ದುಬೈನಲ್ಲಿ ನಾಡಪ್ರಭು ಕೆಂಪೇಗೌಡ ಅಂತಾರಾಷ್ಟ್ರೀಯ ಉತ್ಸವ

ಈ ಸುದ್ದಿಯನ್ನು ಶೇರ್ ಮಾಡಿ

ದುಬೈ, ಫೆ.4- ವಿಶ್ವ ಒಕ್ಕಲಿಗರ ಮಹಾ ವೇದಿಕೆ ವತಿಯಿಂದ ಇಂದು ದುಬೈನಲ್ಲಿ ನಾಡಪ್ರಭು ಕೆಂಪೇಗೌಡ ಅಂತಾರಾಷ್ಟ್ರೀಯ ಉತ್ಸವ -60 ಕನ್ನಡಿಗರ ಸಂಭ್ರಮವನ್ನು ವಿಜೃಂಭಣೆಯಿಂದ ಆಚರಿಸಿತು. ಇದೇ ವೇಳೆ ಸಾಗರದಾಚೆ ಸಂಕ್ರಾಂತಿ ಎಂಬ ವಿಶಿಷ್ಟ ಕಲಾ ಪ್ರದರ್ಶನ ಎಲ್ಲರನ್ನು ರಂಜಿಸಿತು. ಕನ್ನಡ ನಾಡು, ನುಡಿ ಸಂಸ್ಕøತಿಯನ್ನು ಪ್ರತಿಬಿಂಬಿಸುವ ಉಡುಗೆಯೊಂದಿಗೆ ನೂರಾರು ಮಂದಿ ಕನ್ನಡಿಗರು ಪಾಲ್ಗೊಂಡಿದ್ದು, ವಿಶೇಷವಾಗಿತ್ತು.  ದುಬೈನಲ್ಲಿನ ಕ್ರೌನ್ ಪ್ಲಾಜಾ ಎಸ್‍ಜೆಡ್‍ಆರ್‍ನಲ್ಲಿ ನಡೆದ ಅರ್ಥಪೂರ್ಣ ಕಾರ್ಯಕ್ರಮದಲ್ಲಿ ಆದಿಚುಂಚನಗಿರಿ ಮಹಾಸಂಸ್ಥಾನದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಸೇರಿದಂತೆ ಹಲವು ಗಣ್ಯರು ಪಾಲ್ಗೊಂಡಿದ್ದರು. ಅಮೆರಿಕ ಅಕ್ಕ ಸಂಘಟನೆಯ ಅಮರನಾಥ ಗೌಡ, ಕೊಡಗು ಹಾಗೂ ದಕ್ಷಿಣ ಕನ್ನಡ ಗೌಡ ಸಮಾಜದ ಹರೀಶ್ ಕೋಡಿ, ಡಾ.ಹಳೇಕೋಟೆ ವಿಶ್ವಾಮಿತ್ರ, ಮುನೇಗೌಡ, ಹನುಮಂತಪ್ಪ, ವೆಂಕಟೇಶಮೂರ್ತಿ, ಬೆನ್ ಚಿಕ್ಕಸ್ವಾಮಿ, ಚಂದ್ರ ಆರ್ಯ, ನಾಗರಾಜ್, ನೀರಜ್ ಪಾಟೀಲ್ ಇನ್ನೂ ಹಲವಾರು ಪಾಲ್ಗೊಂಡಿದ್ದರು.
6e496d61-9cc7-4545-8959-3e20824294e5

ಇದೇ ವೇಳೆ ಉದ್ಯಮ ಕ್ಷೇತ್ರದಿಂದ ಅಬುದಾಬಿಯ ಡಾ.ಬಿ.ಆರ್.ಶೆಟ್ಟಿ , ಎಸ್‍ಆರ್‍ಜಿ ಗ್ರೂಪ್ಸ್ ಪ್ರಕಾಶ್ ಶೆಟ್ಟಿ, ಮಾಧ್ಯಮ ಕ್ಷೇತ್ರದಿಂದ ಮಾಜಿ ಶಾಸಕಿ ಹಾಗೂ ಕಸ್ತೂರಿ ವಾಹಿನಿಯ ಅನಿತಾ ಕುಮಾರಸ್ವಾಮಿ, ಅಭಿಮಾನಿ ಸಮೂಹ ವ್ಯವಸ್ಥಾಪಕ ನಿರ್ದೇಶಕ ಹಾಗೂ ಈ ಸಂಜೆಯ ಸಂಪಾದಕರಾದ ಟಿ.ವೆಂಕಟೇಶ್ , ಶಿಕ್ಷಣ ಕ್ಷೇತ್ರದಿಂದ ಮೈಸೂರು ವಿವಿಯ ನಿವೃತ್ತ ಉಪ ಕುಲಪತಿ ಕೆ.ಎಸ್.ರಂಗಪ್ಪ, ರೈತರಿಗೆ ನೀರಾವರಿ ಸೌಲಭ್ಯ ಕಲ್ಪಿಸಿ ಮನೆ ಮಾತಾದ ಆದರ್ಶ ಮೆರೆದ ಚನ್ನಪಟ್ಟಣ ಶಾಸಕ ಸಿ.ಪಿ.ಯೋಗೇಶ್ವರ್, ಚಿಕ್ಕಬಳ್ಳಾಪುರದ ಶಾಶ್ವತ ನೀರಾವರಿ ಹೋರಾಟ ಸಮಿತಿಯ ಅಧ್ಯಕ್ಷ ಆರ್.ಆಂಜನೇಯ ಹಾಗೂ ಕೃಷಿ ವಿಜ್ಞಾನಿ ಮೈಸೂರಿನ ಡಾ.ವಸಂತಕುಮಾರ್ ಅವರಿಗೆ ಕೆಂಪೇಗೌಡ ಅಂತಾರಾಷ್ಟ್ರೀಯ ಪುರಸ್ಕಾರವನ್ನು ನೀಡಿ ಸನ್ಮಾನಿಸಲಾಯಿತು.

32c82ef6-168e-4bb3-901c-26e5be243c03

34ced42e-6bc8-4f1c-8cc3-47be89cd6ef4

55ebfee0-690f-4cc6-abb2-647a69c8c538

830dc8f1-842e-41b6-84dc-7bbbec4d07f1

8321a745-0956-49b9-979e-9e633fbc7d23

aac407fa-a950-42a0-9683-450700413bf6

db3869ae-48d1-4ccb-99f5-58b2dd5a7441

 

Facebook Comments

Sri Raghav

Admin