ಹೆಚ್ಡಿಕೆ ಮೀಟ್ ಮಾಡಿದ ‘ಬಿಗ್‍ಬಾಸ್’ ಪ್ರಥಮ್, ಸ್ವಂತ ಟ್ರಸ್ಟ್ ಆರಂಭಿಸ್ತಾರಂತೆ

ಈ ಸುದ್ದಿಯನ್ನು ಶೇರ್ ಮಾಡಿ

Pratham
ಬೆಂಗಳೂರು, ಫೆ.2- ಕನ್ನಡ ರಿಯಾಲಿಟಿ ಶೋ ಬಿಗ್‍ಬಾಸ್ ವಿಜೇತ ಪ್ರಥಮ್ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿಯವರನ್ನು ಭೇಟಿ ಮಾಡಿದರು.  ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಿಯಾಲಿಟಿ ಶೋ ಆರಂಭಕ್ಕೂ ಮುನ್ನ ಕುಮಾರಸ್ವಾಮಿಯವರು ತಮಗೆ ದೂರವಾಣಿ ಮೂಲಕ ಶುಭಾಶಯ ಕೋರಿದ್ದರು.  ಈಗ ಶೋ ಮುಗಿದಿದ್ದು, ನಾನೇ ವಿಜೇತನಾಗಿದ್ದು, ಕುಮಾರಸ್ವಾಮಿಯವರಿಗೆ ಧನ್ಯವಾದ ತಿಳಿಸಲು ಬಂದಿದ್ದೇನೆ ಎಂದರು.  ರಾಜಕೀಯ ಕ್ಷೇತ್ರಕ್ಕೆ ಬರುವ ಆಶಯವಿಲ್ಲ. ಸಿನಿಮಾ ಕ್ಷೇತ್ರದಲ್ಲೇ ಮುಂದುವರಿಯುತ್ತೇನೆ. ತನ್ನದೇ ಆದ  ಟ್ರಸ್ಟ್  ಆರಂಭಿಸುತ್ತೇನೆ. ಆ ಟ್ರಸ್ಟ್ ನಲ್ಲಿಯೇ ಸಿನಿಮಾದ ಆಡಿಯೋ ಬಿಡುಗಡೆ ಮಾಡುತ್ತೇನೆ.  ಬಿಗ್‍ಬಾಸ್‍ನಿಂದ ಬಂದ ಹಣವನ್ನು ಸಾಮಾಜಿಕ ಸೇವೆಗೆ ಅರ್ಪಣೆ ಮಾಡಲಿದ್ದೇನೆ ಎಂದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin