ಟ್ರಂಪಾದೇಶದ ನಂತರ 1 ಲಕ್ಷ ವೀಸಾ ರದ್ದುಗೊಳಿಸಿದ ಅಮೇರಿಕ

ಈ ಸುದ್ದಿಯನ್ನು ಶೇರ್ ಮಾಡಿ

Trump--01

ವಾಷಿಂಗ್ಟನ್, ಫೆ.4-ಏಳು ಮುಸ್ಲಿಂ ಪ್ರಾಬಲ್ಯ ರಾಷ್ಟ್ರಗಳ ಪ್ರಜೆಗಳಿಗೆ ನಿರ್ಬಂಧ ವಿಧಿಸುವ ವಿವಾದಿತ ವಲಸೆ ಆದೇಶಕ್ಕೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಹಿ ಮಾಡಿದ ನಂತರ ಅಮೆರಿಕ ಸುಮಾರು ಒಂದು ಲಕ್ಷ ವೀಸಾಗಳನ್ನು ರದ್ದುಗೊಳಿಸಿದೆ. ಇರಾಕ್, ಸಿರಿಯಾ, ಸೂಡಾನ್, ಇರಾನ್, ಸೊಮಾಲಿಯಾ, ಲಿಬಿಯಾ ಮತ್ತು ಯೆಮೆನ್ ದೇಶಗಳ ಪ್ರಜೆಗಳಿಗೆ ಮೂರು ತಿಂಗಳ ಕಾಲ ಅಮೆರಿಕ ಪ್ರವೇಶಕ್ಕೆ ನಿರ್ಬಂಧ ಹೇರುವ ಆದೇಶಕ್ಕೆ ಟ್ರಂಪ್ ಕಳೆದ ವಾರ ಸಹಿ ಮಾಡಿದ್ದರು.   ಈ ಆದೇಶಕ್ಕೆ ಅನುಗುಣವಾಗಿ ಈವರೆಗೆ ಸುಮಾರು ಒಂದು ಲಕ್ಷ ವೀಸಾಗಳನ್ನು ತಾತ್ಕಾಲಿಕವಾಗಿ ರದ್ದುಗೊಳಿಸಲಾಗಿದೆ. ಮುಂದಿನ ಆದೇಶ ಬಂದ ನಂತರ ಈ ವೀಸಾಗಳ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು ಎಂದು ವಿದೇಶಾಂಗ ವ್ಯವಹಾರ ಇಲಾಖೆಯ ಬ್ಯೂರೋ ಆಫ್ ಕಾನ್ಸುಲರ್ ಅಫೇರ್ಸ್‍ನ ವಕ್ತಾರ ವಿಲ್ ಕುಕ್ಸ್ ತಿಳಿಸಿದ್ದಾರೆ.

ಲಾಸ್ ಏಂಜೆಲಿಸ್ ವರದಿ : ಇದೇ ವೇಳೆ ಟ್ರಂಪ್‍ರ ಈ ವಿವಾದಾತ್ಮಕ ಆದೇಶದ ವಿರುದ್ಧ ಮತ್ತೊಬ್ಬ ನ್ಯಾಯಾಧೀಶರು ತಿರುಗಿಬಿದ್ದಿದ್ಧಾರೆ. ಅಮೆರಿಕ ಜಿಲ್ಲಾ ನ್ಯಾಯಾಧೀಶ ಜೇಮ್ಸ್ ರಾಬರ್ಟ್ ಈ ಆದೇಶ ತಾತ್ಕಾಲಿಕ ತಡೆ ನೀಡಿ ಟ್ರಂಪ್ ವಿರುದ್ಧ ಸಿಡಿದೆದ್ದಿದ್ದಾರೆ.   ವಾಷಿಂಗ್ಟನ್ ರಾಜ್ಯ ಅಟಾರ್ನಿ ಜನರಲ್ ಬಾಬ್ ಫರ್ಗುಸನ್ ಅವರು ನೀಡಿದ ದೂರನ್ನು ಪರಿಗಳಿಸಿದ ರಾಬರ್ಟ್ ಅಮೆರಿಕ ಅಧ್ಯಕ್ಷರ ಆದೇಶ ಜಾರಿಗೆ ತಾತ್ಕಾಲಿಕ ತಡೆ ನೀಡಿದ್ದಾರೆ. ಸಂವಿಧಾನಕ್ಕೆ ಎಲ್ಲರೂ ತಲೆಬಾಗಬೇಕು. ಕಾನೂನಿಗಿಂತ ಯಾರೂ ದೊಡ್ಡವರಲ್ಲ, ಅಧ್ಯಕ್ಷರೂ ಕೂಡ ಇದಕ್ಕೆ ಹೊರೆತಲ್ಲ. ಮುಗ್ಧ ಜನರಿಗೆ ತೊಂದರೆಯಾಗುವ ಆದೇಶವನ್ನು ಒಪ್ಪಲು ಸಾಧ್ಯವಿಲ್ಲ ಎಂದು ಬಾಬ್ ತಮ್ಮ ದೂರಿನಲ್ಲಿ ತಿಳಿಸಿದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin