ಸುಮ್ಮನಿರಲಾರದೆ ಕಿವಿಯಲ್ಲಿ ಹೆಬ್ಬಾವು ಬಿಟ್ಟುಕೊಂಡ ಯುವತಿ ಪಜೀತಿ..!

ಈ ಸುದ್ದಿಯನ್ನು ಶೇರ್ ಮಾಡಿ

Pyton

ಲಾಸ್ ಏಂಜೆಲಿಸ್, ಫೆ.3-ಕಿವಿಯೊಳಗೆ ಇರುವೆಯೋ ಅಥವಾ ಸಣ್ಣ ಜಿರಳೆಯೋ ಸಿಕ್ಕಿ ಹಾಕಿಕೊಂಡಿರುವುದನ್ನು ನಾವು ಕೇಳಿದ್ದೇವೆ. ಆದರೆ ಅಮೆರಿಕದ ಯುವತಿಯೊಬ್ಬಳ ಕಿವಿಯ ರಂಧ್ರದಲ್ಲಿ ಹೆಬ್ಬಾವೊಂದು ಸಿಕ್ಕಿ ಹಾಕಿಕೊಂಡ ಘಟನೆ ನಡೆದಿದೆ. ನಂಬಲು ಅಸಾಧ್ಯವಾದರೂ ಇದು ನಿಜ.  ಇಲ್ಲಿನ ಓರೇಗಾನ್ ನಿವಾಸಿಯಾದ 17 ವರ್ಷ ಅಶ್ಲೀ ಎಂಬಾಕೆ ಸೆಲ್ಫೀ ತೆಗೆದುಕೊಳ್ಳುತ್ತಿದ್ದಾಗ ಆಕೆ ಸಾಕಿದ್ದ ಬಾಲ್ ಪೈತಾನ್ ಜಾತಿಯ ಬಾರ್ಟ್ ಎಂಬ ಹೆಬ್ಬಾವು ಆಕೆಯ ಕಿವಿ ಒಳಗೆ ಸಿಕ್ಕಿ ಹಾಕಿಕೊಂಡಿತು. ಇದರಿಂದ ಗಾಬರಿಯಾದ ಆಕೆ ಹಾವನ್ನು ಹೊರ ತೆಗೆಯಲು ಪ್ರಯತ್ನಿಸಿದಳು. ಆದರೆ ಸಾಧ್ಯವಾಗಲಿಲ್ಲ. ನಂತರ ಆಕೆ ತುರ್ತು ರಕ್ಷಣಾ ಸಿಬ್ಬಂದಿಗೆ ಕರೆ ಮಾಡಿದಳು.

ಕೂಡಲೇ ಸ್ಥಳಕ್ಕೆ ಧಾವಿಸಿದ ಅವರು ಸರ್ಪವನ್ನು ಹೊರಗೆಳೆಯಲು ಯತ್ನಿಸಿದರೂ ಪ್ರಯೋಜನವಾಗಲಿಲ್ಲ.   ನಂತರ ಆಕೆಯನ್ನು ಸ್ಥಳೀಯ ಆಸ್ಪತ್ರೆಗೆ ಕರೆದೊಯ್ಯಲಾಯಿತು. ವೈದ್ಯರು ಕಿವಿಗೆ ಅನಸ್ತೇಶಿಯಾ ಚುಚ್ಚುಮದ್ದು ನೀಡಿ ನಂತರ ಹೆಬ್ಬಾವನ್ನು ಹೊರತೆಗೆದರು. ಇಷ್ಟಕ್ಕೂ ಈ ಹೆಬ್ಬಾವು ಆಕೆಯ ಕಿವಿಯೊಳಗೆ ಹೇಗೆ ಹೋಯಿತು ಎಂಬ ಬಗ್ಗೆ ಕೂಲಂಕಷ ತನಿಖೆ ನಡೆಯುತ್ತಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin