ತಮಿಳುನಾಡಿನಲ್ಲಿ ಕ್ಷಿಪ್ರ ರಾಜಕೀಯ ಬೆಳವಣಿಗೆ, ಚಿನ್ನಮ್ಮನನ್ನ ಸಿಎಂ ಪಟ್ಟಕ್ಕೇರಿಸಲು ತಯಾರಿ

ಈ ಸುದ್ದಿಯನ್ನು ಶೇರ್ ಮಾಡಿ

Shashikala-Natarajan

ಚೆನ್ನೈ, ಫೆ.4-ಕ್ಷಿಪ್ರ ರಾಜಕೀಯ ಬೆಳವಣಿಗೆಯೊಂದರಲ್ಲಿ ಮಾಜಿ ಮುಖ್ಯಮಂತ್ರಿ ದಿವಂಗತ ಜಯಲಲಿತಾರ ಪರಮಾಪ್ತೆ ಮತ್ತು ಎಐಎಡಿಂಕೆ ಪ್ರಧಾನ ಕಾರ್ಯದರ್ಶಿ ಶಶಿಕಲಾ ನಟರಾಜನ್ ಅವರಿಗೆ ಮುಖ್ಯಮಂತ್ರಿ ಪಟ್ಟ ಕಟ್ಟಲು ಸರ್ವಸಿದ್ಧತೆಗಳು ನಡೆದಿವೆ. ಚೆನ್ನೈನಲ್ಲಿ ನಾಳೆ ಪಕ್ಷದ ಶಾಸಕರ ಸಭೆ ನಡೆಯಲಿದ್ದು, ಶಶಿಕಲಾ ಅವರನ್ನು ಒಮ್ಮತದಿಂದ ಆಯ್ಕೆ ಮಾಡುವ ಸಾಧ್ಯತೆ ಬಹುತೇಕ ಖಚಿತವಾಗಿದೆ.. ನಾಡಿದ್ದು ಸೋಮವಾರ ಅವರು ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ ಎಂದೂ ಹೇಳಲಾಗುತ್ತಿದೆ.

ಶಶಿಕಲಾ ನಾಳೆ ಎಐಎಡಿಎಂಕೆ ಶಾಸಕರ ಮಹತ್ವದ ಸಭೆ ಕರೆದಿದ್ದು, ಭಾರೀ ಕುತೂಹಲ ಕೆರಳಿಸಿದೆ. ಈ ಸಭೆಯಲ್ಲಿ ಶಶಿಕಲಾ ನಟರಾಜನ್ ಅವರನ್ನು ಮುಖ್ಯಮಂತ್ರಿಯಾಗಿ ಆಯ್ಕೆ ಮಾಡುವ ನಿರ್ಧಾರ ಕೈಗೊಂಡರೆ, ಸೋಮವಾರ ಅವರು ಪದಗ್ರಹಣ ಮಾಡಲಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.   ಈ ಹಠಾತ್ ಬೆಳವಣಿಗೆಗೆ ನಿಖರ ಕಾರಣಗಳು ತಿಳಿದುಬಂದಿಲ್ಲವಾದರೂ, ಜಯಲಲಿತಾ ಅವರ ಸೊಸೆ (ಸೋದರನ ಮಗಳು) ದೀಪಾ ಜಯಕುಮಾರ್ ರಾಜಕೀಯ ಪ್ರವೇಶವು ತಮಿಳುನಾಡಿನ ಒಂದು ಗುಂಪಿನ ಮೇಲೆ ಭಾರೀ ಪ್ರಭಾವ ಬೀರುವ ಸಾಧ್ಯತೆ ಇದ್ದು, ಆಕೆಯ ವರ್ಚಸ್ಸಿಗೆ ಈಗಿನಿಂದಲೇ ಕಡಿವಾಣ ಹಾಕುವುದು ಈ ವಿದ್ಯಮಾನದ ಉದ್ದೇಶವಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಮುಖ್ಯಮಂತ್ರಿ ಓ. ಪನ್ನೀರ್ ಸೆಲ್ವಂ ಸೇರಿದಂತೆ ಬಹುತೇಕ ಸಂಪುಟ ಸಹದ್ಯೋಗಿಗಳು ಶಶಿಕಲಾ ಅವರು ಮುಖ್ಯಮಂತ್ರಿಯಾಗುವುದಕ್ಕೆ ಒಕ್ಕೊರಲ ಸಮ್ಮತಿ ನೀಡಿದ್ದಾರೆ. ಬಹುತೇಕ ಶಾಸಕರು ಹಿಂದಿನಿಂದಲೂ ಈ ಬಗ್ಗೆ ಮನವಿ ಮಾಡುತ್ತಲೇ ಬಂದಿದ್ದರು.   ಸಂಕ್ರಾಂತಿ ಸಂದರ್ಭದಲ್ಲೇ ಶಶಿಕಲಾ ಸಿಎಂ ಆಗಬೇಕಿತ್ತು. ಆದರೆ ರಾಜ್ಯವ್ಯಾಪಿ ಭುಗಿಲೆದ್ದ ಜಲ್ಲಿಕಟ್ಟು ಪ್ರತಿಭಟನೆಯಿಂದಾಗಿ ಅ ಯೋಜನೆ ಮುಂದೂಡಲಾಗಿತ್ತು. ಪಕ್ಷದ ಸಾರಥ್ಯ ವಹಿಸುವ ಮೂಲಕ ಈಗಾಗಲೇ ತಮ್ಮ ಪ್ರಾಬಲ್ಯದ ವರ್ಚಸ್ಸನ್ನು ಸಾಬೀತು ಮಾಡಿರುವ ಅವರು ಮುಖ್ಯಮಂತ್ರಿ ಪಟ್ಟಕ್ಕೇರಲು ಸರ್ವ ಸನ್ನದ್ಧರಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಸೋಮವಾರ ಅತ್ಯಂತ ಪ್ರಶಸ್ತ ದಿನವಾಗಿರುವುದರಿಂದ ಅಂದೇ ಪದಗ್ರಹಣ ಮಾಡುವಂತೆ ಖ್ಯಾತ ಜ್ಯೋತಿಷಿಗಳು ಸಲಹೆ ಮಾಡಿದ್ದಾರೆ. ಅಲ್ಲದೇ ಅದೇ ದಿನ ತಮಿಳುನಾಡಿನ ಎಲ್ಲ ಶಿವ ದೇವಾಲಯಗಳಲ್ಲಿ ಹಾಗೂ ತಿರುವಣ್ಣಾಮಲೈನಲ್ಲಿರುವ ಅರುಣಾಚಲೇಶ್ವರಿ ದೇವಸ್ಥಾನದಲ್ಲಿ ಕುಂಭಾಭಿಷೇಕ, ವಿಶೇಷ ಪೂಜೆಗಳನ್ನು ಹಮ್ಮಿಕೊಳ್ಳಲಾಗಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin