25 ವರ್ಷ ಸೇವೆ ಸಲ್ಲಿಸಿರುವ ಶಿಕ್ಷಕರಿಗೆ ಆಲ್ಟೋ ಕಾರು ಗಿಫ್ಟ್ ಕೊಟ್ಟ ಶಿಕ್ಷಣ ಸಂಸ್ಥೆ

ಈ ಸುದ್ದಿಯನ್ನು ಶೇರ್ ಮಾಡಿ

Alto-Car--01

ನಂಜನಗೂಡು, ಫೆ.3– ನಂಜನಗೂಡಿನ ಪ್ರತಿಷ್ಠಿತ ಶಿಕ್ಷಣ ಸಂಸ್ಥೆ ಯಾದ, ಸಿಟಿಜನ್ಸ್ ಶಿಕ್ಷಣ ಸಂಸ್ಥೆಯ ಸಂಸ್ಥಾಪಕರಾದ ದಿ.ಜಾವಿದ್ ಅಹಮ್ಮದ್ ರವರ ಹುಟ್ಟುಹಬ್ಬದ ಅಂಗವಾಗಿ 25ಕ್ಕೂ ಹೆಚ್ಚು ವರ್ಷ ಸೇವೆ ಸಲ್ಲಿಸಿರುವ ಶಿಕ್ಷಕ, ಶಿಕ್ಷಕಿಯರನ್ನು ಗುರುತಿಸಿ ಆಲ್ಟೋ ಕಾರನ್ನು ಉಡುಗೊರೆಯಾಗಿ ನೀಡಲಾಯಿತು.  ಕರ್ನಾಟಕದಲ್ಲಿಯೇ ಮೊಟ್ಟಮೊದಲ ಬಾರಿಗೆ ಶೈಕ್ಷಣಿಕ ಸಂಸ್ಥೆಯೊಂದು ಸೇವಾನಿರತ ಶಿಕ್ಷಕ, ಶಿಕ್ಷಕಿಯರನ್ನು ಗುರುತಿಸಿ ಬೃಹತ್ ಉಡುಗೊರೆಯನ್ನು ಕೊಟ್ಟಂತಹ ಕೀರ್ತಿ ಸಿಟಿಜûನ್ ಶಿಕ್ಷಣ ಸಂಸ್ಥೆಗೆ ಸಲ್ಲುತ್ತದೆ.  ಸಂಸ್ಥಾಪಕರಾದ ದಿ.ಜಾವಿದ್ ಅಹಮ್ಮದ್‍ರವರು ಸುಮಾರು 25 ವರ್ಷಗಳ ಹಿಂದೆ 7 ಮಕ್ಕಳಿಂದ ಪ್ರಾರಂಭಿಸಿದ ಈ ಸಂಸ್ಥೆಯು ಹಲವಾರು ಅಡೆತಡೆಗಳನ್ನು ಮೆಟ್ಟಿ ನಿಂತು ನಿರೀಕ್ಷೆಗೂ ಮೀರಿ ಬೆಳೆದು ಈಗ ಐದೂವರೆ ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ವಿದ್ಯಾದಾನ, ಜ್ಞಾನದಾಸೋಹವನ್ನು ನೀಡುತ್ತಿರುವುದು ಹೆಮ್ಮೆಯ ವಿಷಯವಾಗಿದೆ. ದಿ.ಜಾವಿದ್ ಅಹಮ್ಮದ್‍ರವರ ಕನಸಾದ ಪಿಯು ಕಾಲೇಜು ಸ್ಥಾಪನೆಯಾಗಿದ್ದು ಸುಮಾರು 800ಕ್ಕೂ ಹೆಚ್ಚು ವಿದ್ಯಾರ್ಥಿಗಳು ಇದರ ಪ್ರಯೋಜನವನ್ನು ಪಡೆದುಕ್ಕೊಳ್ಳುತ್ತಿದ್ದಾರೆ.

ಈ ಸಂಸ್ಥೆಯಲ್ಲಿ ಗೌರವವನ್ನು ಪಡೆದುಕೊಂಡವರಲ್ಲಿ ಮುಖ್ಯೋಪಾಧ್ಯಾಯಿನಿ ಹೇನಾ ಕಣ್ಣನ್, ಲೆಕ್ಕ ಪರಿಶೋಧಕಿ ಶಾಂತಾ, ಸಹ ಶಿಕ್ಷಕಿ ಸಂಧ್ಯಾ, ಉಪ ಮುಖ್ಯೋಪಾಧ್ಯಾಯಿನಿ ಕುತುಬ್ ತಾರಾ, ಪ್ರಾಂಶುಪಾಲರು ಮೈತಿಲಿ ಲಕ್ಷ್ಮಣ್‍ರವರುಗಳಾಗಿದ್ದಾರೆ . ಸಿಟಿಜನ್ಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷೆ ಮಸೂದ ಬೇಗಂ, ಕಾರ್ಯದರ್ಶಿ ನೂರ್ ಮಹಮದ್ ಅಲೀ, ಆಡಳಿತಾಧಿಕಾರಿ ಆನಿಯಾಅಲೀ, ಪ್ರಾಚಾರ್ಯಗಳಾದ ಪುಟ್ಟಸ್ವಾಮಿ, ಪ್ರಸಾದ್, ಕುತೂಬ್ ತಾರಾ, ಹೇನಾಕಣ್ಣನ್ ಮುಂತಾದವರು ಭಾಗವಹಿಸಿದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin