ಕಬಿನಿ ಡ್ಯಾಂನಲ್ಲಿ ಅಕ್ರಮ ಮೀನು ಮಾರಾಟ ದಂಧೆ

ಈ ಸುದ್ದಿಯನ್ನು ಶೇರ್ ಮಾಡಿ

Kabini-DAm--01

ಎಚ್.ಡಿ.ಕೋಟೆ, ಫೆ.3-ಕಬಿನಿ ಜಲಾಶಯದಲ್ಲಿ ಅಕ್ರಮವಾಗಿ ಮೀನು ಹಿಡಿದು ಮಾರಾಟ ಮಾಡುತ್ತಿರುವ ದಂಧೆ ನಡೆಯುತ್ತಿದ್ದು, ಅಧಿಕಾರಿಗಳೇ ಸಾಥ್ ನೀಡುತ್ತಿದ್ದಾರೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.  ಮೈಸೂರಿನ ಎಚ್.ಡಿ.ಕೋಟೆಯ ಬೀಚನಹಳ್ಳಿ ಬಳಿ ಇರುವ ಡ್ಯಾಮ್‍ನಲ್ಲಿ ಸುಮಾರು 10 ಟನ್‍ಗೂ ಅಧಿಕ ಮೀನುಗಳಿವೆ. ಸರ್ಕಾರಕ್ಕೆ ಮಾಹಿತಿ ನೀಡದೆ ಕೆಲವು ಅಧಿಕಾರಿಗಳು ಅಕ್ರಮವಾಗಿ ಮೀನುಗಳನ್ನು ಹಿಡಿಸಿ ಮಾರಾಟ ಮಾಡುತ್ತಿದ್ದಾರೆ. ಇದಕ್ಕೆ ಪ್ರಭಾವಿ ಮುಖಂಡರೂ ಸಹ ಸಾಥ್ ನೀಡುತ್ತಿದ್ದಾರೆ. ಡ್ಯಾಮ್ ಕಾಮಗಾರಿ ಮಾಡಲು ನೀರು ತೆಗೆಯುವ ವೇಳೆ ಲಭ್ಯವಾಗುವ ಮೀನುಗಳನ್ನು ಟೆಂಡರ್ ಕರೆಯದೆ ಮಾರಾಟ ಮಾಡಿರುವ ಪ್ರಕರಣಗಳು ನಡೆದಿವೆ. ಹಿರಿಯ ಅಧಿಕಾರಿಗಳ ಗಮನಕ್ಕೆ ತಂದರೂ ಅವರು ಯಾವುದೇ ಕ್ರಮ ಕೈಗೊಳ್ಳದಿರುವುದಕ್ಕೆ ಗಾಮಸ್ಥರು ಆಕ್ರೋಶಗೊಂಡಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin