ದುಬೈನಲ್ಲಿ ಭಾರತೀಯನಿಗೆ ಒಲಿದ ಅದೃಷ್ಟ, ಬೆಳಗಾಗುವುದರೊಳಗಿ ಕೋಟ್ಯಾಧಿಪತಿಯಾದ..!

ಈ ಸುದ್ದಿಯನ್ನು ಶೇರ್ ಮಾಡಿ

Ajesh-Padmanabhan

ದುಬೈ, ಫೆ.4– ಸಂಯುಕ್ತ ಅರಬ್ ಗಣರಾಜ್ಯದ (ಯುಎಇ) ಅಂಗಡಿಯಲ್ಲಿ ಕೆಲಸ ಮಾಡುವ ಭಾರತೀಯ ಪ್ರಜೆಯೊಬ್ಬರು ದಿನ ಬೆಳಗಾಗುವುದರೊಳಗೆ ಶ್ರೀಮಂತರಾಗಿದ್ದಾರೆ. ದುಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದ ಅದೃಷ್ಟ ಡ್ರಾನಲ್ಲಿ ಅಜೇಶ್ ಪದ್ಮನಾಭನ್ ಒಂದು ದಶಲಕ್ಷ ಡಾಲರ್ (ಸುಮಾರು 76.73 ಕೋಟಿ ರೂ.ಗಳು) ಬಹುಮಾನ ಗಳಿಸಿದ್ದಾರೆ.
ಪದ್ಮನಾಭನ್ ಶಾರ್ಜಾದಲ್ಲಿ ಫೆಡರಲ್ ವಿದ್ಯುತ್ ಮತ್ತು ಜಲ ಪ್ರಾಧಿಕಾರದ ಮಳಿಗೆಯೊಂದರಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ದುಬೈ ವಿಮಾನ ನಿಲ್ದಾಣದಲ್ಲಿ ಮಿಲೇನಿಯರ್ ಪ್ರಮೋಷನ್ ಲಕ್ಕಿ ಡ್ರಾನಲ್ಲಿ ಆಗಾಗ ಭಾಗವಹಿಸುತ್ತಿದ್ದರು. ಅವರು ಆನ್‍ಲೈನ್‍ನಲ್ಲಿ ಅದೃಷ್ಟ ಡ್ರಾದ ಟಿಕೆಟ್ ಖರೀದಿಸಿದ್ದರು ಎಂದು ಖಲೀಜ್ ಟೈಮ್ಸ್ ವರದಿ ಮಾಡಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin