಂದಲೇ ಜಾರಿಯಾಗುವಂತೆ ಹೆಚ್ಚಳ ಮಾಡುವ ಸಂಭವವಿದೆ. ಇನ್ನು ಸಾಮಾಜಿಕ ವಲಯಕ್ಕೂ ಸಿಂಹಪಾಲ ಸಿಗಲಿದ್ದು, 60 ವರ್ಷ ದಾಟಿದ ಹಿರಿಯ ನಾಗರೀಕರಿಗೆ ವಿಶೇಷ ಸವಲತ್ತುಗಳು, ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ, ಅಲ್ಲಸಂಖ್ಯಾತ, ಸೇರಿದಂತೆ ಅಹಿಂದ ವರ್ಗಗಳ ಕಲ್ಯಾಣಕ್ಕೆ ಹೊಸ ಕಾರ್ಯಕ್ರಮಗಳು ಘೋಷಣೆ ಮಾಡಲಿದ್ದಾರೆ.

ಇನ್ನು ಬಹುದಿನಗಳ ಬೇಡಿಕೆಯಂತೆ ಈ ಬಾರಿ 40 ಕ್ಕೂ ಹೆಚ್ಚು ಹೊಸ ತಾಲೂಕ್ ಘೋಷಣೆಯಾಗಲಿದೆ. ಸಹಕಾರಿ ಬ್ಯಾಂಕ್‍ಗಳಲ್ಲಿ ಪಡೆದಿರುವ ರೈತರ ಸಾಲದ ಮೇಲಿನ ಬಡ್ಡಿ ಮನ್ನಾವಾಗಲಿದೆ.
ಇದೇ ಮೊದಲ ಬಾರಿಗೆ ರಾಜ್ಯದಲ್ಲಿ ಸಮಾಜಿಕ , ಶೈಕ್ಷಣಿಕ ಸ್ಥಿತಿಗತಿ ಕುರಿತಂತೆ ಹಿಂದುಳಿದ ವರ್ಗಗಗಳ ಆಯೋಗದಿಂದ ಜನಗಣತಿ ನಡೆದಿರುವ ಕಾರಣ ಅಹಿಂದ ಸಮೂದಾಯಕ್ಕೆ ಹೆಚ್ಚಿನ ಆದ್ಯತೆ ನೀಡುವುದರಲ್ಲಿ ಅನುಮಾನವಿಲ್ಲ. ಈ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಸಮೂದಾಯದ ಮೂಗಿಗೆ ತುಪ್ಪ ಸವರುವುದರಲ್ಲಿ ಯಾವ ಅನುಮಾನವೂ ಇಲ್ಲ.
ಪಕ್ಷದೊಳಗೆ ಉಂಟಾಗರುವ ಸಣ್ಣ ಪುಟ್ಟ ಗೊಂದಲ , ತಮ್ಮ ನಾಯಕತ್ವದ ವಿರುದ್ದ ಆಗಾಗ್ಗೆ ಕೆಲವರು ಅಪಸ್ವರ ತೆಗೆಯುತ್ತಿರುವುದು, ರಾಜ್ಯದಲ್ಲಿ ಮತ್ತೇ ಪಕ್ಷವನ್ನು ಅಧಿಕಾರಕ್ಕೆ ತಂದು ಎರಡನೇ ಅವಧಿಗೂ ತಾವೇ ಮುಖ್ಯಮಂತ್ರಿಯಾಗಬೇಕೆಂಬ ಕನಸು ಕಂಡಿರುವ ಸಿದ್ದರಾಮಯ್ಯನವರು ಮಂಡಿಸಲಿರುವ ಈ ಸಾಲಿನ ಬಜೆಟ್, ಹಲವು ಕಾರಣಗಳಿಗಾಗಿ ಕುತೂಹಲ ಕೆರಳಿಸಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin