ಅಕ್ರಮ ನೀರಿನ ಸಂಪರ್ಕಕ್ಕೆ ನಿರ್ಧಾಕ್ಷಿಣ್ಯ ಕ್ರಮ : ಹನುಮಂತೇಗೌಡ
ಗೌರಿಬಿದನೂರು, ಫೆ.3- ಒಂದೇ ಮನೆಗೆ ಒಂದು ನಲ್ಲಿ ಸಂಪರ್ಕ ಹೊಂದಿರಬೇಕು. ಅನಧಿಕೃತವಾಗಿ ಎರಡು-ಮೂರು ಸಂಪರ್ಕಗಳನ್ನು ಹೊಂದಿದ್ದಲ್ಲಿ ನಿರ್ಧಾಕ್ಷಿಣ್ಯ ಕ್ರಮ ಜರುಗಿಸಲಾಗುವುದು ಎಂದು ಪುರಸಭೆ ಮುಖ್ಯಾಧಿಕಾರಿ ಎಚ್.ಸಿ.ಹನುಮಂತೇಗೌಡ ಎಚ್ಚರಿಸಿದ್ದಾರೆ.ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ಪುರಸಭೆ ಸಿಬ್ಬಂದಿ ಪಟ್ಟಣದ ವಿವಿಧ ವಾರ್ಡ್ಗಳಲ್ಲಿ ಸಂಚರಿಸಿ ಪ್ರತಿಯೊಂದು ಮನಗಳಿಗಿರುವ ನೀರಿನ ಸಂಪರ್ಕವನ್ನು ತಪಾಸಣೆ ಮಾಡಿ ಅನಧಿಕೃತ ಸಂಪರ್ಕ ಹೊಂದಿದ್ದಲ್ಲಿ ಸ್ಥಳದಲ್ಲೇ ದಂಡ ವಿಧಿಸಿ ನಂತರ ನೀರಿನ ತೆರಿಗೆ ಪಾವತಿಸಿಕೊಂಡು ಸಕ್ರಮ ಸಂಪರ್ಕವನ್ನು ಕೊಡಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಪಟ್ಟಣದ ವಿನಾಯಕ ನಗರ ಬಡಾವಣೆ(5ನೇ ವಾರ್ಡ್)ಯಲ್ಲಿ 24 ಅನಧಿಕೃತ ನೀರಿನ ಸಂಪರ್ಕ ಹೊಂದಿದ್ದು, ದಂಡ ವಿಧಿಸಿ ನಂತರ ತೆರಿಗೆಯನ್ನು ಪಾವತಿಸಿಕೊಂಡು ಸಂಪರ್ಕ ಕೊಡಲಾಗಿದೆ. ಒಟ್ಟು 1.50 ಲಕ್ಷ ನೀರಿನ ತೆರಿಗೆಯನ್ನು ಸಂಗ್ರಹಿಸಲಾಗಿದೆ ಎಂದು ಕಂದಾಯಧಿಕಾರಿ ಸಂತೋಷ್ ಹೇಳಿದ್ದಾರೆ.ಅಭಿಯಂತರ ತ್ಯಾಗರಾಜು, ಅರುಣ್, ಕರವಸೂಲಿಗಾರ ನರಸಿಂಹಮೂರ್ತಿ, ಶ್ರೀನಿವಾಸ್ ಮುಂತಾದವರು ಈ ಸಂದರ್ಭದಲ್ಲಿ ಹಾಜರಿದ್ದರು.
< Eesanje News 24/7 ನ್ಯೂಸ್ ಆ್ಯಪ್ >
Click Here to Download : Android / iOS