ಮುಂಬೈನಲ್ಲಿ ಸಾರ್ವಜನಿಕ ಶೌಚಾಲಯ ಕುಸಿದು ಮೂವರ ಸಾವು

ಈ ಸುದ್ದಿಯನ್ನು ಶೇರ್ ಮಾಡಿ

Public-Toilet

ಮುಂಬೈ, ಫೆ.3-ಸಾರ್ವಜನಿಕ ಶೌಚಾಲಯದ ಭಾಗವೊಂದು ಕುಸಿದು ಮೂವರು ಮೃತಪಟ್ಟು, ಕೆಲವರು ಗಾಯಗೊಂಡಿರುವ ಘಟನೆ ಇಂದು ಬೆಳಿಗ್ಗೆ ಮುಂಬೈನ ಮನ್‍ಖರ್ಡ್‍ನಲ್ಲಿ ಸಂಭವಿಸಿದೆ. ಇಂದಿರಾನಗರ ಕೊಳಗೇರಿ ಪ್ರದೇಶದಲ್ಲಿ ಬೆಳಿಗ್ಗೆ 8.15ರಲ್ಲಿ ಈ ದುರ್ಘಟನೆ ಸಂಭವಿಸಿದೆ. ಈ ಘಟನೆ ನಡೆದಾಗ ಕೆಲವರು ಶೌಚಾಲಯದ ಒಳಗಿದ್ದರು. ಇನ್ನು ಹಲವರು ಹೊರಗೆ ನಿಂತಿದ್ದರು. ಆಗ ಹಠಾತ್ತನೇ ಶೌಚಾಲಯದ ಒಂದು ಭಾಗ ಕುಸಿದು ಮೂವರು ಮೃತಪಟ್ಟರು ಎಂದು ಪೊಲೀಸರು ತಿಳಿಸಿದ್ದಾರೆ.   ಗಾಯಾಳುಗಳನ್ನು ರಾಜೇವಾಡಿ ಆಸ್ಪತ್ರೆಗೆ ಸೇರಿಸಲಾಗಿದ್ದು, ಇಬ್ಬರ ಸ್ಥಿತಿ ಗಂಭೀರವಾಗಿದೆ ಎಂದು ವೈದ್ಯರು ಹೇಳಿದ್ಧಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin