ರಾಷ್ಟ್ರಪತಿ ಭವನದ ಲೆಕ್ಕಪತ್ರ ಶಾಖೆಯಲ್ಲಿ ಬೆಂಕಿ ಆಕಸ್ಮಿಕ

ಈ ಸುದ್ದಿಯನ್ನು ಶೇರ್ ಮಾಡಿ

Fire-in

ನವದೆಹಲಿ, ಫೆ.3– ಮೊನ್ನೆ ಕೇಂದ್ರ ಬಜೆಟ್ ಹಿಂದಿನ ದಿನ ಸಂಸತ್ ರೂಮ್ ಒಂದರಲ್ಲಿ ಬೇಕಿ ಕಾಣಿಸಿಕೊಂಡ ಬೆನ್ನಲ್ಲೇ ಇಂದು ರಾಷ್ಟ್ರಪತಿ ಭವನದ ಲೆಕ್ಕಪತ್ರ ಶಾಖೆಯಲ್ಲಿ ಇಂದು ಬೆಳಿಗ್ಗೆ ಬೆಂಕಿ ಕಾಣಿಸಿಕೊಂಡು ಕೆಲಕಾಲ ಆತಂಕದ ವಾತಾವರಣ ಸೃಷ್ಟಿಯಾಗಿತ್ತು. ಅಗ್ನಿಶಾಮಕ ಸಿಬ್ಬಂದಿ ಅಗ್ನಿಯನ್ನು ನಂದಿಸಿ ಸಂಭವಿಸಬಹುದಾಗಿದ್ದ ಅನಾಹುತವನ್ನು ತಪ್ಪಿಸಿದರು. ಈ ಘಟನೆಯಲ್ಲಿ ಕಚೇರಿಯ ಪೀಠೋಪಕರಣಗಳು ಮತ್ತಿತರ ವಸ್ತುಗಳು ಸುಟ್ಟು ಭಸ್ಮವಾಗಿದ್ದು, ಯಾರಿಗೂ ಗಾಯಗಳಾಗಿಲ್ಲ.

ರಾಷ್ಟ್ರಪತಿ ಭವನದ ಲೆಕ್ಕಪತ್ರ ಶಾಖೆಯಲ್ಲಿ ಇಂದು ಬೆಳಗ್ಗೆ 8.45ರಲ್ಲಿ ಬೆಂಕಿ ಕಾಣಿಸಿಕೊಂಡಿತು. ಸುದ್ದಿ ತಿಳಿದ ಕೂಡಲೇ ಆರು ವಾಹನಗಳೊಂದಿಗೆ ಸ್ಥಳಕ್ಕೆ ಧಾವಿಸಿದ ಸಿಬ್ಬಂದಿ 10 ನಿಮಿಷಗಳಲ್ಲಿ ಅಗ್ನಿಯನ್ನು ನಿಯಂತ್ರಿಸಿದರು ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin