ಮೀಜಲ್ಸ ಮತ್ತು ರುಬೆಲ್ಲ ಲಸಿಕಾ ಅಭಿಯಾನ ಪೂರ್ವಭಾವಿ ಸಭೆ

ಈ ಸುದ್ದಿಯನ್ನು ಶೇರ್ ಮಾಡಿ

11
ಗದಗ,ಫೆ.3- ಧಡಾರ ರುಬೆಲ್ಲಾ ವಿಶೇಷ ಲಸಿಕಾ ಅಭಿಯಾನದಡಿ ಜಿಲ್ಲೆಯಲ್ಲಿಯ ಒಂಬತ್ತು ತಿಂಗಳಿಂದ ಹದಿನೈದು ವರ್ಷದೊಳಗಿನ ಎಲ್ಲ ಮಕ್ಕಳಿಗೆ ಲಸಿಕೆ ಹಾಕಿಸಲು ಸರ್ವಕ್ರಮ ತೆಗೆದುಕೊಳ್ಳಲು ಜಿಲ್ಲಾ ಪಂಚಾಯತ ಸಿಇಓ ಮಂಜುನಾಥ ಚವ್ಹಾಣ ಸೂಚನೆ ನೀಡಿದರು.ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿಂದು ಜರುಗಿದ ಮೀಜಲ್ಸ ಮತ್ತು ರುಬೆಲ್ಲಾ ಅಭಿಯಾನ ಕಾರ್ಯಕ್ರಮದ ಜಿಲ್ಲಾ ಲಸಿಕಾ ಟಾಸ್ಕಫೋರ್ಸ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಫೆ 7ರಿಂದ 28ರವರೆಗೆ ಜರುಗುವ ಲಸಿಕಾ ಅಭಿಯಾನ ಆರಂಭದ ಒಂದು ವಾರ ಮೊದಲೆ ಅಭಿಯಾನ ನಡೆಯುವ ಸ್ಥಳ, ದಿನಾಂಕ ಹಾಗೂ ಸಮಯದ ಮಾಹಿತಿಯುಳ್ಳ ಆಹ್ವಾನ ಪತ್ರಗಳನ್ನು ಸ್ಥಳೀಯ ನರ್ಸ, ಆಶಾ ಕಾರ್ಯಕರ್ತೆಯರು ಪ್ರತಿ ಮನೆಗೂ ತಲುಪಿಸಲು ಸೂಚನೆ ನೀಡಿದರು.

ಗ್ರಾಮೀಣ ಪ್ರದೇಶಗಳಲ್ಲಿ ಈ ಲಸಿಕಾ ಅಭಿಯಾನದ ಕುರಿತು ಜನರಲ್ಲಿ ಜಾಗೃತಿ ಮೂಡಿಸಲು ಹೆಚ್ಚಿನ ಪ್ರಚಾರ ಕಾರ್ಯ ಕೈಗೊಳ್ಳಲು ಸೂಚಿಸಿದ ಅವರು ಶಾಲೆಯಿಂದ ಹೊರಗುಳಿದ ಮಕ್ಕಳಿಗೆ ವಿಶೇಷ ಲಸಿಕಾ ಚಿಕಿತ್ಸಕರ ಮೂಲಕ ಲಸಿಕೆ ನೀಡಲು ಸರ್ವ ಸಿದ್ದತೆ ಮಾಡಿಕೊಳ್ಳಲು ಸಂಬಂಧಿತ ಅಧಿಕಾರಿಗಳಿಗೆ ಸೂಚಿಸಿದರು. ಲಸಿಕೆ ನಿರ್ವಹಣೆ ಕುರಿತು ಸೂಕ್ತ ವ್ಯವಸ್ಥೆ ಮಾಡಿಕೊಳ್ಳಲು ಜಿಲ್ಲೆಯ ಎಲ್ಲ ವೈಧ್ಯಾಧಿಕಾರಿಗಳಿಗೆ ಸೂಚನೆ ನೀಡಿದರು. ಜಿಲ್ಲೆಯ ಪ್ರತಿಯೊಂದು ಮಗುವಿಗೂ ಲಸಿಕೆ ನೀಡಿ ಈ ಲಸಿಕಾ ಅಭಿಯಾನವನ್ನು ಯಶಸ್ವಿಗೊಳಿಸಲು ಜಿಪಂ ಸಿಇಓ ಮಂಜುನಾಥ ಚವ್ಹಾಣ ಮನವಿ ಮಾಡಿದ ಅವರು ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಐ.ಜಿ. ಗದ್ಯಾಳ, ಜಿಪಂ ಉಪನಿರ್ದೇಶಕ ಎಚ್.ಸಿ. ಮಹೇಶ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಪಿ.ಎಚ್. ಕಬಾಡಿ, ಸಂತಾವೈಧ್ಯಾಧಿಕಾರಿಗಳಾದ ಚಂದ್ರಕಲಾ ಜೆ. ಸತೀಶ ಬಸರೀಗಡದ, ವಾಯ.ಕೆ. ಭಜಂತ್ರಿ, ಡಾ. ಪ್ರವೀಣ ಮೇಟಿ ಸೇರಿದಂತೆ ತಾಲೂಕಾ ವೈಧ್ಯಾಧಿಕಾರಿಗಳು, ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin