ಶಾಂತಿಯುತ ಮತದಾನ : ಪಂಜಾಬ್’ನಲ್ಲಿ 70%, ಗೋವಾದಲ್ಲಿ 83%ರಷ್ಟು ಹಕ್ಕು ಚಲಾವಣೆ

ಈ ಸುದ್ದಿಯನ್ನು ಶೇರ್ ಮಾಡಿ

Punjab-Votong-01

ಚಂಡಿಗಢ/ಪಣಜಿ/ನವದೆಹಲಿ, ಫೆ.4-ನೋಟು ಅಮಾನ್ಯ ಕ್ರಮದ ಬಳಿಕ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಜನಪ್ರಿಯತೆಯ ಅಳತೆಗೋಲು ಎಂದೇ ಬಿಂಬಿತವಾಗಿರುವ ಪಂಚರಾಜ್ಯಗಳ ವಿಧಾನಸಭೆ ಚುನಾವಣೆಯ ಮೊದಲ ಹಂತವಾಗಿ, ಪಂಜಾಬ್ ಮತ್ತು ಗೋವಾದಲ್ಲಿ ಇಂದು ಬಿಗಿಭದ್ರತೆಯೊಂದಿಗೆ ಮನದಾನ ನಡೆಯಿತು. ಸಣ್ಣಪುಟ್ಟ ಅಹಿತಕರ ಘಟನೆಗಳನ್ನು ಹೊರತುಪಡಿಸಿದಂತೆ ಪಂಜಾಬ್‍ನ 117 ಹಾಗೂ ಗೋವಾದ 40 ವಿಧಾನಸಭಾ ಕ್ಷೇತ್ರಗಳಲ್ಲಿ ನಡೆದ ಮತದಾನ ಬಹುತೇಕ ಶಾಂತಿಯುತವಾಗಿತ್ತು. ಪಂಜಾಬ್’ನಲ್ಲಿ 70%, ಗೋವಾದಲ್ಲಿ 83%ರಷ್ಟು ಹಕ್ಕು ಚಲಾವಣೆ ಆಗಿದೆ. ಈ ಎರಡೂ ರಾಜ್ಯಗಳಲ್ಲಿ ಸರಾಸರಿ ಶೇ.76ರಷ್ಟು ಮತದಾನವಾಗಿದೆ.

ಈ ರಾಜ್ಯಗಳ ಚುನಾವಣೆಗಳು ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಮತ್ತು ಕಾಂಗ್ರೆಸ್‍ಗೆ ಸತ್ವಪರೀಕ್ಷೆಯಾಗಿದೆ. ಜತೆಗೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ನಾಯಕತ್ವದ ಅಮ್ ಆದ್ಮಿ ಪಕ್ಷಕ್ಕೂ (ಎಎಪಿ) ಮಹತ್ವದ್ದು ಎನಿಸಿದೆ. ಪಂಜಾಬ್ ಮತ್ತು ಗೋವಾ ರಾಜ್ಯಗಳಲ್ಲಿ ಕಮಲ ಮತ್ತು ಕೈ ಪಕ್ಷಗಳು ಸಾಂಪ್ರದಾಯಿಕ ಎದುರಾಳಿಗಳಾಗಿದ್ದು, ಮೊದಲ ಬಾರಿಗೆ ಅಖಾಡಕ್ಕೆ ಇಳಿದಿರುವ ಅಪ್ ಪ್ರಬಲ ಪ್ರತಿಸ್ಪರ್ಧಿಯಾಗಿರುವುದು ಅಚ್ಚರಿಯ ಬೆಳವಣಿಗೆಯಾಗಿದೆ.

ಈ ಎರಡೂ ರಾಜ್ಯಗಳಲ್ಲಿ ಬಿಜೆಪಿ ಅಧಿಕಾರದಲ್ಲಿದೆ. ಪಂಜಾಬ್‍ನಲ್ಲಿ ಕಳೆದೊಂದು ದಶಕದಿಂದ ಅಧಿಕಾರದಲ್ಲಿರುವ ಬಿಜೆಪಿ-ಎಸ್‍ಎಡಿ (ಶಿರೋಮಣಿ ಅಕಾಲಿ ದಳ) ಮೈತ್ರಿಕೂಟ ಹಾಗೂ ಅಧಿಕಾರ ಗುದ್ದುಗೆಗೇರಲು ಕಾಂಗ್ರೆಸ್-ಆಪ್ ಹವಣಿಸುತ್ತಿದೆ. ಒಟ್ಟಾರೆ ಭಾರತದ ಗೋಧಿ ನಾಡು ಪಂಚಾಬ್‍ನಲ್ಲಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ.

ಚಂಡಿಗಢ ವರದಿ :

ಪಂಜಾಬ್‍ನಲ್ಲಿ 1,145 ಅಭ್ಯರ್ಥಿಗಳ ಹಣೆಬರಹವನ್ನು 1.98 ಕೋಟಿ ಮತದಾರರು ಇಂದು ನಿರ್ಧರಿಸಲಿದ್ದಾರೆ. ಬೆಳಿಗ್ಗೆ 7 ಗಂಟೆಯಿಂದಲೇ ಸರದಿ ಸಾಲಿನಲ್ಲಿ ನಿಂತು ತಮ್ಮ ಹಕ್ಕು ಚಲಾಯಿಸಿದ ದೃಶ್ಯ ಎಲ್ಲೆಡೆ ಸಾಮಾನ್ಯವಾಗಿತ್ತು. ಅತಿಸೂಕ್ಷ್ಮ ಮತ್ತು ಸೂಕ್ಷ್ಮ ಮತಗಟ್ಟೆಗಳಲ್ಲಿ ಬಂದೋಬಸ್ತ್ ಮಾಡಲಾಗಿತ್ತು.  ಪಂಜಾಬ್‍ನ ಬಂಟಿಡಾದಲ್ಲಿ ಮೂರು ದಿನಗಳ ಹಿಂದೆ ಸಂಭವಿಸಿದ ಕಾರು ಸ್ಫೋಟದಲ್ಲಿ ಐವರು ಮೃತಪಟ್ಟು ಅನೇಕರು ಗಾಯಗೊಂಡಿದ್ದರು. ಈ ಹಿನ್ನೆಲೆಯಲ್ಲಿ ರಾಜ್ಯದ ಸೂಕ್ಷ್ಮ ಸ್ಥಳಗಳು ಮತ್ತು ವಿವಿಧ ಪ್ರದೇಶಗಳಲ್ಲಿ ಭದ್ರತೆಯನ್ನು ಬಿಗಿಗೊಳಿಸಲಾಗಿತ್ತು. ಬಂದೋಬಸ್ತ್‍ಗಾಗಿ 200 ಅರೆ ಮೀಸಲು ಪಡೆ ತುಕಡಿಗಳನ್ನು ನಿಯೋಜಿಸಲಾಗಿತ್ತು ಅಹಿತಕರ ಘಟನೆಗಳು ಮರುಕಳಿಸದಂತೆ ಅಗತ್ಯವಾದ ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗಿತ್ತು. ಮಾಜಿ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಅವರನ್ನು ಕಾಂಗ್ರೆಸ್ ತನ್ನ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಈಗಾಗಲೇ ಘೋಷಿಸಿದೆ.

ಪಂಜಾಬ್‍ನಲ್ಲಿ ಅಪ್ ನಾಲ್ಕು ಲೋಕಸಭಾ ಕ್ಷೇತ್ರಗಳಲ್ಲಿ ತನ್ನ ಸಂಸದರನ್ನು ಹೊಂದಿದ್ದು, 1172 ಸ್ಥಾನಗಳಲ್ಲಿ ಸ್ಪರ್ಧಿಸಿದೆ. ಒಂದು ವೇಳೆ ಚುನಾವಣಾ ರಣರಂಗದಲ್ಲಿ ಆಪ್ ಗೆದ್ದರೆ ಭಗವಂತ ಮಾನ್ ಮುಖ್ಯಮಂತ್ರಿಯಾಗುವ ಸಾಧ್ಯತೆ ಇದೆ.   ಶಿರೋಮಣಿ ಅಕಾಲಿದಳ 94 ಸ್ಥಾನಗಳಲ್ಲಿ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದರೆ, ಅದರ ಮಿತ್ರಪಕ್ಷ ಬಿಜೆಪಿಯಿಂದ 23 ಹುರಿಯಾಳುಗಳು ಕಣದಲ್ಲಿದ್ದಾರೆ. ಕಾಂಗ್ರೆಸ್ ಎಲ್ಲ 117 ಸ್ಥಾನಗಳಲ್ಲೂ ಸ್ಪರ್ಧಿಸಿದೆ. ಬಿಎಸ್‍ಪಿ, ಪಂಜಾಬ್ ಅಪ್ನಾ ಪಾರ್ಟಿ, ಸಿಪಿಐ ಮತ್ತು ಸಿಪಿಐ-ಎಂ ಸಹ ಅಖಾಡದಲ್ಲಿದೆ.

ಮುಖ್ಯಮಂತ್ರಿ ಪ್ರಕಾಶ್ ಸಿಂಗ್ ಬಾದಲ್, ಅವರ ಪುತ್ರ ಉಪ ಮುಖ್ಯಮಂತ್ರಿ ಸುಖ್‍ಬೀರ್ ಸಇಂಗ್ ಬಾದಲ್, ಪಂಜಾಬ್ ಕಾಂಗ್ರೆಸ್ ಅಧ್ಯಕ್ಷ ಅಮರಿಂದರ್ ಸಿಂಗ್, ಮಾಜಿ ಮುಖ್ಯಮಂತ್ರಿ ರಾಜೀಂದರ್ ಕೌರ್ ಭಟ್ಟಲ್, ಭಾರತೀಯ ಯುವ ಕಾಂಗ್ರೆಸ್ ಮುಖ್ಯಸ್ಥ ರಾಜಾ ಅಮರಿಂದರ್ ಸಿಂಗ್ ವಾರಿಂಗ್ ಸೇರಿದಂತೆ ಕೆಲ ಗಣ್ಯರ ಚುನಾವಣಾ ರಣರಂಗದಲ್ಲಿದ್ದಾರೆ.

ಪಣಜಿ ವರದಿ :

ಗೋವಾ ರಾಜ್ಯದ 40 ಸ್ಥಾನಗಳಿಗೆ ಮತದಾನ ನಡೆದು 250 ಉಮೇದುವಾರರ ಭವಿಷ್ಯ ನಿರ್ಧಾರವಾಗಲಿದೆ. 11 ಲಕ್ಷಕ್ಕೂ ಹೆಚ್ಚು ಮತದಾರರ ಮತ ಚಲಾವಣೆಯ ಹಕ್ಕು ಪಡೆದಿದ್ದಾರೆ. 1,642 ಮತಗಟ್ಟೆಗಳಲ್ಲಿ ಬೆಳಿಗ್ಗೆಯಿಂದಲೇ ವ್ಯಾಪಕ ಭದ್ರತೆಯೊಂದಿಗೆ ಬಿರುಸಿನ ಮತದಾನವಾಗಿದೆ. ಕೇಂದ್ರ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಪಣಜಿ ನಗರದ ಮಧ್ಯಭಾಗದಲ್ಲಿರುವ ಮತಗಟ್ಟೆಗೆ ತೆರಳಿ ಬೆಳಿಗ್ಗೆ 7.20ರಲ್ಲಿ ಮತ ಚಲಾಯಿಸಿದರು.

ಐವವರು ಮಾಜಿ ಮುಖ್ಯಮಂತ್ರಿಗಳಾದ ಚರ್ಚಿಲ್ ಅಲೆಮಾವೋ, ಪ್ರತಾಪ್ ಸಿನ್ಹಾ ರಾಣೆ, ರವಿ ನಾಯಕ್, ದಿಗಂಬರ ಕಾಮತ್, ಮತ್ತು ಲ್ಯೂಯಿಜಿನೋ ಫಲೇರೊ ಸೇರಿದಂತೆ ಕೆಲವು ಘಟಾನುಘಟಿಗಳ ರಾಜಕೀಯ ಭವಿಷ್ಯವನ್ನು ಗೋವಾ ಮತದಾರರು ತೀರ್ಮಾನಿಸಲಿದ್ದಾರೆ.  ಕರಾವಳಿ ರಾಜ್ಯ ಗೋವಾದಲ್ಲಿ ಆರ್‍ಎಸ್‍ಎಸ್ ವಿಭಜನೆಯಾಗಿದ್ದು, ಬಂಡಾಯದ ಬಿಸಿಯನ್ನು ಬಿಜೆಪಿ ಎದುರಿಸುತ್ತಿದೆ. ಈ ಬೆಳವಣಿಗೆ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಲಕ್ಷ್ಮೀಕಾಂತ್ ಪರ್ಸೇಕರ್ ಅವರನ್ನು ತನ್ನ ಮುಖ್ಯಮಂತ್ರಿ ಎಂದು ಬಿಜೆಪಿ ಪರಿಗಣಿಸಿಲ್ಲ. ಮನೋಹರ್ ಪರಿಕ್ಕರ್ ಗೋವಾದಲ್ಲಿ ಹೊಂದಿರುವ ಜನಪ್ರಿಯತೆ ಲಾಭಗಳಿಸಲು ಪಕ್ಷವು ಹವಣಿಸುತ್ತಿದೆ. ಪರಿಕ್ಕರ್ ಮುಖ್ಯಮಂತ್ರಿ ಸ್ಥಾನಕೇರುವ ಬಗ್ಗೆ ಬಿಜೆಪಿ ಹಿಂದಿನಿಂದಲೂ ಹೇಳುತ್ತಲೇ ಬಂದಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin